• 11 ಫೆಬ್ರವರಿ 2025

ಇಲ್ಲಿ ಶಿವಲಿಂಗದ ಕಲ್ಲು ದಿನದಿಂದ ದಿನಕ್ಕೆ ಬೆಳೆಯುತ್ತದೆ!

 ಇಲ್ಲಿ ಶಿವಲಿಂಗದ ಕಲ್ಲು ದಿನದಿಂದ ದಿನಕ್ಕೆ ಬೆಳೆಯುತ್ತದೆ!
Digiqole Ad

ಇಲ್ಲಿ ಶಿವಲಿಂಗದ ಕಲ್ಲು ದಿನದಿಂದ ದಿನಕ್ಕೆ ಬೆಳೆಯುತ್ತದೆ!:ಪ್ರತಿಯೊಂದು ದೇವಾಲಯದ ಶಿಲೆಗಳೂ ಒಂದೊಂದು ಕಥೆಯನ್ನು ಹೇಳುತ್ತವೆ. ಈ ಪಟ್ಟಿಯಲ್ಲಿ ಸುಮಾರು ವರ್ಷಗಳ ಇತಿಹಾಸವುಳ್ಳ ಮಾಗಡಿ ತಾಲೂಕಿನ ಸಿದ್ದರಾಮೇಶ್ವರ ದೇವಸ್ಥಾನವೂ ಕೂಡ ಸೇರಿದೆ. ರಾಮದೇವರ ಬೆಟ್ಟದ ಬಳಿ ಈ ಸಿದ್ದರಾಮೇಶ್ವರ ದೇವಸ್ಥಾನವಿದ್ದು, ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಂದ ಪ್ರತಿಷ್ಠಾಪಿಸಿದ. ಶಿವಲಿಂಗ ಇಲ್ಲಿದೆ. ಮಾಗಡಿ ತಾಲೂಕಿನ ವಿರುಪಾಪುರದಲ್ಲಿರುವ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದದ ಇತಿಹಾಸ, ವಿಶೇಷತೆ, ಮಹಿಮೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಇತಿಹಾಸ ಮತ್ತು ವಿಶೇಷತೆ :

ಶಿವಲಿಂಗತೇತ್ರಾಯುಗದಲ್ಲಿ ಶ್ರೀರಾಮಚಂದ್ರನು ವನವಾಸದಲ್ಲಿರುವಾಗ ಅಜ್ಞಾತವಾಸದಲ್ಲಿ ಪುಣ್ಯವಾದ ಕೆಲಸಗಳನ್ನು ಮಾಡಬೇಕಿರುತ್ತದೆ, ಅಂದರೆ ದೇವಾಲಯಗಳನ್ನು, ಮಠ ಮಂದಿರಗಳನ್ನು, ಗುಡಿ ಗೋಪುರಗಳನ್ನು, ಆಲಯ ಮತ್ತು ವೃಕ್ಷಗಳನ್ನು ಬೆಳೆಸಬೇಕಿರುತ್ತದೆ. ಆ ಸಮಯದಲ್ಲಿ ಪ್ರತಿನಿತ್ಯ ಶ್ರೀರಾಮಚಂದ್ರನು ತ್ರಿಕಾಲ ಪೂಜೆಗಳನ್ನು ಮಾಡುತ್ತಿರುತ್ತಾನೆ, ಸಂದ್ಯಾವಂದನೆ ಮಾಡಲು ಶ್ರೀರಾಮನಿಗೆ ಮೂರ್ತಿ ಇರುವುದಿಲ್ಲ ಹಾಗಾಗಿ ನೆಚ್ಚಿನ ಬಂಟ ಆಂಜನೇಯನಿಗೆ ದಕ್ಷಿಣ ಕಾಶಿಗೆ ಹೋಗಿ ಲಿಂಗು ತರಲು ಹೇಳುತ್ತಾನೆ. ಆದರೆ ಆಂಜನೇಯನು ನಿಗರ್ಮಿಸುವುದು ತಡವಾಗುತ್ತದೆ ಆಗ ರಾಮನು ರಾಮನು ಅಲ್ಲೇ ಇದ್ದ ಮರಳಿನ ರಾಶಿಯಲ್ಲಿ ಲಿಂಗ ಮಾಡಿ ಪೂಜೆಯನ್ನು ಸಲ್ಲಿಸಲು ಆಲೋಚಿಸುತ್ತಾನೆ. ಆದರೆ ಸಾಕ್ಷಾತ್ ಶಿವನೇ ಮರಳಿನಿಂದ ಉದ್ಭವವಾಗುತ್ತದೆ, ಆಗ ಶ್ರೀರಾಮನು ಪ್ರಾಣ ಪ್ರತಿಷ್ಠಾಪನೆಯನ್ನು ಮಾಡುತ್ತಾನೆ. ಈ ಸನ್ನಿವೇಶವನ್ನು ತನ್ನ ದಿವ್ಯದೃಷ್ಟಿಯಿಂದ ಕಂಡ ಆಂಜನೇಯನು ಕೋಪಗೊಂಡು ಲಿಂಗುವನ್ನು ಆವರಣದಲ್ಲಿಟ್ಟು, ಮರಳಿನಲ್ಲಿ ಉದ್ಭವವಾದ ಶಿವಲಿಂಗುವಿಗೆ ತನ್ನ ಬಾಲದಿಂದ ತೆಗೆದು ಹಾಕಲು ಮುಂದಾಗುತ್ತಾನೆ. ಆಗ ತಾಯಿ ಪಾರ್ವತಿಯು ಉದ್ಭವಗೊಂಡು ತನ್ನ ಪತಿದೇವರನ್ನು ತಬ್ಬಿ ನಿಂತು ಆಂಜನೇಯನಿಗೆ ಒಂದು ವರವನ್ನು ನೀಡುತ್ತಾರೆ. ಆ ವರ ಏನಂದರೆ ಪ್ರಪ್ರಥಮವಾಗಿ ಆಂಜನೇಯ ಸ್ವಾಮಿ ತಂದ ಕಾಶಿ ಲಿಂಗಕ್ಕೆ ನಮಸ್ಕರಿಸಿ ನಂತರ ಸಿದ್ದರಾಮೇಶ್ವರನನ್ನು ದರ್ಶನ ಮಾಡಬೇಕು ಎಂದು ಹೇಳುತ್ತಾರೆ, ಅದಕ್ಕೆ ಮಾರುತಿ ಸ್ವಾಮಿಯು ಒಪ್ಪಿಗೆ ಸೂಚಿಸುತ್ತಾನೆ. ಹಾಗಾಗಿ ಭಕ್ತಾದಿಗಳು ಮೊದಲು ಕಾಶಿ ಲಿಂಗಕ್ಕೆ ನಮಸ್ಕರಿಸಿ ನಂತದ ಸಿದ್ದರಾಮೇಶ್ವರನ ದೇವರ ದರ್ಶನ ಪಡೆಯುತ್ತಾರೆ. ಸಿದ್ದರಾಮೇಶ್ವರನ ಸನ್ನಿಧಿಯಲ್ಲಿರುವ ವೃದ್ಧಿ ಗಣಪನನ್ನು ಹರಕೆ ಬಸವಣ್ಣ ಎಂದೂ ಕರೆಯುತ್ತಾರೆ. ನೀವು ಮನಸ್ಸಿನಲ್ಲಿ ಏನಾದರು ಅಂದುಕೊಂಡು ಆ ಬಸವಣ್ಣನ ಮೂರ್ತಿ ಎತ್ತಿ ಕೈಲಿ ಹಿಡಿದಾದ ಸಲೀಸಾಗಿ ಬಂದರೆ ನಿಮ್ಮ ಹರಕೆ ಈಡೇರುತ್ತದೆ, ಆಕಸ್ಮಾತ್ ಆ ಕಲ್ಲು ಭಾರವಾದರೆ ಹರಕೆ ನಿಧಾನವಾಗುತ್ತದೆ ಎಂದರ್ಥ.

ಈ ದೇವಾಲಯದಲ್ಲಿ ವೃದ್ಧಿ ಬಸವ, ನಂದಿಗಳು, ಇಲ್ಲಿರುವ ಶಿವಲಿಂಗು ದಿನದಿಂದ ದಿನಕ್ಕೆ ಕಲ್ಲು ಬೆಳೆಯುತ್ತಲಿದೆ ಮತ್ತು ಶಿವಲಿಂಗುವಿನ ಮುಂದಿರುವ ನಂದಿಯು ತಲೆ ಬಗ್ಗಿಸಿ ಭೂಮಿಯನ್ನು ನೋಡುವ ಆಕಾರದಲ್ಲಿದೆ. ಹಾಗಾಗಿ ಈ ನಂದಿ ಬಹಳ ಶಕ್ತಿಯುತವಾದದ್ದು ಎಂದು ಹೇಳಲಾಗುತ್ತದೆ.

ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಮಹಿಮೆ :

ವಿರುಪಾಪುರ ಶ್ರೀ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಭಕ್ತಾದಿಗಳು ಉದ್ಯೋಗ ಬೇಕಾದ್ರೆ, ಕೆಲಸದಲ್ಲಿ ಎಲ್ಲಾದರು ಪೋಸ್ಟಿಂಗ್ ಬೇಕಿದ್ದರೆ, ಸಂತಾನ ಭಾಗ್ಯದ ಹರಕೆ, ವಿದೇಶಕ್ಕೆ ಅಧ್ಯಯನಕ್ಕೆ ತೆರಳಲು ಮತ್ತು ಬುದ್ದಿಶಕ್ತಿ ಹೆಚ್ಚಿಸಿಕೊಳ್ಳುವ ಬೇಡಿಕೆಗಳನ್ನಿಡಲು ಆಗಮಿಸುವುದು ಇಲ್ಲಿನ ದೇವಾಲಯದ ಮಹಿಮೆಯನ್ನು ತೋರುತ್ತದೆ.

ಶ್ರೀ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಸಮಯ :ವಿರುಪಾಪುರ ಶ್ರೀ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಭಾನುವಾರ, ಸೋಮವಾರ, ಹಬ್ಬ ದಿನಗಳು, ರಜಾ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸುತ್ತಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ