ಸಿನಿಮೀಯ ರೀತಿಯಲ್ಲಿ ಮೋಸ್ಟ್ ವಾಂಟೆಡ್ ದರೋಡೆಕೋರ ಸುಬ್ರಮಣಿ(ಚುಬ್ರ) ಬಂಧನ!
ಸಿನಿಮೀಯ ರೀತಿಯಲ್ಲಿ ಮೋಸ್ಟ್ ವಾಂಟೆಡ್ ದರೋಡೆಕೋರ ಸುಬ್ರಮಣಿ(ಚುಬ್ರ) ಬಂಧನ!
ಇತ್ತೀಚೆಗೆ ಪೊನ್ನಂಪೇಟೆ ತಾಲೋಕಿನಾದ್ಯಂತ ಸಾರ್ವಜನಿಕರ ನೆಮ್ಮದಿ ಕೆಡಿಸಿದ್ದ, ಹಾಗೂ ಪೊಲೀಸರಿಗೆ ತಲೆನೋವಾಗಿದ್ದ ದರೋಡೆಕೋರ ಸುಬ್ರಮಣಿ ಅಲಿಯಾಸ್ ಚುಬ್ರ ಶನಿವಾರ ಸಂಜೆ ನಾಲ್ಕು ಗಂಟೆಯ ಸಮಯದಲ್ಲಿ ಮತ್ತೂರು ಗ್ರಾಮದ ತೋಟ ಒಂದರಿಂದ ರಸ್ತೆ ದಾಟುದಿದ್ದ. ಇದೇ ಸಮಯದಲ್ಲಿ ಅದೇ ಮಾರ್ಗವಾಗಿ ಅಟೋದಲ್ಲಿ ಬರುತಿದ್ದ ಸಾಮಾಜಿಕ ಕಾರ್ಯಕರ್ತ ಚೀರಂಡ ಚಂಗಪ್ಪ ಹಾಗು ಬಲ್ಯಮುಂಡೂರು ಗ್ರಾಮ ಪಂಚಾಯಿತಿ ಸದಸ್ಯರಾದ ಆಲೆಮಾಡ ನವೀನ್ ದೇವಯ್ಯನವರು ಸುಬ್ರಮಣಿಯನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಸಾರ್ವಜನಿಕರ ಸಹಾಯದಿಂದ ಪೊನ್ನಂಪೇಟೆ ಪೋಲಿಸ್ ಠಾಣೆಗೆ ಒಪ್ಪಿಸಿದರು. ಪೊನ್ನಂಪೇಟೆ ಠಾಣಾಧಿಕಾರಿ ಲಕ್ಷ್ಮಣ್ ಕಮಣ್ಣವರ್ ಈತನು ಕೆಲವು ವರ್ಷಗಳಿಂದ ನಡೆಸಿದ ಕಳ್ಳತನ ದರೋಡೆಗಳನ್ನು ವಿಚಾರಿಸಿ ಕೇಸು ದಾಖಲಿಸಿ ನ್ಯಾಯಂಗ ಬಂದನಕ್ಕೆ ಒಳಪಡಿಸಿದ್ದಾರೆ.