• 19 ಮಾರ್ಚ್ 2025

ಕಲಾವಿದ|ರವಿ ಪಾಂಬಾರ್

 ಕಲಾವಿದ|ರವಿ ಪಾಂಬಾರ್
Digiqole Ad

ಕಲಾವಿದ|ರವಿ ಪಾಂಬಾರ್

ಮನದೊಳಗೆ ಸಂಕಟಗಳಿದ್ದರು, ಜನ ಮನಗಳಿಗೆ ಸಂತಸವನ್ನು ನೀಡುವವನೇ ಕಲಾವಿದ.

ಅದೆಷ್ಟು ಆಸೆಗಳ ಮನದೊಳಗೆ ಇರಿಸಿ

ಭೇದ ಭಾವಗಳನ್ನು ದೂರಗೊಳಿಸಿ

ಅವಮಾನ ಅಪ ಪ್ರಚಾರಗಳನ್ನು ಸಹಿಸಿ

ಅರಳಿದ ಹೂವಿನಂತೆ ಸದಾ ನಗೆ ಚೆಲ್ಲುವ ಚೈತನ್ಯ

ಕಾರುಣ್ಯ ಸಿಂಧೂ ಕಲಾವಿದ,

ಬಿತ್ತಿದ ಬೀಜ ಮೊಳಕೆ ಹೊಡೆಯೋ ತನಕ ಎಂಬ ಮಾತಿನಂತೆ

ಹಚ್ಚಿದ ಬಣ್ಣ ಮುಖದ ಮೇಲೆ ಇದ್ದಷ್ಟು ಹೊತ್ತು ಮಾತ್ರ ಕಲಾವಿದ,

ಪಾಪ ಹೊಟ್ಟೆ ಪಾಡಿಗಾಗಿ ದಿನನಿತ್ಯ ಹಚ್ಚಿದ ಬಣ್ಣ

ಕೊನೆಗೊಂದು ದಿನ ಬಣ್ಣ ಕಳಚಿಟ್ಟು ಹೋದ ಮಸಣವಣ್ಣ

ಆದರೆ ಎಂದಿಗೂ ಅಭಿಮಾನಿಗಳ ಮನದಲ್ಲಿ ನೆನಪಾಗಿ ಮಾಸಿ ಉಳಿದು ಹೋಯಿತು ಅವನು ಹಚ್ಚಿದ ಬದುಕಿನ ಬಣ್ಣ

ಮಾಸಿ ಹೋಗದ ಬದುಕು ಎಂದರೆ ಕಲೆ

ಅದನ್ನು ಮಾಡದಿರಿ ಎಂದಿಗೂ ಕೊಲೆ

ಅದರಿಂದ ತಿಳಿಯುದು ಕಲಾವಿದನ ಜೀವನದ ಬೆಲೆ

 

✍️ರವಿ ಪಾಂಬಾರ್

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ