ಹವಾಮಾನ ಇಲಾಖೆಯಿಂದ ದೊಡ್ಡ ಎಚ್ಚರಿಕೆ !
ಹವಾಮಾನ ಇಲಾಖೆಯಿಂದ ದೊಡ್ಡ ಎಚ್ಚರಿಕೆ ಮುಂಗಾರು ಪ್ರವೇಶ ಹತ್ತಿರವಾಗಿರುವ ಕಾರಣ ರಾಜ್ಯದ ಹಲವೆಡೆ ಮುಂದಿನ 4-5 ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು
ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಉತ್ತರ ಒಳನಾಡಿನ ಧಾರವಾಡ, ದಾವಣಗೆರೆ, ಗುಲ್ಬರ್ಗ, ಯಾದಗಿರಿ, ಹಾವೇರಿ, ಬೆಳಗಾವಿಯಲ್ಲಿ ಗಾಳಿಯೊಂದಿಗೆ ಮಳೆಯಾಗಲಿದೆ. ಹಾಸನ, ಕೊಡಗು & ಚಿಕ್ಕಮಗಳೂರಿನಲ್ಲಿ ಯಲ್ಲೋ ಅಲರ್ಟ್ ಮುನ್ಸೂಚನೆ ನೀಡಲಾಗಿದ್ದು, ಗಂಟೆಗೆ 30-40 ಕಿಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.