• 27 ಮಾರ್ಚ್ 2025

ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಸೋದರನ ಪುತ್ರ, ನಟ ಅರ್ಧೇಂದು ಬೋಸ್‌ ನಿಧನ 

 ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಸೋದರನ ಪುತ್ರ, ನಟ ಅರ್ಧೇಂದು ಬೋಸ್‌ ನಿಧನ 
Digiqole Ad

ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಸೋದರನ ಪುತ್ರ, ನಟ ಅರ್ಧೇಂದು ಬೋಸ್‌ ನಿಧನ 

ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕಿರಿಯ ಸಹೋದರನ ಪುತ್ರ ಅರ್ಧೇಂದು ಬೋಸ್ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ಹೃದಯಾಘಾತದಿಂದ ನಿಧನರಾಗಿರುವುದಾಗಿ ಪತ್ನಿ ಕೆರ್ಮೀನ್ ಬೋಸ್ ತಿಳಿಸಿದ್ದಾರೆ. ಅರ್ಧೇಂದು ಬೋಸ್ ಮುಂಬೈನಲ್ಲಿ ಸೋಮವಾರ (ಆಗಸ್ಟ್‌ 07) ವಿಧಿವಶರಾಗಿರುವುದಾಗಿ ಮೂಲಗಳು ತಿಳಿಸಿವೆ. ಅರ್ಧೇಂದು ಬೋಸ್ ಅವರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕಿರಿಯ ಸಹೋದರ ಶೈಲೇಶ್ ಚಂದ್ರ ಬೋಸ್ ಅವರ ಪುತ್ರನಾಗಿದ್ದು, ದೇಶಕ್ಕಾಗಿ ತಮ್ಮ ಚಿಕ್ಕಪ್ಪನ ತ್ಯಾಗ, ಹೋರಾಟದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದರು ಅರ್ಧೇಂದು ಬೋಸ್. ಅರ್ಧೇಂದು ಹಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ . ಅರ್ಧೇಂದು ಬೋಸ್‌ ಅವರು ಹಲವಾರು ವರ್ಷಗಳ ಕಾಲ ಬಾಂಬೆ ಡೈಯಿಂಗ್‌ ರೂಪದರ್ಶಿಯಾಗಿದ್ದರು. ಅರ್ಧೇಂದು ಬೋಸ್‌ ಅವರು ಪತ್ನಿ ಕೆರ್ಮೀನ್‌ ಬೋಸ್‌ ಹಾಗೂ ಪುತ್ರ ನೆಡಾಲ್‌ ಬೋಸ್‌ ಅವರನ್ನು ಅಗಲಿದ್ದಾರೆ

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ