ಗಡಿನಾಡ ಹುಡುಗನಿಗೆ ಒಲಿದ ಬೆಳ್ಳಿ ಪದಕ: ಸುರಕ್ಷ್ ರೈ
ಗಡಿನಾಡ ಹುಡುಗನಿಗೆ ಒಲಿದ ಬೆಳ್ಳಿ ಪದಕ: ಸುರಕ್ಷ್ ರೈ
ದೇಲಂಪಾಡಿ:ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಪುಷ್ಪರಾಜ್ ರೈ ಮತ್ತು ಶೋಭಲತ ದಂಪತಿಗಳ ಮಗನಾದ ಸುರಕ್ಷ್ ದೇಲಂಪಾಡಿ ಇವರು
2023 – 24 ರ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್ ಸ್ಪರ್ಧೆಯೂ, ದಿನಾಂಕ 26-6-2023 ರಿಂದ 28-6-2023 ರ ವರೆಗೆ ನಡೆದಿತ್ತು. ಈ ವೈಟ್ ಲಿಫ್ಟಿಂಗ್ ಸ್ಪರ್ದೆಲ್ಲಿ ನೂರ ಒಂಬತ್ತು ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನಕ್ಕೆ ಅರ್ಹರಾಗಿ ಬೆಳ್ಳಿ ಪದಕವನ್ನು ಇವರು ಪಡೆದುಕೊಂಡಿದ್ದಾರೆ.
ಇವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದು, ವೈಟ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಹಾಗೂ ವ್ಯಾಸಂಗದ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೆಯೇ ಈ ನಗುಮೊಗದ ಸರದಾರನಿಗೆ ನಮ್ಮ ನಿಮ್ಮೆ ಲ್ಲರ ಹಾರೈಕೆಗಳು ಅವರನ್ನು ಇನ್ನಷ್ಟು ಕ್ಷೇತ್ರಗಳಲ್ಲಿ ಬೆಳಸಲಿ ಎಂಬುದು ನಮ್ಮ ಆಶಯ.