ನೂತನ ಸಂಸತ್ ಭವನದಲ್ಲಿ ಐತಿಹಾಸಿಕ ‘ಸೆಂಗೊಲ್’ ಸ್ಥಾಪಿಸಿದ ಪ್ರಧಾನಿ ಮೋದಿ,
ನೂತನ ಸಂಸತ್ ಕಟ್ಟಡ ಉದ್ಘಾಟಿಸಿದ ಮೋದಿ
ಪ್ರಧಾನಿ ಮೋದಿ ನೂತನ ಸಂಸತ್ ಕಟ್ಟಡವನ್ನು ಈಗಷ್ಟೇ ಉದ್ಘಾಟಿಸಿದ್ದಾರೆ. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಕೂಡ ಸಾಥ್ ನೀಡಿದ್ದರು. ಕಾರ್ಯಕ್ರಮದ ಬಗೆ ನೋಡುವುದಾದರೆ, ಮೊದಲು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಸ್ಪೀಕರ್ ಪೀಠದ ಪಕ್ಕದಲ್ಲಿ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು. ತರುವಾಯ ಸರ್ವ ಧರ್ಮ ಪ್ರಾರ್ಥನೆ ಮಾಡಿ ಕಾರ್ಮಿಕರನ್ನು ಗೌರವಿಸಲಾಯಿತು. ಕೊನೆಯದಾಗಿ ಮೋದಿ ಫಲಕ ತೆರೆಯುವ ಮುಖೇನ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು
ಸಂಸತ್ ಭವನ ಪೂಜೆ ಶೃಂಗೇರಿ ಪುರೋಹಿತರು
ನೂತನ ಸಂಸತ್ ಭವನ ಉದ್ಘಾಟನಾ ಪೂಜಾ ವಿಧಿ-ವಿಧಾನ ನೆರವೇರಿಸಲು ದಕ್ಷಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಪುರೋಹಿತರ ತಂಡ ದೆಹಲಿಗೆ ತೆರಳಿದೆ. ಶ್ರೀ ಮಠದ ಪುರೋಹಿತರಾದ ಸೀತಾರಾಮ ಶರ್ಮಾ, ಲಕ್ಷ್ಮೀಶ ತಂತ್ರಿ, ದೆಹಲಿಯ ಶ್ರೀ ಶಾರದಾ ಪೀಠದ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ಟ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಪುರೋಹಿತರು ಶನಿವಾರ ರಾತ್ರಿ ವಾಸ್ತುಹೋಮ ಹಾಗೂ ವಾಸ್ತುಪೂಜೆ ನೆರವೇರಿಸಿದ್ದು, ಭಾನುವಾರ ಶ್ರೀ ಮಹಾಗಣಪತಿ ಹೋಮ ನಡೆಸಿದರು.
ಹೊಸ ಸಂಸತ್ ಕಟ್ಟಡದ ವಿಶೇಷತೆ-
ನೂತನ ಸಂಸತ್ ಕಟ್ಟಡವು ಪ್ರಮುಖವಾಗಿ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಹೆಸರಿನ ಮೂರು ದ್ವಾರಗಳನ್ನು ಒಳಗೊಂಡಿದೆ. ಇದರಲ್ಲಿ ರತ್ನ ಖಚಿತ ರಾಜದಂಡವನ್ನೂ ಕೂಡ ಇರಿಸಲಾಗುತ್ತದೆ. ಈ ಕಟ್ಟಡದ ಒಟ್ಟು ವೆಚ್ಚ 7862 ಕೋಟಿಯಾಗಿದೆ. ಇದರ ನಿರ್ಮಾಣ ಜವಾಬ್ದಾರಿಯನ್ನು ಅಹಮದಾಬಾದ್ ಮೂಲದ HCP ಡಿಸೈನ್ ಪ್ಲಾನಿಂಗ್ & ಮ್ಯಾನೇಜೆಂಟ್ ಪ್ರೈವೇಟ್ ಲಿಮಿಟೆಡ್ ವಹಿಸಿಕೊಂಡಿತ್ತು. ಕಟ್ಟಡದ ಮೇಲಿನ ರಾಷ್ಟ್ರ ಲಾಂಛನವನ್ನು ಪ್ರಧಾನಮಂತ್ರಿಗಳು 2022ರ ಜು.11ರಂದು ಲೋಕಾರ್ಪಣೆ ಮಾಡಿದ್ದರು.
ಸರ್ವ ಧರ್ಮ ಪ್ರಾರ್ಥನೆಯಲ್ಲಿ ಮೋದಿ ಭಾಗಿ ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಕಟ್ಟಡದಲ್ಲಿ ಸರ್ವ ಧರ್ಮ ಪ್ರಾರ್ಥನೆ ಮಾಡಲಾಗುತ್ತಿದ್ದು, ಪ್ರಧಾನಿ ಮೋದಿ ಕೂಡ ಶ್ರದ್ಧೆಯಿಂದ ಭಾಗಿಯಾಗಿದ್ದಾರೆ. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಕೇಂದ್ರ ಸಂಪುಟದ ಸದಸ್ಯರು ಪ್ರಧಾನ ಮಂತ್ರಿಗಳಿಗೆ ಸಾಥ್ ನೀಡಿದ್ದಾರೆ.
ಮೋದಿಗೆ ರಾಜದಂಡ ಹಸ್ತಾಂತರಿಸಿದ ಮಠಾಧೀಶರು
ತಮಿಳುನಾಡಿನ ವೆಲ್ಲಕುರುಚಿ ಮಹಾ ಸಂಸ್ಥಾನದ ಮಠಾಧೀಶರು ಇಂದು ಪ್ರಧಾನಿ ಮೋದಿ ಅವರಿಗೆ ಅಧಿಕೃತವಾಗಿ ರಾಜದಂಡವನ್ನು ಹಸ್ತಾಂತರಿಸಿದ್ದಾರೆ. ಚಿನ್ನ ಲೇಪಿತವಾಗಿರುವ ಈ ರಾಜದಂಡವನ್ನು ಪ್ರಧಾನ ಮಂತ್ರಿಗಳು ಕೆಲವೇ ಕ್ಷಣಗಳಲ್ಲಿ ಸ್ಪೀಕರ್ ಪೀಠದ ಬದಿಯಲ್ಲಿ ಪ್ರತಿಷ್ಠಾಪಿಸುವ ಮುಖೇನ ನೂತನ ಸಂಸತ್ ಕಟ್ಟಡವನ್ನು ಉದ್ಘಾಟನೆ ಮಾಡಿದರು
#WATCH | PM Modi installs the historic 'Sengol' near the Lok Sabha Speaker's chair in the new Parliament building pic.twitter.com/Tx8aOEMpYv
— ANI (@ANI) May 28, 2023
ಪ್ರಧಾನಿ ಮೋದಿ ಲೋಕಸಭಾ ಸಚಿವಾಲಯದ ಸ್ಪೀಕ ಪೀಠದ ಪಕ್ಕದಲ್ಲಿ ರಾಜದಂಡವನ್ನು ಪ್ರತಿಷ್ಠಾಪಿಸುವ ಮುಖೇನ ನೂತನ ಸಂಸತ್ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದಾರೆ.