ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಇಬ್ಬರು ಪ್ರಮಾಣವಚನ
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಇಬ್ಬರು ನಿನ್ನೆ ಪ್ರಮಾಣವಚನ
ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾಗಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹಾಗೂ ನ್ಯಾಯಮೂರ್ತಿ ಎಸ್. ವೆಂಕಟನಾರಾಯಣ ಭಟ್ಟಿ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಶುಕ್ರವಾರ ಪ್ರಮಾಣ ವಚನ ಬೋಧಿಸಿದರು.ನ್ಯಾಯಮೂರ್ತಿಗಳಾದ ಭುಯಾನ್ ಹಾಗೂ ಭಟ್ಟಿ ಅವರ ಪ್ರಮಾಣ ವಚನ ಸ್ವೀಕಾರದೊಂದಿಗೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರ ಕಾರ್ಯ ಶಕ್ತಿ ಸಿಜೆಐ ಸೇರಿದಂತೆ 32 ಕ್ಕೆ ಏರಿದೆ. ಇನ್ನೂ ಎರಡು ಸ್ಥಾನ ಖಾಲಿ ಇದೆ. ಸುಪ್ರೀಂ ಕೋರ್ಟ್ ಸಭಾಂಗಣದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಿಜೆಐ ಅವರು ಇಬ್ಬರು ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು.ಜುಲೈ 12 ರಂದು ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟಿಸ್ ಭುಯಾನ್ ಮತ್ತು ಕೇರಳದ ಅವರ ಸಹವರ್ತಿ ನ್ಯಾಯಮೂರ್ತಿ ಭಟ್ಟಿ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಕೇಂದ್ರ ಸರ್ಕಾರವು ಜುಲೈ 12 ರಂದು ಅನುಮೋದಿಸಿತ್ತು.ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇಬ್ಬರು ನ್ಯಾಯಮೂರ್ತಿಗಳ ಪದೋನ್ನತಿಯನ್ನು ಬುಧವಾರ ಪ್ರಕಟಿಸಿದ್ದರು.