• 20 ಮಾರ್ಚ್ 2025

ಈ ಕಾಡಿಗೆ ಹೋದವರು ಮತ್ತೆ ಬರೋದಿಲ್ಲ: ಸೂಸೈಡ್ ಫಾರೆಸ್ಟ್ ಎಂಬ ಭಯಾನಕ ಕಾಡು

 ಈ ಕಾಡಿಗೆ ಹೋದವರು ಮತ್ತೆ ಬರೋದಿಲ್ಲ: ಸೂಸೈಡ್ ಫಾರೆಸ್ಟ್ ಎಂಬ ಭಯಾನಕ ಕಾಡು
Digiqole Ad

Suicide forest:ಈ ಕಾಡಿಗೆ ಹೋದವರು ಮತ್ತೆ ಬರೋದಿಲ್ಲ, ಸೂಸೈಡ್ ಫಾರೆಸ್ಟ್ ಎಂಬ ಭಯಾನಕ ಕಾಡು.

ಚಕ್ರವ್ಯೂಹದಂತಿರುವ ಈ ಕಾಡಿನೊಳಗೆ ಹೋದರೆ ಜೀವಂತವಾಗಿ ಮರಳುವುದು ತುಂಬಾ ಕಷ್ಟವಂತೆ!

ಈ ಕಾಡಿನ ಹೆಸರೇ `ಸುಸೈಡ್ ಫಾರೆಸ್ಟ್‌’. ಚಕ್ರವ್ಯೂಹದಂತಿರುವ ಈ ಕಾಡಿನಲ್ಲಿ ಅದೆಷ್ಟೋ ಜನ ಜೀವ ಕಳೆದುಕೊಂಡಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಸಿಗುವ ಶವಗಳೇ ಇಲ್ಲಿನ ಭೀಕರತೆಗೆ ಸಾಕ್ಷಿ…ಈ ಕಾಡೆಂದರೆ ಜನ ಹೆದರುತ್ತಾರೆ… ಟ್ರೆಕ್ಕಿಂಗ್‌ಗೆ ಒಂದಷ್ಟು ಜನ ಹೋದರೂ ಬಲು ಎಚ್ಚರಿಕೆಯಿಂದಲೇ ಹೆಜ್ಜೆ ಇಡುತ್ತಾರೆ.

ಕಾರಣ ಪ್ರೇತಾತ್ಮಗಳ ಭಯ…!

Forestಇದು ಜಪಾನಿನ ದಟ್ಟ ಕಾಡೊಂದರ ಭಯಾನಕ ಕತೆ. ಈ ಕಾಡಿಗೆ ಇರುವ ಹೆಸರೇ ಸುಸೈಡ್ ಫಾರೆಸ್ಟ್‌. ಈ ಕಾಡನ್ನು ಪ್ರವೇಶಿಸುವಾಗಲೇ ಒಂದಷ್ಟು ಎಚ್ಚರಿಕೆಯ ಫಲಕಗಳಿವೆ. `ನಿಮ್ಮ ಮಕ್ಕಳು, ಕುಟುಂಬದ ಬಗ್ಗೆ ಗಮನ ಇರಲಿ’ `ನಿಮ್ಮ ಬದುಕು ನಿಮ್ಮ ಹೆತ್ತವರು ಕೊಟ್ಟ ಬಹುದೊಡ್ಡ ಕೊಡುಗೆ’ ಹೀಗೆಲ್ಲಾ ಈ ಫಲಕದಲ್ಲಿ ಬರೆಯಲಾಗಿದೆ. ಇದೇ ಫಲಕಗಳ ಸಂದೇಶವನ್ನು ಓದಿಕೊಂಡೇ ಕಾಡಿನೊಳಗೆ ಕಾಲಿಡಬೇಕಾಗಿದೆ. ಇದು ಅಂತಿಂಥ ಕಾಡಲ್ಲ, ದಟ್ಟ ಕಾನನ. ಈ ಕಾಡಿನ ಹೆಸರು ಅಕಿಗಹರಾ ಅರಣ್ಯ. ಆದರೆ, ಮೂಲ ಹೆಸರಿಗಿಂತ ಹೆಚ್ಚಾಗಿ ಇದು ಗುರುತಿಸಿಕೊಂಡಿದ್ದೇ ಸುಸೈಡ್ ಫಾರೆಸ್ಟ್‌ ಎಂದು…! ಟೋಕಿಯೋದಿಂದ ಎರಡು ಗಂಟೆ ಪ್ರಯಾಣಿಸಿದ ಈ ಸುಂದರವಾದ ಕಾಡು ಕಾಣ ಸಿಗುತ್ತದೆ. ವಿಶ್ವದಲ್ಲೇ ಅತೀ ಹೆಚ್ಚು ಆತ್ಮಹತ್ಯೆ ನಡೆಯುವ ಎರಡನೇ ಕಾಡು ಇದಂತೆ…!

ಹೋಗುವುದು ಸುಲಭ, ಬರುವುದು ಕಷ್ಟ…!

ಈ ಸುಸೈಡ್ ಫಾರೆಸ್ಟ್‌ ಅಥವಾ ಅಕಿಗಹರಾ ಅರಣ್ಯ ಫ್ಯೂಜಿ ಪರ್ವತದ ವಾಯುವ್ಯದಲ್ಲಿದೆ. ಸುಮಾರು 35 ಚದರ ಕಿಲೋ ಮೀಟರ್ ವಿಸ್ತೀರ್ಣದ ಈ ಕಾಡನ್ನು ಹೆಚ್ಚಿನವರು `ಮರಗಳ ಸಮುದ್ರ’ ಎಂದೂ ಕರೆಯುವುದುಂಟು… ಈ ಕಾಡಿನೊಳಗೆ ಪ್ರವೇಶಿಸುವುದು ಬಲು ಸುಲಭ. ಆದರೆ, ಹೊರಗೆ ಬರುವುದೇ ಕಷ್ಟ…! ಅಂತಹ ಚಕ್ರವ್ಯೂಹದಂತಹ ಕಾಡಿದು…! ಸಾಕಷ್ಟು ಸಂಖ್ಯೆಯಲ್ಲಿ ಜನ ಇಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕೆಲವರದ್ದು ಆಕಸ್ಮಿಕ ಸಾವಾದರೆ, ಇನ್ನು ಹಲವರದ್ದು ಆತ್ಮಹತ್ಯೆ. ಸ್ಥಳೀಯರ ಪ್ರಕಾರ ಈ ಕಾಡಿನಲ್ಲಿ ಪ್ರೇತಾತ್ಮಗಳ ಸಂಚಾರ ಇದೆಯಂತೆ…!

ಮೃತದೇಹವನ್ನು ಅಲ್ಲೇ ಬಿಡಬಾರದು…!

Sucideಇಂತಹದ್ದೊಂದು ನಂಬಿಕೆ ಕೂಡಾ ಇದೆ. ಯಾರಾದರೂ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಅಥವಾ ಯಾವುದಾದರೂ ಮೃತದೇಹ ಕಾಡಲ್ಲಿದೆ ಎಂದು ಗೊತ್ತಾದರೆ ತಕ್ಷಣ ಅರಣ್ಯ ಸಿಬ್ಬಂದಿ ಮೃತದೇಹವನ್ನು ಅರಣ್ಯದ ಪಕ್ಕದ ಪೊಲೀಸ್ ಠಾಣೆಯ ವಿಶೇಷ ಕೋಣೆಯಲ್ಲಿ ತಂದು ಇಡುತ್ತಾರೆ. ಯಾಕೆಂದರೆ, ಶವವನ್ನು ಕಾಡಿನಲ್ಲೇ ಸ್ವಲ್ಪ ಹೊತ್ತೂ ಬಿಡಬಾರದು ಎಂಬ ನಂಬಿಕೆಯೇ ಇದಕ್ಕೆ ಕಾರಣ. ಶವವನ್ನು ಕಾಡಿನಲ್ಲಿಯೇ ಬಿಟ್ಟು ಬಂದರೆ ಆತ್ಮಹತ್ಯೆಗೆ ಶರಣಾದವರು ಅಥವಾ ಆಕಸ್ಮಿಕವಾಗಿ ಸಾವಿಗೊಳಗಾದವರು ಪ್ರೇತಾತ್ಮವಾಗಿ ಅಳುತ್ತಾ, ವಿಚಿತ್ರ ಶಬ್ದ ಮಾಡುತ್ತಾ ಕಾಡಿನಲ್ಲೇ ಸುತ್ತಾಡುತ್ತಿರುತ್ತಾರೆ ಎಂಬ ನಂಬಿಕೆ ಇಲ್ಲಿನದ್ದು. ಇದೇ ಕಾರಣಕ್ಕೆ ಯಾರೂ ಕಾಡಿನಲ್ಲಿ ಶವವನ್ನು ಬಿಟ್ಟು ಹೋಗುವುದೇ ಇಲ್ಲ…! ಈ ಎಲ್ಲಾ ಕಾರಣದಿಂದ ಸ್ಥಳೀಯ ಜನರಂತೂ ಈ ಕಾಡಿನೊಳಗೆ ಬರುವುದಕ್ಕೆ ತುಂಬಾ ಹೆದರುತ್ತಾರೆ.ಈ ಕಾಡಿನ ಬಗ್ಗೆ ಎಷ್ಟೇ ಭಯಾನಕ ಕತೆಗಳಿದ್ದರೂ ಇಲ್ಲಿಗೆ ಟ್ರೆಕ್ಕಿಂಗ್‌ಗೆ ಬರುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಹೀಗೆ ಬಂದವರು ಸಾಗುವ ದಾರಿಯ ಗುರುತು ಹಿಡಿಯುವ ಸಲುವಾಗಿ ಮರಗಳಿಗೆ ಟೇಪ್ ಸುತ್ತಿಕೊಂಡು ಹೋಗುತ್ತಾರೆ. ದಟ್ಟ ಕಾನನ ಆಗಿದ್ದರಿಂದ ಸಹಜವಾಗಿಯೇ ಮೊಬೈಲ್ ಫೋನ್ ಕಾರ್ಯ ನಿರ್ವಹಿಸುವುದಿಲ್ಲ. ಇದು ಕೂಡಾ ಈ ಕಾಡಿನೊಳಗೆ ಪ್ರವೇಶಿಸಿ ದಾರಿ ತಪ್ಪಿದವರು ಮತ್ತೆ ಹೊರಗೆ ಬರಲಾರದೆ ಕಷ್ಟಪಡುವುದಕ್ಕೆ ಕಾರಣ. ಹೀಗೆ ಕಷ್ಟಪಟ್ಟವರು ಯಾವುದಾದರೂ ಅಪಾಯಕ್ಕೆ ಸಿಲುಕಿ ಜೀವ ಕಳೆದುಕೊಂಡದ್ದೂ ಇದೆ. ಹೀಗಾಗಿಯೇ, ಇಲ್ಲಿ ಶವಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುವುದು… ಇದು ಸಹಜವಾಗಿಯೇ ದೆವ್ವ ಭೂತದ ಕತೆಯನ್ನು ಹುಟ್ಟು ಹಾಕಿರಬಹುದು… ಇದೇ ಕತೆ ಜನರಿಂದ ಜನರಿಗೆ ಹರಡಿ ಈಗ ಅದಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿರಬಹುದು… ಅದೂ ಅಲ್ಲದೆ, ಈ ಆತ್ಮಹತ್ಯೆಗಳ ಸಂಖ್ಯೆ ಮಾರ್ಚಿನಲ್ಲಿ ಜಾಸ್ತಿ ಇರುತ್ತದೆ. ಅಂದರೆ, ಜಪಾನಿನಲ್ಲಿ ಮಾರ್ಚ್‌ ಹಣಕಾಸು ವರ್ಷದ ಅಂತ್ಯ ಅಂದರೆ ಫೈನಾನ್ಶಿಯಲ್ ಇಯರ್ ಎಂಡ್ ಆಗಿರುವುದರಿಂದ ಈ ಸಂದರ್ಭದಲ್ಲಿ ಇಲ್ಲಿಗೆ ಬಂದು ಜೀವ ಕಳೆದುಕೊಳ್ಳುವವರ ಸಂಖ್ಯೆ ಕೊಂಚ ಜಾಸ್ತಿಯೇ ಇರುತ್ತದೆ…! ಹೀಗೆ ತನ್ನೊಡಲಿನಲ್ಲಿ ಅನೇಕ ರಹಸ್ಯವನ್ನು ಇಟ್ಟುಕೊಂಡಿದೆ ಈ ಕಾಡು… ಇದೇ ಕಾರಣಕ್ಕೆ ಈ ಕಾಡು ಅಚ್ಚರಿ ಮತ್ತು ಕೌತುಕದ ತಾಣವಾಗಿದೆ…

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ