ವಾರ್ತೆಗಳು: news now
ವಾರ್ತೆಗಳು: NEWS NOW
ರೈತ ವಿದ್ಯಾನಿಧಿಯಲ್ಲಿ ಎಷ್ಟಿದೆ ಸ್ಕಾಲರ್‌ಶಿಪ್?
* ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ವಾರ್ಷಿಕ 2000
* ಪಿಯುಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 2500,
ವಿದ್ಯಾರ್ಥಿನಿಯರಿಗೆ 3000
* ಬಿ.ಎ, ಬಿ.ಎಸ್ಸಿ, ಬಿ.ಕಾಂ ಸೇರಿದಂತೆ ಇನ್ನಿತರ ಪದವಿ
ವಿದ್ಯಾರ್ಥಿಗಳಿಗೆ 5000, ವಿದ್ಯಾರ್ಥಿನಿಯರಿಗೆ 5500
* ವೃತ್ತಿಪರ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ *7500,
ವಿದ್ಯಾರ್ಥಿನಿಯರಿಗೆ 8000
* ಸ್ನಾತಕೋತ್ತರ ವಿದ್ಯಾರ್ಥಿಗಳಿ 10,000,
ವಿದ್ಯಾರ್ಥಿನಿಯರಿಗೆ 11,000
ಆಧಾರ್ ಉಚಿತ ಅಪ್ಲೇಟ್- 3 ತಿಂಗಳು ವಿಸ್ತರಣೆ
ಆಧಾರ್ ಉಚಿತ ಅಪ್ಲೇಟ್ ಸೇವೆಯನ್ನು ಮತ್ತೆ 3 ತಿಂಗಳು ವಿಸ್ತರಣೆ ಮಾಡಿ UIDAI ಮಹತ್ವದ ಆದೇಶ ಹೊರಡಿಸಿದೆ. ಜೂನ್ 14ಕ್ಕೆ ಉಚಿತ ಅಪ್ಲೇಟ್ ಸೇವೆ ಕೊನೆಗೊಂಡಿತ್ತು. ಇದೀಗ ಸೆಪ್ಟೆಂಬರ್ 14, 2023 ರವರೆಗೆ ವಿಸ್ತರಿಸಿದೆ. ಹೀಗಾಗಿ, ಆಧಾರ್ ವಿವರಗಳನ್ನು (ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ಬದಲಾವಣೆ) ಉಚಿತವಾಗಿ ಆನ್‌ಲೈನ್‌ನಲ್ಲಿ https://myaadhaar.uidai.gov.in ನವೀಕರಿಸಬಹುದು.
900 ಹಳ್ಳಿಗಳಲ್ಲಿ ಕತ್ತಲು ಕಾರಣ ಗೊತ್ತಾ?
ಬಿಪರ್‌ಜೋಯ್ ಚಂಡಮಾರುತವು ಗುಜರಾತ್‌ನ ಕರಾವಳಿಗೆ ಅಪ್ಪಳಿಸಿದ್ದು, ಅಪಾರ ಹಾನಿಯಾಗಿರುವ ಕುರಿತು ವರದಿಯಾಗಿದೆ. ಗಂಟೆಗೆ 125 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಾಕಷ್ಟು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಚಂಡಮಾರುತದಿಂದಾಗಿ ಸುಮಾರು 25 ಜನರು ಗಾಯಗೊಂಡಿದ್ದಾರೆ. ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಆದರೆ, 23 ಪ್ರಾಣಿಗಳು ಸಾವನ್ನಪ್ಪಿವೆ. 900ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರಿಂದ ಕತ್ತಲು ಆವರಿಸಿದೆ.
ಉಚಿತ ಪ್ರಯಾಣ.. ಬಸ್‌ಗಳು ಫುಲ್ ರಶ್!
ಇಂದು ಮತ್ತು ನಾಳೆ ವೀಕೆಂಡ್ ಆಗಿರುವುದರಿಂದ KSRTC ಬಸ್‌ಗಳು ಫುಲ್ ರಶ್ ಆಗಿವೆ. ಉಚಿತ ಪ್ರಯಾಣ ಹಿನ್ನಲೆ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇನ್ನೂ, ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಹೊರನಾಡು ಕ್ಷೇತ್ರಗಳಿಗೆ ಸಾವಿರಾರು ಮಹಿಳೆಯರು ಆಗಮಿಸುತ್ತಿದ್ದಾರೆ. ಧರ್ಮಸ್ಥಳದಿಂದ ಕುಕ್ಕೆಸುಬ್ರಮಣ್ಯ ತೆರಳುವ ಬಸ್‌ಗಳು ಫುಲ್ ಆಗಿವೆ. ರಾಜ್ಯದ ಇತರೆ ಭಾಗಗಳಲ್ಲೂ ಇದೇ ಸ್ಥಿತಿ ಇದೆ.
ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ
ಕರಾವಳಿಯಲ್ಲಿ ಕೋಮು ದ್ವೇಷಕ್ಕೆ ದುಷ್ಕರ್ಮಿಗಳಿಂದ ಬಲಿಯಾದ ನಾಲ್ವರ ಕುಟುಂಬಗಳಿಗೆ ಸರ್ಕಾರ ತಲಾ 25ಲಕ್ಷ ರೂ. ಪರಿಹಾರ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೀಡಾದ ಮಸೂದ್, ಫಾಝಿಲ್, ಜಲೀಲ್ & ದೀಪಕ್ ರಾವ್ ಕುಟುಂಬಕ್ಕೆ ಸರ್ಕಾರ CM ಪರಿಹಾರ ನಿಧಿಯಿಂದ ಈ ಮೊತ್ತವನ್ನು ಘೋಷಿಸಿದೆ. ಇನ್ನು ಕಳೆದ ವರ್ಷ ಹತ್ಯೆಗೀಡಾಗಿದ್ದ ಪ್ರವೀಣ್ ನೆಟ್ಟಾರು ಕಟುಂಬಕ್ಕೆ BJP ಸರ್ಕಾರ ಪರಿಹಾರ ನೀಡಿತ್ತು. 2018ರಲ್ಲಿ ದೀಪಕ್ ರಾವ್ & 2022ರಲ್ಲಿ ಮಸೂದ್, ಫಾಝಿಲ್, ಅಬ್ದುಲ್ ಜಲೀಲ್ ಹತ್ಯೆಯಾಗಿತ್ತು.
ಫ್ರೀ ಬಸ್‌ಪಾಸ್ ಸ್ಮಾರ್ಟ್‌ಕಾರ್ಡ್ ಅರ್ಜಿ ಸದ್ಯಕ್ಕಿಲ್ಲ
ರಾಜ್ಯ ಸರ್ಕಾರ ಘೋಷಿಸಿರುವ ಉಚಿತ ಬಸ್ ಪ್ರಯಾಣಕ್ಕೆ ಸ್ಮಾರ್ಟ್ ಪಡೆಯಬೇಕು ಎಂದು ಈ ಹಿಂದೆ ಘೋಷಣೆ ಮಾಡಲಾಗಿತ್ತು. 3 ತಿಂಗಳ ಬಳಿಕ ಈ ಕಾರ್ಡ್ ಇದ್ದರಷ್ಟೇ ಉಚಿತ ಪ್ರಯಾಣ ಎಂದು ತಿಳಿಸಲಾಗಿತ್ತು. ಆದರೆ ಈ ನಿಲುವಿನಲ್ಲಿ ಕೊಂಚ ಬದಲಾವಣೆಯಾಗಿರುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಕಾರ್ಡ್‌ನಲ್ಲಿ ಯಾವ ಯಾವ ಅಂಶ ಸೇರಿಸಬೇಕು ಅನ್ನುವುದು ನಿರ್ಧಾರವಾಗಿಲ್ಲ. ಹೀಗಾಗಿ ಸದ್ಯಕ್ಕೆ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸುವುದಿಲ್ಲ ಎಂದಿದ್ದಾರೆ.
ಜೂನಿಯರ್ ಇಂಜಿನಿಯರ್ ಟ್ರೈನಿ ಹುದ್ದೆಗೆ ಅರ್ಜಿ
THDC ಇಂಡಿಯಾ ಲಿಮಿಟೆಡ್ 181ಕ್ಕೂ ಹೆಚ್ಚು ಜೂನಿಯರ್ ಇಂಜಿನಿಯರ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು 27 ವರ್ಷಕ್ಕೆ ನಿಗದಿಪಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ thdc.co.in ಗೆ ಭೇಟಿ ನೀಡುವ ಮೂಲಕ ಜೂನ್ 30ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಗಮನಿಸಬೇಕು.
ತಮಿಳುನಾಡಿಗೆ ಕಾವೇರಿ ನೀರು: ಸರ್ಕಾರ ದೊಡ್ಡ ನಿರ್ಧಾರ
ತಮಿಳುನಾಡು ಸೇರಿ ಕಾವೇರಿ ನದಿ ಪಾತ್ರದ ರಾಜ್ಯಗಳಿಗೆ ಜೂನ್‌ನಲ್ಲಿ 9.19 TMC ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA) ಕರ್ನಾಟಕಕ್ಕೆ ಆದೇಶಿಸಿದೆ. ಆದರೆ ಮಳೆ ಕೊರತೆ ಹಿನ್ನೆಲೆ ಅಷ್ಟು ಪ್ರಮಾಣದ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಪ್ರಾಧಿಕಾರ ನಿರ್ದೇಶನ ಪ್ರಕಾರ ಜೂನ್‌ನಲ್ಲಿ ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ 9.19TMC ನೀರು ಬಿಡಬೇಕು. CWMA ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಗೃಹ ಜ್ಯೋತಿ.. ಆಧಾರ್ ಜೋಡಣೆಗೆ ಸೂಚನೆ
ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ನಾಳೆಯಿಂದ ಆರಂಭವಾಗಲಿದೆ. ಬಾಡಿಗೆದಾರರು ಹಾಗೂ ಇತರೆ ಗ್ರಾಹಕರು ಉಚಿತ ವಿದ್ಯುತ್ ಪಡೆಯಲು ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಿಸುವಂತೆ ಇಂಧನ ಇಲಾಖೆ ತಿಳಿಸಿದೆ. ವಿದ್ಯುತ್ ಬಳಕೆದಾರರು ಬಾಡಿಗೆ ಮನೆಗಳಲ್ಲಿ ಇದ್ದರೆ, ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ark Dow 3927. https://sevasindhugs .karnataka.gov.in/gruhajyothi Jeಸಲ್ಲಿಸಬಹುದು.
ಐಟಿಬಿಪಿಯಲ್ಲಿ 458 ಹುದ್ದೆಗಳು
ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್
(ITBP) 458 ಕಾನ್ಸ್ಟೇಬಲ್ (ಡೈವರ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಕೆ ಆರಂಭ: ಜೂನ್ 27 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 26 ಆಯ್ಕೆ ವಿಧಾನ: ಲಿಖಿತ, ದೈಹಿಕ ಪರೀಕ್ಷೆ ಮೂಲಕ
3233: recruitment.itbpolice.nic.in
ರೈತರ ಖಾತೆಗೆ 2,000.. ಯಾವಾಗ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ 14ನೇ ಕಂತು ಈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ. ಪ್ರತಿ ವರ್ಷ ಕೇಂದ್ರವು ಮೂರು ಕಂತುಗಳಲ್ಲಿ ಸರ್ಕಾರ 16 ಸಾವಿರ ಜಮಾ ಮಾಡುತ್ತಿದೆ. ಆದರೆ, 13ನೇ ಕಂತಿನಲ್ಲಿ ಪರಿಶೀಲನೆ ನಡೆಸದ ಕಾರಣ ಕಳೆದ ಬಾರಿ ಕೆಲವರಿಗೆ 12 ಸಾವಿರ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ದೇಶದ ಕೆಲ ರೈತರ ಖಾತೆಗೆ 4 ಸಾವಿರ ರೂ. ಜಮೆ ಆಗಲಿದೆ. ಪಿಎಂ ಕಿಸಾನ್ ಯೋಜನೆಯನ್ನು 2019ರಲ್ಲಿ ಮೋದಿ ಅವರು ಪ್ರಾರಂಭಿಸಿದ್ದರು.
ಲಕ್ಷ ಜನರಿಗೊಂದು ಇಂದಿರಾ ಕ್ಯಾಂಟೀನ್
ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ಆರಂಭಿಸುವ ಕುರಿತು ಸರ್ಕಾರ ನಿರ್ಧಾರ ಮಾಡಿದೆ. ಈ ಬಾರಿ ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಪ್ಲಾನ್ ಮಾಡಿದ್ದು, ರಾಜ್ಯದಾದ್ಯಂತ 1 ಲಕ್ಷ ಜನಸಂಖ್ಯೆಗೆ ಒಂದರಂತೆ ಇವುಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದು ವರದಿಯಾಗಿದೆ. ಶುಚಿ, ರುಚಿ ಹಾಗೂ ಆಹಾರದ ಪ್ರಮಾಣದಲ್ಲೂ ಹೆಚ್ಚಳ ಮಾಡುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ರೆಸ್ಟೋರೆಂಟ್ ಬಿಲ್ ಪಾವತಿಸದ ಟ್ರಂಪ್ ಟ್ರೋಲ್
ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವರು ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳನ್ನು ಸುತ್ತುತ್ತಿರುವ ಕಾರಣ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ರೆಸ್ಟೋರೆಂಟ್‌ಗೆ ಹೋದಾಗ ಅಲ್ಲಿನ ಜನ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು. ಈ ಸಮಾರಂಭದಲ್ಲಿ ಅವರು ಉಚಿತ ಊಟ ನೀಡಲಾಗುವುದು ಎಂದು ಘೋಷಿಸಿದರು. ಟ್ರಂಪ್ ಬಿಲ್ ಪಾವತಿಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಟ್ರಂಪ್ ಬಿಲ್ ಪಾವತಿಸದೆ ತೆರಳಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಾಗಿ ವೈರಲ್ ಆಗಿವೆ.
SBI ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ
→ ಹುದ್ದೆಯ ಹೆಸರು- FLC ಸಲಹೆಗಾರ ಮತ್ತು FLCನಿರ್ದೇಶಕ
ಒಟ್ಟು ಹುದ್ದೆಗಳು- 194
→ ಅರ್ಹತೆ- ಹುದ್ದೆಗಳ ಅಗತ್ಯಕ್ಕೆ ಅನುಗುಣವಾಗಿ
→ ವಯಸ್ಸಿನ ಮಿತಿ- 60 ರಿಂದ 63 ವರ್ಷಗಳು
→ Sea-do.35,000 8o 60,000
ಅರ್ಜಿ ಸಲ್ಲಿಕೆ ವಿಧಾನ – ಆನ್‌ಲೈನ್ –
→ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 06 ಜುಲೈ 2023
→ ಅಧಿಕೃತ ವೆಬ್‌ಸೈಟ್ – sbi.co.in
ಬಿಗ್ ಬಾಸ್ ಶೋಗೆ ಸನ್ನಿ ಲಿಯೋನ್!?
ಬಿಗ್ ಬಾಸ್ OTT 2ರ ಹಿಂದಿ ಸೀಸನ್‌ನಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅವರು ಸ್ಪರ್ಧಿಯಾಗಿ ಹೋಗುತ್ತಾರೆಯೇ? ಸಹ ನಿರೂಪಕಿಯಾಗಿ ಹೋಗುತ್ತಾರಾ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಬಾಲಿವುಡ್ ನಟ ಸಲ್ಮಾನ್ ಖಾನ್ ಹೋಸ್ಟ್ ಮಾಡಲಿರುವ ಈ ಶೋ ಜೂನ್ 17 ರಿಂದ 24 ಗಂಟೆಗಳ ಕಾಲ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಸ್ಟೀಮ್ ಆಗಲಿದೆ. 2011ರಲ್ಲಿ ಟಿವಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ಸೀಸನ್ 5ರಲ್ಲಿ ಸನ್ನಿ ಭಾಗವಹಿಸಿದ್ದರು.
ವುಹಾನ್ ಲ್ಯಾಬ್ನಿಂದಲೇ ಹರಡಿದ ಕೊರೊನಾ
ಚೀನಾದ ವುಹಾನ್ ಲ್ಯಾಬ್‌ನಿಂದಲೇ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂದು ಅಮೆರಿಕದ ಪತ್ರಿಕೆಗಳು ಹೇಳಿವೆ. ವರದಿಯ ಪ್ರಕಾರ, ಲ್ಯಾಬ್‌ನಲ್ಲಿದ್ದ ಬೆನ್ ಹು, ಯು ಪಿಂಗ್ ಮತ್ತು ಯಾನ್ ಝು ಎಂಬ 3 ವಿಜ್ಞಾನಿಗಳು ಆರಂಭದಲ್ಲಿ ಸೋಂಕಿಗೆ ಒಳಗಾಗಿದ್ದಾರೆ. ಇವರು ವೈರಸ್‌ನ ತೀವ್ರತೆ ಅರಿಯದೆ ಎಲ್ಲೆಡೆ ತಿರುಗಾಡಿದ್ದರಿಂದ ಈ ವೈರಸ್ ಪ್ರಪಂಚದಾದ್ಯಂತ ಹರಡಿತು. ಆರಂಭದಲ್ಲಿ ಇದು SARS ವೈರಸ್ ಎಂದು ನಂಬಲಾಗಿತ್ತು. ಅಮೆರಿಕದ FBIಗೆ ಈ ಬಗ್ಗೆ ಎಲ್ಲವೂ ತಿಳಿದಿದೆ ಎಂದು ಹೇಳಲಾಗಿದೆ.
ಸಬ್ಸಿಡಿ ರದ್ದು: ರಾಜ್ಯ ಜನತೆಗೆ ಸರ್ಕಾರ ದೊಡ್ಡ ಶಾಕ್
ಉಚಿತ ವಿದ್ಯುತ್ ನೀಡಲು ಮುಂದಾಗಿರುವ ಸರ್ಕಾರ ಇದೀಗ ಜನತೆಗೆ ದೊಡ್ಡ ಶಾಕ್ ನೀಡಿದೆ. ಸೋಲಾರ್ ಬಳಸುತ್ತಿದ್ದ ಗ್ರಾಹಕರಿಗೆ ಪ್ರತಿ ತಿಂಗಳು ನೀಡುತ್ತಿದ್ದ ಸಬ್ಸಿಡಿ ರದ್ದುಗೊಳಿಸಿ KERC ಆದೇಶ ಹೊರಡಿಸಿದೆ. ಅದರಂತೆ 2007ರಿಂದ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ಪ್ರತಿ ಯೂನಿಟ್ ಗೆ 50 ಪೈಸೆಯಂತೆ(ಗರಿಷ್ಠ 50ರೂ.) ನೀಡುತ್ತಿದ್ದ ಸಬ್ಸಿಡಿ ರದ್ದುಪಡಿಸಲಾಗಿದೆ. ಬ್ಯಾಂಕ್ ಮೂಲಕ ಆಟೋಮೆಟಿಕ್ ಬಿಲ್ ಪಾವತಿ ಮಾಡುವಾಗ ನೀಡುತ್ತಿದ್ದ 0.25% ರಿಯಾಯಿತಿ ಸೌಲಭ್ಯವನ್ನು ಕೂಡ ರದ್ದುಗೊಳಿಸಿದೆ.
ತಮಿಳುನಾಡಿನಲ್ಲಿ ಬಿಜೆಪಿ ನಾಯಕನ ಬಂಧನ
ತಮಿಳುನಾಡು BJP ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಬಲಗೈ ಬಂಟರಾಗಿರುವ ಪಕ್ಷದ ರಾಜ್ಯ ಕಾರ್ಯದರ್ಶಿ SG ಸೂರ್ಯ ಅವರನ್ನು ಪೊಲೀಸರು ಮಧ್ಯರಾತ್ರಿ ಚೆನ್ನೈನಲ್ಲಿ ಬಂಧಿಸಿದ್ದಾರೆ. ಮಾನನಷ್ಟ ಪ್ರಕರಣ ಸಂಬಂಧ ಸೂರ್ಯನನ್ನು ಮಧುರೈ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಬಂಧನ ಮಾಡಿರುವುದಾಗಿ ವರದಿಯಾಗಿದೆ. ಇದನ್ನು ಅಣ್ಣಾಮಲೈ ಖಂಡಿಸಿದ್ದು ಕಮ್ಯುನಿಸ್ಟರು, DMK ಮಿತ್ರಪಕ್ಷಗಳ ಅಸಹ್ಯ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿರುವುದು ಅವರು ಮಾಡಿದ ಏಕೈಕ ತಪ್ಪು. ಈ ಬಂಧನ ನಮ್ಮನ್ನು ತಡೆಯುವುದಿಲ್ಲ ಎಂದಿದ್ದಾರೆ.
NEWS NOW