• 8 ಸೆಪ್ಟೆಂಬರ್ 2024

ಹೈದ್ರಾಬಾದ್‌ ನಿಂದ ಬೆಂಗಳೂರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು: ಸೆ.24 ರಿಂದ ಆರಂಭ,ರೈಲು ವೇಳಾಪಟ್ಟಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

 ಹೈದ್ರಾಬಾದ್‌ ನಿಂದ ಬೆಂಗಳೂರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು: ಸೆ.24 ರಿಂದ ಆರಂಭ,ರೈಲು ವೇಳಾಪಟ್ಟಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!
Digiqole Ad

ಹೈದ್ರಾಬಾದ್‌ ನಿಂದ ಬೆಂಗಳೂರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು: ಸೆ.24 ರಿಂದ ಆರಂಭ,ರೈಲು ವೇಳಾಪಟ್ಟಿಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

ಹೈದರಾಬಾದ್‌ನ ಕಾಚಿಗುಡ – ಯಶವಂತಪುರ ನಿಲ್ದಾಣದ ನಡುವೆ ಸಂಚರಿಸುವ ರೈಲು ದಕ್ಷಿಣ ಭಾರತದ ಎರಡು ಐಟಿ ನಗರಗಳ ನಡುವಿನ ಮೊದಲ ವಂದೇ ಭಾರತ್ ರೈಲು ಆಗಿದೆ. ಹೈದ್ರಾಬಾದ್‌ನ ಕಾಚಿಗುಡ- ಯಶವಂತಪುರ ನಿಲ್ದಾಣದ ನಡುವೆ ಸಂಚರಿಸಲಿರುವ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ರಾಜ್ಯದ ಮೂರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಇದಾಗಿದ್ದು, ಸೆಪ್ಟೆಂಬರ್‌ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೈಲಿಗೆ ಚಾಲನೆ ನೀಡಲಿದ್ದಾರೆ.

ಬೆಂಗಳೂರು ಹೈದರಾಬಾದ್‌ ಮಾರ್ಗದಲ್ಲಿ ಸಂಚರಿಸುವ ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಯಶವಂತಪುರ, ಧರ್ಮಾವರಂ, ಧೋನೆ, ಕರ್ನೂಲ್ ಸಿಟಿ, ಗದ್ವಾಲ್ ಜಂಕ್ಷನ್, ಮಹೆಬೂಬ್‌ನಗರ, ಶಾದ್‌ನಗರ ಮತ್ತು ಕಾಚಿಗುಡ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

 

ಎರಡು ಪ್ರಮುಖ ಐಟಿನಗರಗಳ ನಡುವೆ ಈ ರೈಲು ಸಂಚಾರ ನಡೆಸುತ್ತಿದ್ದು, 610 ಕಿ.ಮೀ ಅಂತರವನ್ನು ಕೇವಲ 8.30 ನಿಮಿಷದಲ್ಲಿ ತಲುಪಲಿದೆ. ಸರಾಸರಿ 70-80 ಕಿ.ಮೀ. ವೇಗದಲ್ಲಿ ಸಂಚರಿಸಿದ ರೈಲು ನಿರೀಕ್ಷೆಗಿಂತ 40 ನಿಮಿಷ ಮೊದಲೇ ನಿಲ್ದಾಣಗಳನ್ನು ತಲುಪಿದೆ. ಟಿಕೆಟ್‌ ದರವನ್ನು ದಕ್ಷಿಣ ಮಧ್ಯ ರೈಲ್ವೆ ಅಧಿಕೃತವಾಗಿ ಇನ್ನಷ್ಟೇ ಪ್ರಕಟಿಸಬೇಕಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20703 (ಕಾಚಿಗುಡ- ಯಶವಂತಪುರ) – ಕಾಚಿಗುಡದಿಂದ ಬೆಳಿಗ್ಗೆ 5.30 ಹೊರಡುತ್ತದೆ. ನಂತರ ಮಹೆಬೂಬನಗರ ಬೆಳಗ್ಗೆ 7, ಕರ್ನೂಲು ನಗರ ಬೆಳಗ್ಗೆ 8.40, ಅನಂತಪುರ ಬೆಳಗ್ಗೆ 10.55, ಧರ್ಮಾವರಂ ಬೆಳಗ್ಗೆ 11.30 ಮತ್ತು ಯಶವಂತಪುರ ಮಧ್ಯಾಹ್ನ 2ಕ್ಕೆ ಬಂದು ತಲುಪುತ್ತದೆ.

​​​ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20704 (ಯಶವಂತಪುರದಿಂದ ಕಾಚಿಗುಡ) – ಯಶವಂತಪುರದಿಂದ ಮಧ್ಯಾಹ್ನ 2.45ಕ್ಕೆ ಹೊರಟು, ಧರ್ಮಾವರಂ ಸಂಜೆ 5.20, ಅನಂತಪುರ ಸಂಜೆ 5.41, ಕರ್ನೂಲು ನಗರ ರಾತ್ರಿ 7.51, ಮಹೆಬೂಬ್‌ನಗರ ರಾತ್ರಿ 9.40 ಮತ್ತು ಕಾಚೇಗೌಡ ರಾತ್ರಿ 11.15ಕ್ಕೆ ಬಂದು ತಲುಪುತ್ತದೆ.

ಸೆ.25ರಿಂದ ಬೆಂಗಳೂರಿನಿಂದ ಸಂಚಾರ ಆರಂಭ

ಬೆಂಗಳೂರಿನ ಯಶವಂತಪುರ- ಹೈದರಾಬಾದ್​ ಪ್ರಯಾಣಿಸುವ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಸೆ.24ಕ್ಕೆ ಚಾಲನೆ ನೀಡಲಾಗುತ್ತಿದ್ದು, ಸೆ 25ರಿಂದ ಈ ರೈಲು ಮೊದಲ ಪಯಣ ಶುರು ಮಾಡಲಿದೆ. ಅಂದು ಮಧ್ಯಾಹ್ನ 2.45ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಕಾಚಿಗುಡಗೆ ತೆರಳಲಿದೆ. ಯಶವಂತಪುರದಿಂದ ಕಾಚಿಗುಡ ನಡುವಿನ 610 ಕಿ.ಮೀ ದೂರವಿದ್ದು, ಏಳು ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ.

ಬೆಂಗಳೂರು-ಹೈದರಾಬಾದ್‌ ರೈಲು

1.ಯಶವಂತಪುರ ರೈಲು ನಿಲ್ದಾಣ: ಮಧ್ಯಾಹ್ನ 2.45

2. ಧರ್ಮಾವರಂ ಸ್ಟೇಷನ್‌: ಸಂಜೆ 5.20

3. ಅನಂತಪುರ ನಿಲ್ದಾಣ: ಸಂಜೆ 5.41

4. ಕರ್ನೂಲು ನಗರ ನಿಲ್ದಾಣ: ಸಂಜೆ 7.51

5. ಮೆಹಬೂಬ್‌ ನಗರ: ರಾತ್ರಿ 9.40

6. ಕಾಚೆಗುಡ ಸ್ಟೇಷನ್‌: ರಾತ್ರಿ 11.15

ಹೈದರಾಬಾದ್-‌ ಬೆಂಗಳೂರು ರೈಲು

1. ಕಾಚೆಗುಡ ಸ್ಟೇಷನ್‌: ಬೆಳಗ್ಗೆ 5.30

2. ಮೆಹಬೂಬ್‌ ನಗರ: ಬೆಳಗ್ಗೆ 7.00

3. ಕರ್ನೂಲು ನಗರ ನಿಲ್ದಾಣ: ಬೆಳಗ್ಗೆ 8.40

4. ಅನಂತಪುರ ನಿಲ್ದಾಣ: ಬೆಳಗ್ಗೆ 10.55

5. ಧರ್ಮಾವರಂ ಸ್ಟೇಷನ್‌: ಬೆಳಗ್ಗೆ 11.30

6.ಯಶವಂತಪುರ ರೈಲು ನಿಲ್ದಾಣ: ಮಧ್ಯಾಹ್ನ 2.00

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ