• 20 ಮಾರ್ಚ್ 2025

ಇಂದು ಸಾವರ್ಕರ್ ಜನ್ಮ ದಿನ..ಅವರ ಬಗ್ಗೆ ಒಂದಿಷ್ಟು.

 ಇಂದು ಸಾವರ್ಕರ್ ಜನ್ಮ ದಿನ..ಅವರ ಬಗ್ಗೆ ಒಂದಿಷ್ಟು.
Digiqole Ad

ಇಂದು ಸಾವರ್ಕರ್ ಜನ್ಮ ದಿನ..ಅವರ ಬಗ್ಗೆ ಒಂದಿಷ್ಟು.ವಿನಾಯಕ ದಾಮೋದರ್ ಸಾವರ್ಕರ್ ಈ ಹೆಸರು ಕೇಳಿದರೆ ಈಗಲೂ ಯುವಕರು ರೋಮಾಂಚನಗೊಳ್ಳುತ್ತಾರೆ. ತಮ್ಮ ಜೀವನವನ್ನು ಸ್ವಾತಂತ್ರಕ್ಕಾಗಿ ಮುಡಿಪಾಗಿಟ್ಟ ಮಹಾನ್‌ ನಾಯಕ. ಸ್ವಾತಂತ್ರ್ಯ ಹೋರಾಟ, ಹಿಂದುತ್ವದ ಬಗ್ಗೆ ಇವರು ತೆಗೆದುಕೊಂಡ ನಿಲುವುಗಳು ಈಗಲೂ ಯುವಕರಿಗೆ ಸ್ಪೂರ್ತಿದಾಯಕ.

ಸಾವರ್ಕರ್ ವಿನಾಯಕ ದಾಮೋದರ್‌ ಸಾವರ್ಕರ್ ಮಹಾನ್‌ ವಾಗ್ಮಿಯಾಗಿದ್ದರು. ವಿವಿಧ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಇದಲ್ಲದೇ ಇವರು ಅನೇಕ ಪುಸ್ತಕಗಳನ್ನು ಕೂಡಾ ಬರೆದಿದ್ದಾರೆ. ಅದರಲ್ಲಿ ಇವರ ‘ನನ್ನ ಜೀವಾವಧಿ ಶಿಕ್ಷೆ’, ಹಾಗೂ ‘1857-ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಕೃತಿಗಳು ಅತಿಹೆಚ್ಚು ಪ್ರಸಿದ್ದಿ ಪಡೆದಿವೆ.

ಇಂದು ಸಾವರ್ಕರ್ ಜನ್ಮ ದಿನ..

ವೀರ್ ಸಾವರ್ಕರ್ ಮೇ 28-1883ರಲ್ಲಿ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಭಾಗ್ರೂರ್‌ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ದಾಮೋದರ್ ಪಂತ್, ತಾಯಿ ರಾಧಾಬಾಯಿ. ಇವರಿಗೆ ನಾಲ್ವರು ಸಹೋದರ, ಸಹೋದರಿಯರು. ವಿರ್‌ ಸಾವರ್ಕರ್‌ ತಮ್ಮ ಆರಂಭಿಕ ಶಿಕ್ಷಣವನ್ನು ನಾಸಿಕ್‌ನಲ್ಲಿ ಪಡೆದರು.

ಬಾಲ್ಯದಲ್ಲಿ ಹೆಚ್ಚು ಓದುವ ಅಭ್ಯಾಸ ರೂಡಿಸಿಕೊಂಡಿದ್ದ ಇವರು, ಆ ಸಮಯದಲ್ಲಿ ಬಹಳ ಪ್ರಚಲಿತ ಇದ್ದ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್‌ ಅವರ ಕೇಸರಿ ಪತ್ರಿಕೆಯನ್ನು ಓದುತ್ತಿದ್ದರು. ಕೇಸರಿ ಪತ್ರಿಕೆ ಬರಹಗಳಿಂದ ಬಹಳ ಪ್ರಭಾವಿತರಾಗಿದ್ದರು.

ಸಾವರ್ಕರ್ ತಮ್ಮ ಒಂಭತ್ತನೆಯ ವಯಸ್ಸಿನಲ್ಲಿ ಸಾವರ್ಕರ್‌ ತಾಯಿಯನ್ನ ಕಳೆದುಕೊಂಡರು. ತಂದೆಯ ಪೋಷಣೆಯಲ್ಲಿ ಬೆಳೆದ ಇವರು, ಬೆಳೆಯುತ್ತಾ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತರಾದರು. ಆದರೆ ತಮ್ಮ 16ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ನಂತರ 1901 ರಲ್ಲಿ ಯಮುನಾಬಾಯಿ ಅವರನ್ನ ವಿವಾಹವಾದರು.

 

1902 ರಲ್ಲಿ ಪುಣೆಯ ಫರ್ಗ್ಯೂಸನ್‌ ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಸೇರಿದರು. ನಂತರ 1906 ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳಿದರು. ಇನ್ನೂ ಕಾನೂನು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮೊದಲ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸಾವರ್ಕರ್ ಪಾತ್ರರಾಗಿದ್ದರು. ಆದರೆ ಬ್ರಿಟಿಷ್‌ ಸರ್ಕಾರಕ್ಕೆ ನಿಷ್ಠಯ ಪ್ರಮಾಣ ವಚನ ಸ್ವೀಕರಿಸಲು ನೀರಾಕರಿಸಿದ್ದಕ್ಕೆ ವಕೀಲ ಬಿರುದು ನೀಡಲಿಲ್ಲ.

ಸಾವರ್ಕರ್ಸಾವರ್ಕರ್‌ ವಿದ್ಯಾರ್ಥಿಯಾಗಿದ್ದಾಗಿನಿಂದಲು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸುತ್ತಿದ್ದರು. ನಂತರ ತಿಲಕ್ರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್‌ನಲ್ಲಿದ್ದಾಗ ಸ್ವತಂತ್ರ ಭಾರತ ಸಮಾಜ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಸಾವರ್ಕರ್‌ ಅವರ ಚಟುವಟಿಕೆಗಳನ್ನು ಗಮನಿಸಿದ ಬ್ರಿಟಿಷ್ ಸರ್ಕಾರ 1910 ರಂದು ಲಂಡನ್‌ನಲ್ಲಿ ಅವರನ್ನು ಬಂಧಿಸಿದರು. ಹಡುಗಿನ ಮೂಲಕ ಸಾವರ್ಕರ್‌ ಅವರನ್ನು ಭಾರತಕ್ಕೆ ಕರೆತರಲಾಯಿತು. ಮೊರ್ಸಿಲ್ಲೆಸ್‌ ಬಂದರಿನಲ್ಲಿ ಹಡಗು ಬಂದು ನಿಂತಾಗ ಸಮುದ್ರಕ್ಕೆ ಹಾರಿದ್ದ ಸಾವರ್ಕರ್‌, ಈಜಿ ದಡ ಸೇರಿದ್ದರು. ನಂತರ ಫ್ರೆಂಚ್‌ ಪೊಲೀಸರಿಗೆ ಶರಣಾಗಿದ್ದರು.

ರಾಷ್ಟ್ರಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಭಾರತವನ್ನು ಪಾಶ್ಚಿಮಾತ್ಯರಿಂದ ಮುಕ್ತಿಗೊಳಿಸಲು ಘೋರಕಲನೀರ ಶಿಕ್ಷೆಯನ್ನು ಅನುಭವಿಸಿದ

ಮಹಾನ್ ಕ್ರಾಂತಿಕಾರಿ, ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್’ ಜಯ೦ತಿಯಯಂದು ಶತಕೋಟಿ ನಮನಗಳು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ