• 8 ಸೆಪ್ಟೆಂಬರ್ 2024

ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಅಪಾಯ!

Digiqole Ad

ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಅಪಾಯ!

ನೀರು ಕುಡಿಯುವುದು ದೇಹಾರೋಗ್ಯಕ್ಕೆ ಉತ್ತಮ. ಆದರೆ ಹೆಚ್ಚು ನೀರು ಕುಡಿಯುವುದರಿಂದ ಅಪಾಯ ತಪ್ಪಿದ್ದಲ್ಲ. ದೇಹದಲ್ಲಿ ನೀರಿನಾಂಶ ಅತಿಯಾದರೆ ಸೋಡಿಯಂ ಅಸಮತೋಲನ ಉಂಟಾಗುತ್ತದೆ. ಇದರಿಂದ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಕೆಲವೊಮ್ಮೆ ಇದು ಮಾರಣಾಂತಿಕವೂ ಆಗಬಹುದು.ಆಗಾಗ್ಗೆ ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮ ಎಂದು ತಜ್ಞರು ಹೇಳ್ತಾರೆ. ಇದು ದೇಹವನ್ನು ಆರೋಗ್ಯವಾಗಿ ಮತ್ತು ನಿರ್ವಿಶೀಕರಣ ಮಾಡುತ್ತದೆ. ಜೊತೆಗೆ ಯಾರ ಆಹಾರ ಪದ್ಧತಿ ಮತ್ತು ಜೀವನಶೈಲಿ ಸರಿ ಇರುವುದಿಲ್ಲವೋ ಅವರು ಬಹುಬೇಗ ಕಾಯಿಲೆಗೆ ತುತ್ತಾಗುತ್ತಾರೆ. ಇನ್ನು ಇತ್ತೀಚಿನ ಸಂಶೋಧನೆಯೊಂದು ಶಾಕಿಂಗ್ ಸುದ್ದಿ ನೀಡಿದೆ. ಹೆಚ್ಚು ನೀರು ಕುಡಿಯುವುದು ಸಾವಿಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳಿದೆ. ಕ್ಲಿನಿಕಲ್ ಕಿಡ್ನಿ ಜರ್ನಲ್‌ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ಅತೀ ನೀರು ಸೇವನೆ ಮರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ.ನೀರು ಅತಿಯಾಗಿ ಸೇವಿಸಿದರೂ ಅದು ಆರೋಗ್ಯಕ್ಕೆ ಕುತ್ತಾಗಬಹುದು. ಯಾವುದೇ ವಸ್ತುವಾದರೂ ಅದು ಒಳ್ಳೆಯದೆಂದು ಅತಿಯಾಗಿ ಸೇವಿಸಿದರೆ ಅವು ಆರೋಗ್ಯಕರ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಮರೆಯಬಾರದು. ಅತಿಯಾದರೆ ಅಮೃತವೂ ವಿಷ ಅಂತರಲ್ಲಾ ಹಾಗೆ ಆರೋಗ್ಯವಾಗಿರಲು ನೀರು ಎಷ್ಟು ಮುಖ್ಯವೋ ಹಾಗೆಯೇ ನಿಯಮಿತಕ್ಕಿಂತ ಹೆಚ್ಚಾಗಿ ನೀರು ಸೇವಿಸಿದರೂ ಅನಾರೋಗ್ಯ ಕಟ್ಟಿಟ್ಟಬುತ್ತಿ.

ಮಲಬದ್ಧತೆ ರೋಗದಿಂದ ನರಳುತ್ತಿರುವವರು ನೀರನ್ನು ಹೆಚ್ಚಾಗಿ ಕುಡಿದು ನಂತರ ಸ್ವಲ್ಪಹೊತ್ತು ಓಡಾಡಬೇಕು. ಈ ರೀತಿ ಮಾಡುವುದರಿಂದ ರೋಗ ಶಮನವಾಗುತ್ತದೆ.ನೀರು ಮನುಷ್ಯ ದೇಹದ ಅಗತ್ಯಗಳಲ್ಲಿ ನೀರು ಕೂಡ ಒಂದು. ಒಂದು ದಿನ ಕೂಡ ನೀರಿಲ್ಲದೇ ಮನುಷ್ಯ ಬದುಕಿರಲಾರ. ನಮ್ಮ ಸಂಪೂರ್ಣ ದೇಹದ ಕಾರ್ಯ ಚಟುವಟಿಕೆಗಳು ಸರಾಗವಾಗಿ ಸಾಗಲು ನೀರಿನ ಸೇವನೆ ಅಗತ್ಯ. ಸಾಕಷ್ಟು ನೀರು ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದನ್ನು ನಾವು ಕೇಳಿದ್ದೇವೆ. ಆದರೆ ಅತಿಯಾಗಿ ನೀರು ಕುಡಿಯುವುದು ಕೂಡ ಅಪಾಯ. ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಇದು ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಒಂದು ದಿನದಲ್ಲಿ 8 ಲೋಟ ಅಥವಾ 3 ರಿಂದ 4 ಲೀಟರ್‌ ನೀರು ಕುಡಿಯುವುದು ಅವಶ್ಯ ಎಂಬುದನ್ನು ನಾವು ಕೇಳಿರುತ್ತೇವೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬುದನ್ನು ಮರೆಯಬಾರದು.

ಸಾಮಾನ್ಯವಾಗಿ ಎಲ್ಲರೂ ಹೇಳುವುದು ಒಂದೇ ನೀರು ಎಲ್ಲಾ ರೋಗ್ಯಕ್ಕೂ ಅಮೃತವಿದ್ದಂತೆ. ಅತಿಯಾಗಿ ನೀರು ಸೇವಿಸಿದರೆ ಯಾವ ರೋಗವು ಬರುವುದಿಲ್ಲ ಎಂದು. ಮಕ್ಕಳು ಸಹ ಪೋಷಕರು ಹೇಳಿದ್ದಾರೆಂದು ಮಿತಿಯೇ ಇಲ್ಲದೆ ನೀರು ಕುಡಿಯುವುದನ್ನು ನಾವು ನೋಡುತ್ತಿರುತ್ತೇವೆ. ದಾಹವಿಲ್ಲದೇ ಇದ್ದರೂ ಸುಮ್ಮನೆ ನೀರು ಕುಡಿಯುವುದು. ಆಟವಾಡಿ ಬಂದ ತಕ್ಷಣ ನೀರು ಕುಡಿಯುವುದು. ಎಲ್ಲಿಯಾದರೂ ಬಿದ್ದ ತಕ್ಷಣ ನೀರು ಕುಡಿಯುವುದು ಹೀಗಾ ನಾನಾ ರೀತಿಯ ಒತ್ತಡದ ಸಮಯದಲ್ಲಿ ನೀರು ಕುಡಿಯುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ಆ ಹೊತ್ತಿನಲ್ಲಿ ಎಷ್ಟು ನೀರು ಕುಡಿಯುತ್ತೇವೆ. ಆ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದೇ ಎಂದು ಆಲೋಚಿಸುವವರ ಸಂಖ್ಯೆ ಅತಿ ವಿರಳ. ದೇಹ ಒತ್ತಡದಲ್ಲಿದ್ದಂತಹ ಸಂದರ್ಭದಲ್ಲಿ ಅತಿಯಾಗಿ ನೀರು ಕುಡಿಯಬಾರದು ಇದು ಹೃದಯಕ್ಕೆ ಬಾರಿ ತೊಂದರೆಯನ್ನುಂಟು ಮಾಡುತ್ತದೆ.

ನಿಯಮಿತಕ್ಕಿಂತ ಹೆಚ್ಚು ನೀರು ಸೇವನೆಯಿಂದ ಯಾವ ರೀತಿ ಅನಾರೋಗ್ಯ ಬರುತ್ತದೆ?

ನಿಯಮಿತಕ್ಕಿಂತ ಹೆಚ್ಚು ನೀರು ಸೇವನೆಯಿಂದ ಮಿದುಳಿನ ಸಮಸ್ಯೆಗೆ ಉಂಟಾಗಬಹುದು. ಮೆದುಳಿನ ಜೀವಕೋಶಗಳ ಒಳಗೆ ನೀರು ಹೆಚ್ಚಿನ ರೀತಿಯಲ್ಲಿ ಸರಬರಾಜಾದರೆ ಮಿದುಳಿನ ಜೀವಕೋಶಗಳಲ್ಲಿ ಊತ ಉಂಟಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಬಹುದು. ಕೆಲವೊಮ್ಮೆ ಮನುಷ್ಯ ಕೋಮಾ ಹಂತಕ್ಕೆ ಕೂಡಾ ತಲುಪಲು ಕಾರಣವಾಗುತ್ತದೆ.ದಣಿದು ಬಂದಾಗ ತಕ್ಷಣ ಒಂದೇ ಸಮನೆ ಅಳತೆಯಿಲ್ಲದೆ, ವಿರಾಮವಿಲ್ಲದಂತೆ ನೀರು ಕುಡಿಯುವುದರಿಂದಲೂ ಅನಾರೋಗ್ಯ ಉಂಟಾಗುತ್ತದೆ. ನೀರು ಅತಿಯಾಗಿ ಸೇವಿಸಿದರೆ ದೇಹದಲ್ಲಿ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಈ ರೀತಿಯ ಅಧಿಕ ರಕ್ತವು ಹೃದಯ ಹಾಗೂ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಿಸುವುದಲ್ಲದೇ, ರಕ್ತ ಪರಿಚಲನೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

ಅತಿಯಾದ ನೀರು ಸೇವನೆಯಿಂದ ರಕ್ತದಲ್ಲಿ ಸೋಡಿಯಂ ಕೊರತೆ ಉಂಟಾಗಿ ಜೀವಕೋಶಗಳ ಊತಕ್ಕೆ ಕಾರಣವಾಗುತ್ತದೆ. ಇದಕ್ಕೆ ಹೈಪೋನೇಟ್ರೇಮಿಯಾ ಎಂದು ಕರೆಯಲಾಗುತ್ತದೆ. ಇಂತಹ ರೋಗ ಉಂಟಾದವರಿಗೆ ವಾಕರಿಕೆ, ತಲೆಸುತ್ತಿಬೀಳುವುದು, ಮೂತ್ರವಿಸರ್ಜನೆ ಹೆಚ್ಚಾಗುವಂತಹ ಸಮಸ್ಯೆಗಳು ಉಂಟಾಗುತ್ತದೆ.

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ