ಕಾರಣವಿಲ್ಲದೆ KSRTC ಬಸ್ ಪ್ರಯಾಣ ರದ್ದು! : ಸುಬ್ರಹ್ಮಣ್ಯ
ಸುಬ್ರಹ್ಮಣ್ಯ: ಇಂದು ಸಂಜೆ 4:00ರಿಂದ ಕ.ರಾ.ರ.ಸಾ.ನಿ ಬಸ್ ಗಳು ಏಕಾಏಕಿ ಬಿಡದ ಕಾರಣದಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿದ್ದಾರೆ, ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚಾರಕ್ಕೆ ತೊಡಕಾಗಿದೆ, ಎಂದಿನಂತೆ ಓಡಾಡುವ ಕೆಲವೊಂದು ಬಸ್ ಗಳನ್ನು ರದ್ದುಗೊಳಿಸಿದ್ದಾರೆ.
(ಮೊದಲ ದಿನವೇ 5,71,023 ಮಹಿಳೆಯರ ಸಂಚಾರ)
ಬಸ್್ ನಿಲ್ದಾಣದಲ್ಲಿ ಇದ್ದಂತಹ ಬಸ್ ಗಳು ಮಾತ್ರ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ,ಸರಕಾರದ ಉಚಿತ ಪ್ರಯಾಣದ ಹಿನ್ನೆಲೆಯಾಗಿ ಬಸ್ ಬಿಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಪ್ರಶ್ನಿಸಿದಾಗ ಕ.ರಾ.ರಿ.ಸಾ.ನಿ ಅಧಿಕಾರಿಗಳ ಉತ್ತರ ಮೌನವಾಗಿದೆ.ಎಂದು ಸುಬ್ರಹ್ಮಣ್ಯದ ಸ್ಥಳೀಯರು ತಿಳಿಸಿದರು.