• 2 ನವೆಂಬರ್ 2024

ಮಣ್ಣಿನ ಹರಕೆಯ ಏಕೈಕ ದೇವಸ್ಥಾನ!ಸೊಪ್ಪು ಕಡಿಯುವಾಗ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿತಂತೆ

 ಮಣ್ಣಿನ ಹರಕೆಯ ಏಕೈಕ ದೇವಸ್ಥಾನ!ಸೊಪ್ಪು ಕಡಿಯುವಾಗ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿತಂತೆ
Digiqole Ad

ಮಣ್ಣಿನ ಹರಕೆಯ ಏಕೈಕ ದೇವಸ್ಥಾನ:

ಮಣ್ಣನ್ನು ದೇವರು ಎಂದು ಪೂಜಿಸುವವರು ನಾವು.. ಸಕಲ ದೈವ ದೇವರು ನೆಲಸಿಹ ಈ ನಾಡು ನಮ್ಮದು.. ನಾವು ನಮ್ಮ ಕಷ್ಟ ನಷ್ಟ ಸಂಕಷ್ಟಗಳಿಗೆ ದೇವರಿಗೆ ಹರಕೆ ಹೊತ್ತುಕೊಳ್ಳೋದು ಸಾಮಾನ್ಯ ..

ನಮ್ಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಿಶೇಷವಾದ ದೇವಾಲಯವಿದೆ ಅದೂ ಮಣ್ಣಿನ ಆಕೃತಿಗಳನ್ನು ನಾವು ಇಲ್ಲಿ ಹರಕೆಯ ರೂಪದಲ್ಲಿ ಸಲ್ಲಿಸುವ ಕ್ಷೇತ್ರ..

 

ದೇವಸ್ಥಾನಅದುವೇ ಶ್ರೀ ಸದಾಶಿವರುದ್ರ ದೇವಸ್ಥಾನ ಸುರ್ಯ.. ಇದು ಬೆಳ್ತಂಗಡಿ ತಾಲುಕಿನಲ್ಲಿದೆ.. ಇಲ್ಲಿಗೆ ನಮಗೆ ಯಾವುದೇ ಕಷ್ಟ ಬಂದರೂ : ಉದಾಹರಣೆಗೆ ಮನೆ ಕಟ್ಟುವವರು ಮಣ್ಣಿನ ಮನೆಯ ಆಕೃತಿ, ಕಾಲು ನೋವಿನವರು ಮಣ್ಣಿನ ಕಾಲು, ದನ ಕರು,ನಾಯಿ ಇನ್ನಿತರ ಸಾಕು ಪ್ರಾಣಿಗಳಿಗೆ ಸಮಸ್ಯೆ ಇದ್ದರೆ. ಅಂತದ್ದೇ ಆಕೃತಿಗಳು , ಬ್ಯಾಂಕ್ ಸಾಲ, ನಿರುದ್ಯೋಗ, ಮಕ್ಕಳಿಗೆ, ವಿವಾಹ ಯೋಗ, ಎಲ್ಲದಕ್ಕೂ ಪರಿಹಾರ ಇಲ್ಲಿ ಮಣ್ಣಿನ ಆಕೃತಿಗ ಹರಕೆ ಸಲ್ಲಿಸುವುದರೊಂದಿಗೆ ಪರಿಹಾರ ಸಿಗುತ್ತದೆ..

ಬೆಳ್ತಂಗಡಿಯಿಂದ ಉಜಿರೆಗೆ ಹೋಗಿ ಅಲ್ಲಿಂದಲೂ ಹೋಗಬಹುದು, ಅಥವ ಬೆಳ್ತಂಗಡಿಯಿಂದ. ಲಾಯಿಲ ಎಂಬ ಜಾಗದಿಂದ ಗಡಾಯಿಕಲ್ಲಿನ ಮಾರ್ಗವಾಗಿಯೂ ಈ ಕ್ಷೇತ್ರಕ್ಕೆ ಹೋಗ ಬಹುದು.. ಈ ಮಾರ್ಗವಾಗಿ ಹೋಗುವಾಗ ಗಡಾಯಿ ಕಲ್ಲಿನ ಸೌಂದರ್ಯವನ್ನು ಹತ್ತಿರದಿಂದ ವೀಕ್ಷಿಸುತ್ತಾ ಸಾಗಬಹುದು.. Templeಈ ಕ್ಷೇತ್ರದ ಪಕ್ಕದಲ್ಲಿ. ನಾಗ ಬನವಿದೆ.. ಮತ್ತು ದೇವರು ಸಿಕ್ಕಿದ ಜಾಗವು ಇದೆ .. ಮಧ್ಯಾಹ್ನ ಅನ್ನ ಪ್ರಸಾದವು ಇದೆ.. ಇಲ್ಲಿ ನಾವು ಹೇಳಿದ ಹರಕೆಯ ಫಲ ನಮಿಗೆ ಸಿಕ್ಕಿದರೆ ಮಾತ್ರ ಹರಕೆ ಸಲ್ಲಿಸುವ ಕ್ರಮ.. ಅದಕ್ಕಾಗಿಯೇ ದೇವಸ್ಥಾನದ ಪಕ್ಕದಲ್ಲಿ ಹರಕೆಯ ಮಣ್ಣಿನ ಆಕೃತಿಗಳು ಕೊಡುವ ಕೊಠಡಿಯಿದೆ.. ಇಲ್ಲಿ ನಾವು ಹೇಳಿದ ಹರಕೆಯ ಬಗ್ಗೆ ಹೇಳಿದರೆ. ಅವರು ನಮ್ಮ ಬಗ್ಗೆ ವಿಚಾರಿಸಿ ಅದಕ್ಕೆ ಸಲಹೆ ನೀಡಿ ರಶೀದಿಯೊಂದಿಗೆ ಒಂದು ತಟ್ಟೆಯಲ್ಲಿ ಬೆಳ್ತಿಗೆ ಅಕ್ಕಿಯೊಂದಿಗೆ. ನಾವು ಹೇಳಿದ ಮಣ್ಣಿನ ಆಕೃತಿಗಳನ್ನು. ನೀಡಿ ದೇವಸ್ಥಾನದಲ್ಲಿ ಯಾವ ರೀತಿ ಹೋಗಿ ಅದನ್ನು ಸಲ್ಲಿಸ ಬೇಕೆಂದು ಮಾರ್ಗದರ್ಶನ ನೀಡುತ್ತಾರೆ.. ಸುತ್ತ ಮುತ್ತ ವನ ಪ್ರಕೃತಿಯ ಮಡಿಲಲ್ಲಿ ಇರುವ ಕ್ಷೇತ್ರಕ್ಕೆ. ನಿಮಗೆ ಬಿಡುವಿದ್ದಾಗ ಭೇಟಿ ನೀಡಿ ಆ ಸದಾಶಿವರುದ್ರನ ಕೃಪೆ ಪಡೆದು ಬನ್ನಿ…ಇಲ್ಲಿದೆ ಸಂಪೂರ್ಣ್ ಇತಿಹಾಸ….

ಕ್ಷೇತ್ರ ಪರಿಚಯ

ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾದ ಸುರ್ಯ ಶ್ರೀ ಸದಾಶಿವ ದೇವಸ್ಥಾನವು ಸುರ್ಯ ಎಂಬ ಹಳ್ಳಿಯಲ್ಲಿರುವ ಕಾರಣ ಇದಕ್ಕೆ ‘ಸುರ್ಯ ದೇವಸ್ಥಾನ’ವೆಂಬ ಹೆಸರು ಬಂದಿದೆ. ‘ಸುರ್ಯ’ ಎಂಬ ಹೆಸರು ಬರಲು ಕಾರಣವಾದ ಒಂದು ದಂತಕಥೆ ಇದೆ. ಹಿಂದೆ ಒಬ್ಬಾಕೆ ತನ್ನ ಮಗ ಸುರೆಯನ ಜೊತೆ ಈ ಪ್ರದೇಶದಲ್ಲಿದ್ದ ಕಾಡಿಗೆ ಸೊಪ್ಪು ತರಲೆಂದು ಹೋಗಿದ್ದಳಂತೆ. ಸೊಪ್ಪು ಕಡಿಯುವಾಗ ಸೊಪ್ಪಿನ ನಡುವೆ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿತಂತೆ. ಆಗ ಗಾಬರಿಗೊಂಡ ಆಕೆ ತನ್ನ ಮಗನಿಗೆ “ಓ ಸುರೆಯ” ಎಂದು ಕರೆದಳು ಹಾಗೂ ಆ ಘಟನೆಯ ನಂತರ ಈ ಕ್ಷೇತ್ರಕ್ಕೆ ಸುರೆಯ, ಸುರಿಯ, ;ಸುರ್ಯ’ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಅದೇ ರೀತಿ ಆಲಿಂಗರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತು ಎಂಬುದು ಪ್ರತೀತಿ.

ದೇವಸ್ತಾನದ ಕೊಳ

ದೇವಸ್ಥಾನ ಉತ್ತರಕ್ಕೆ ೫೦ ಮೀ ದೂರದಲ್ಲಿ ಒಂದು ಕೊಳವಿದೆ. ಸುಮಾರು ೭೦*೮೦ ಅಡಿ ವಿಸ್ತಾರವಿರುವ ಕೊಳವು ೩೫ ಅಡಿ ಆಳವಿದೆ. ಕೊಳದ ಮಧ್ಯೆ ಒಂದು ಮಂಟಪವಿದ್ದು, ಇದು ಮಳೆಗಾಲದಲ್ಲಿ ನೀರಿನಲ್ಲಿ ಮಳುಗಿ ಹೋಗುತ್ತದೆ. ಮಾರ್ಚ್ ಏಪ್ರಿಲ್ ನಲ್ಲಿ ನಡೆಯುವ ವರ್ಷಾವಧಿ ‘ಕೆರೆಕಟ್ಟೆ’ ಉತ್ಸವದ ಸಂದರ್ಭದಲ್ಲಿ ಈ ಮಂಟಪದಲ್ಲಿ ದೇವರಿಗೆ ಕೆರೆ ಕಟ್ಟೆ ಪೂಜೆ ನಡೆಯುತ್ತದೆ. ಈ ದೇವಸ್ಥಾನವನ್ನು ಯಾವಾಗ ನಿರ್ಮಾಣಮಾಡಲಾಯಿತು ಎನ್ನುವುದರ ಬಗ್ಗೆ ನಿಖರಮಾಹಿತಿಯಿಲ್ಲ. ದೇವಸ್ಥಾನದ ಒಳಾಂಗಣದಲ್ಲಿ ಮಂಟಪದಲ್ಲಿರುವ ನಂದಿಯ ವಿಗ್ರಹದ ಪೀಠದಲ್ಲಿ “ಪಿಂಗಲನಾಮ ಸಂವತ್ಸರದ ಮಿಥುನ ಮಾಸ ೧೭ನೇ ರವಿವಾರದೊಲು ಶ್ರೀಮತು ಮಗ ಲಕ್ಷ್ಮಪ್ಪರಸರಾದ ಬಂಗರಾಜ ಒಡೆಯರ ಕಾಲದಲ್ಲಿ ನೂಜಿಯ ಸಂಕು ಅಧಿಕಾರಿಯ ಮಗ ನಾರಾಯಣ ಸೇನ ಭೋಮನು ಸುರಾಯದ ದೇವರ ನನ್ನಿಧಿಯಲ್ಲಿ ಪ್ರತಿಷ್ಠೆಮಾಡಿದ ನಂದಿಕೇಶ್ವರನ್ಉ ನಡೆಸಿದ ಶಂಭುಗ್ರೇದು ಶಭಮಸ್ತು” ಎಂಬುದಾಗಿ ಬರೆಯಲಾಗಿದೆ. ಇದಲ್ಲದೇ ಯಾವುದೇ ಶಾಸನಗಳು ಇಲ್ಲಿ ಲಭ್ಯವಿರುವುದಿಲ್ಲ. ಅನುವಂಶಿಕವಾಗಿ ಸುರ್ಯಗುತ್ತು ಮನೆತನದ ಆಢಳಿತಕ್ಕೆ ಒಳಪಟ್ಟಿರುವ ಸುರ್ಯ ದೇವಸ್ಥಾನಕ್ಕೆ ‘ಅಮೃತಪಡಿ’ ನೈವೇದ್ಯಕ್ಕೆ ಈ ವಂಶಸ್ಥರಿಂದ ಹಿಂದೆ ಜಮೀನನ್ನು ಉಂಬಳಿಯಾಗಿ ಬಿಟ್ಟ ಬಗ್ಗೆ ದಾಖಲೆಗಳೀವೆ.

ಮೂಲ ಕ್ಷೇತ್ರ ಹರಕೆಬನ

ದೇವಸ್ಥಾನದ ಉತ್ತರಕ್ಕೆ ಸುಮಾರು ೧೦೦ ಮೀ. ದೂರದಲ್ಲಿ ಪ್ರಶಾಂತವಾದ ವನರಾಶಿಯ ಮಧ್ಯೆ ಮೇಲಿನ ಘಟನೆ ನಡೆಯಿತೆಂದು ಹೇಳಲಾಗುವ ಪ್ರದೇಶ ಹರಕೆಬನ ಇದೆ. ಈ ಕ್ಷೇತ್ರದ ಮೂಲದ ಬಗ್ಗೆ ಒಂದು ಐತಿಹ್ಯವಿದೆ. ಹಿಂದೆ ಈ ಪ್ರದೇಶದಲ್ಲಿ ಭೃಗು ಮಹರ್ಷಿಯ ಶಿಷ್ಯರೊಬ್ಬರು ತಪಸ್ಸು ಮಾಡುತ್ತಿದ್ದು, ಅವರ ತಪಸ್ಸಿಗೊಲಿದ ಶಿವ ಪಾರ್ವತಿಯರು ಪ್ರತ್ಯಕ್ಷವಾಗಿ ಲಿಂಗ ರೂಪದಲ್ಲಿ ಇಲ್ಲಿ ನೆಲೆಯಾದರು ಎಂಬ ಪ್ರತೀತಿಯಿದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆಗಳು ಹಾಗೂ ಶಿಲಾಪಾದಗಳೂ ಇವೆ. ಮಹರ್ಷಿಗಳ ತಪೋಭೂಮಿಯಾಗಿದ್ದ, ದೇವರೊಲಿದ ಪುಣ್ಯಕ್ಷೇತ್ರ, ಕಾಲಾಂತರದಲ್ಲಿ ಸೊಪ್ಪು ಕಡಿಯುವ ಮಹಿಳೆಯ ಮೂಲಕ ಊರಿನ ಮುಖ್ಯಸ್ಥರ, ಗ್ರಾಮಸ್ಥರ ಗಮನಕ್ಕೆ ಬಂದು, ಇದರ ಸಮೀಪದಲ್ಲಿ ದೇವಾಲಯ ನಿರ್ಮಾಣ ಮಾಡಿದರು ಎಂಬುದು ಕ್ಷೇತ್ರದ ಮೂಲದ ಬಗ್ಗೆ ಇರುವ ಐತಿಹ್ಯ. ಇಂದಿಗೂ ಲಿಂಗ ರೂಪಿ ಶಿಲೆಗಳಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಭಕ್ತರಿಂದ ಸಮರ್ಪಿತವಾದ ಹರಕೆ ಗೊಂಬೆಗಳನ್ನು ಈ ಲಿಂಗಗಳ ಸುತ್ತಲೂ ಜೋಡಿಸಿಡಲಾಗುತ್ತದೆ. ಭಕ್ತಾದಿಗಳಿಗೆ ಹಗಲು ವೇಳೆ ಈ ‘ಹರಕೆ ಬನ’ ಸಂದರ್ಶನಕ್ಕೆ ಅವಕಾಶವಿರುತ್ತದೆ.

Rishab shetty

GOLD FACTS NEWS

  ಸುವಿಚಾರದ ಧಿಕ್ಷೂಚಿ..

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ