• 8 ಫೆಬ್ರವರಿ 2025

ವಿಧಿಯಾಟ ಬಲ್ಲವರಾರು

 ವಿಧಿಯಾಟ ಬಲ್ಲವರಾರು
Digiqole Ad

ಜಡೆ ಕವನ – ವಿಧಿಯಾಟ ಬಲ್ಲವರಾರು

ಯಾರು ಅರಿಯದಾಟ ವಿಧಿಯಾಟ
ವಿಧಿಯಾಟದ ಮುಂದೆ
ಮುಂದೆ ನೀ ಬಂದರೆ
ಬಂದರೆ ಏನು ಫಲ?
ಫಲವಿಲ್ಲ ಉಳಿವಿಲ್ಲ
ಉಳಿವಿಲ್ಲದ ಆಟಕೆ ‌ಸಿಲುಕಿ
ಸಿಲುಕಿ ಪರಿತಪಿಸುವಾಗ
ಪರಿತಪಿಸುವಾಗ ನೋಡುವವನು
ನೋಡುವನು ಆದರೇನು ಫಲ?
ಫಲವಿಲ್ಲ ಬರೀ ವಿಫಲ
ವಿಫಲವೋ ಫಲವೋ ಎಲ್ಲವೂ
ಎಲ್ಲದರಲ್ಲಿಯೂ ಅವನು ಬರೆದ
ಬರೆದ ಬರಹವಿದು
ಬರಹವಿದು ಹಣೆ ಬರಹವಿದು.

 

ಶೇಖರ.ಎಂ. ದೇಲಂಪಾಡಿ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ