• 8 ಸೆಪ್ಟೆಂಬರ್ 2024

ಉಡುಪಿ : ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಮೆರವಣಿಗೆ

 ಉಡುಪಿ : ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಮೆರವಣಿಗೆ
Digiqole Ad

ಉಡುಪಿ : ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಮೆರವಣಿಗೆ

 

ವಿವೇಕಾನಂದ ಅವರು ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ತೊಂಬಟ್ಟುವಿನ ಇರ್ಕಿಗದ್ದೆ ನಿವಾಸಿ ಶೀನ ನಾಯ್ಕರ ಮಗ. ಇವರಿಗೆ ವಯಸ್ಸು 28 ಆಗಿದ್ದು ಸೆಪ್ಟೆಂಬರ್‌ 16ರಂದು ವಿವೇಕಾನಂದ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದರು. ಹಾಗೂ ಅವರ ಜತೆಗೆ ಅವರ ಮನೆಯ ನಾಯಿಯೂ ಕಣ್ಮರೆಯಾಗಿತ್ತು.

ಆ ಭಾಗದಲ್ಲಿ ಚಿರತೆಗಳ ಕಾಟ ವಿಪರೀವಾಗಿ ಇದ್ದ ಕಾರಣ ಮೊದಲ ಸಂಶಯ ಬಂದಿದ್ದು ಚಿರತೆಗಳೇನಾದರೂ ತಿಂದಿರಬಹುದು ಎಂದು!

ಇಲ್ಲಿ ಯಾವುದೇ ದನ, ನಾಯಿ ಕಣ್ಮರೆಯಾದರೂ ಜನ ಗುಂಪಾಗಿ ಹುಡುಕಾಟ ಮಾಡುವುದು ಜನರಿಗೆ ರೂಢಿಯಾಗಿತ್ತು . ಹೀಗಾಗಿ ವಿವೇಕಾನಂದ ನಾಪತ್ತೆಯಾದಾಗಲೂ ಜನರು ಹುಡುಕಾಟ ನಡೆಸಿದರು. ಅರಣ್ಯ ಇಲಾಖೆಗೂ ಮಾಹಿತಿ ನೀಡಿದರು . ಅರಣ್ಯ ಇಲಾಖೆಯವರು ಬಂದು ಹುಡುಕಾಟ ನಡೆಸಿದರು ಆದರೂ ಅವರ ಪತ್ತೆಯಾಗಿರಲಿಲ್ಲ . ಅದು ದಟ್ಟವಾದ ಕಾಡಿನ ಪ್ರದೇಶ. ಹೀಗಾಗಿ ಎಷ್ಟು ದಿನ ಹುಡುಕಿದರೂ ಅವರಿಬ್ಬರ ಪತ್ತೆಯು ಸಿಗಲಿಲ್ಲ . ಕೊನೆಗೆ ಮೃತದೇಹವಾಗಲೀ, ಸಾವಿನ ಯಾವುದೇ ಕುರುಹುಗಳಾಗಲೀ ಸಿಗಲಿಲ್ಲ. ಹೀಗಾಗಿ ವಿವೇಕಾನಂದ ಅವರ ಮನೆಯವರು ಇದ್ದ ದೈವ ದೇವರಿಗೆಲ್ಲ ಹರಕೆ ಹೊತ್ತರು. ಕೊರಗಜ್ಜಾ ಹುಡುಕಿಕೊಡು ಎಂದರು. ಸರಿಯಾಗಿ 8 ದಿನಗಳ ಬಳಿಕ ವಿವೇಕಾನಂದ ನಿಧಾನವಾಗಿ ನಡೆದುಕೊಂಡು ಬರುವುದನ್ನು ಊರಿನವರು ನೋಡಿದರು ತದನಂತರ ಅವರ ಮನೆಗೆ ಮಾಹಿತಿಯನ್ನು ನೀಡಿದರು. ಆಶ್ಚರ್ಯ ಏನೆಂದರೆ ಆತನ ಮುಂದೆ ನಾಯಿ ದಾರಿ ತೋರಿಸುತ್ತಾ ಬರುತ್ತಿತ್ತು. ಹಾಗಂತ ವಿವೇಕಾನಂದ ಬಂದಿದ್ದು ತನ್ನ ಮನೆಗಲ್ಲ. ತೊಂಬಟ್ಟಿ ಸಮೀಪದ ಮನೆಗೆ ಬಂದಿದ್ದ . ವಿವೇಕಾನಂದ ಮತ್ತು ನಾಯಿ ಎರಡನ್ನೂ ಗಮನಿಸಿದ ಮನೆಯವರು ಶೀನ ನಾಯ್ಕರಿಗೆ ಸುದ್ದಿ ಮುಟ್ಟಿಸಿದರು. ಆಹಾರ ಸೇವಿಸದೆ ಬರಿ ನೀರಿನಲ್ಲೇ ಬದುಕಿದಂತಿರುವ ವಿವೇಕಾನಂದ ನಿತ್ರನಗೊಂಡಿದ್ದರು . ಆದರೆ, ಮರಳಿಬಂದನಲ್ಲ ಎಂದು ಜನರು ದೈವ ದೇವರ ಮಹಿಮೆಯನ್ನು ಕೊಂಡಾಡುತ್ತಿದ್ದಾರೆ. 

ರವೀಶ್ ಅವರು ಈ ಕಥೆಯ ಕುರಿತು ಏನು ಹೇಳಿದರೆ ನೋಡೋಣ ಬನ್ನಿ!

ಕಾಂತಾರ ಸಿನೆಮಾದಲ್ಲಿ ದೈವ ನರ್ತಕರು ಕಾಡಿನಲ್ಲಿ ಮಾಯವಾಗುವ ದೃಶ್ಯವಿದೆ. ಅದು ನಿಜವಾ ? ಕಲ್ಪನೆಯಾ? ಎನ್ನುವ ಒಂದು ಚರ್ಚೆ ಹುಟ್ಟು ಹಾಕಿತ್ತು.

ಅದು ನಿಜವಾ , ಸುಳ್ಳಾ ಗೊತ್ತಿಲ್ಲ. ಅಂತಹದ್ದೆ ಒಂದು ಘಟನೆ ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟಿನಲ್ಲಿ ನಡೆದಿದೆ.

ಇಂದಿಗೆ ಸುಮಾರು ಹತ್ತು ದಿನ‌ ಮೊದಲು ಊರಿನ ಯುವಕನೊಬ್ಬ ತನ್ನ ಮನೆಯ ಎರಡು ನಾಯಿಗಳೊಂದಿಗೆ ಕಾಣಿಯಾಗುತ್ತಾನೆ. ಮನೆಯವರು ಹುಡುಕಲು ಆರಂಬಿಸುತ್ತಾರೆ ಎಲ್ಲಿ ಹುಡುಕಿದರು ಸುಳಿವು ಸಿಗುವುದಿಲ್ಲ.

ಮನೆಯವರು,‌ಊರವರು, ಪೋಲಿಸರು, ಸಿಕ್ಕ ಸಿಕ್ಕವರೆಲ್ಲ ದಟ್ಟ ಕಾಡಿನಲ್ಲಿ ಬಿಟ್ಟು ಬಿಡದೆ ಹುಡುಕುತ್ತಾರೆ ಒಂದೆರಡು ದಿನದಲ್ಲಿ‌ ಒಂದು ನಾಯಿ‌ ಮನೆಗೆ ವಾಪಸ್ಸು ಬರುತ್ತದೆ. ಅಲ್ಲಿಗೆ ಊರವರು ಅನಾಹುತವನ್ನು ಗೃಹಿಸುತ್ತಾರೆ ಆದರೆ ಹುಡುಕುವುದು ನಿಲ್ಲುವುದಿಲ್ಲ.

ಸಿಗದೆ ಹೋದಾಗ ದೈವ , ದೇವರುಗಳ ಮೊರೆ ಹೋಗುತ್ತಾರೆ . ಕೊರಗಜ್ಜನ ಸನ್ನಿದಿಯಲ್ಲಿ ಕೇಳಿದಾಗ ಬದುಕಿದ್ದಾನೆ ಎಂಬ ಆಶ್ವಾಸನೆ ಸಿಗುತ್ತದೆ.

ಅದಾಗಲೆ ಒಂದು ವಾರ ಕಳೆದುಹೋಗುತ್ತದೆ ಯುವಕನ ಸುಳಿವಿಲ್ಲ. ಮನೆಯವರು ಜ್ಯೋತಿಷಿಗಳ‌ ಮೊರೆ ಹೋಗುತ್ತಾರೆ. ಅದರಲ್ಲಿ ಒಂದು ಆಡಿಯೋ ಮಾತ್ರ ದಿಗ್ಬ್ರಮೆ ಗೊಳಿಸುತ್ತದೆ.

ಅದೊಂದು ಫೋನ್ ಕಾಲ್ ಸಂಭಾಷಣೆ. ಒಂದು ಕಡೆ ಒಬ್ಬ ಹೆಂಗಸ್ಸು ಮಾಂತ್ರಿಕರೊ, ತಾಂತ್ರಿಕರೊ ಇರಬಹುದು ಇನ್ನೊಂದು ಕಡೆ ಈ ಯುವಕನ ಸಂಬಂಧಿಕರು ಇದ್ದಂತಿದೆ.

ಆ ಮಹಿಳೆ ಹೇಳುತ್ತಾರೆ. ” ಹುಡುಗ ಬದುಕಿದ್ದಾನೆ. ಅವರ ಮನೆಯ ಗದ್ದೆಯಲ್ಲಿ ಒಂದು ಕಲ್ಲಿದೆ. ನೋಡಲು ಅದೊಂದು ಸಾಧಾರಣ ಕಲ್ಲು.ಆ ಕಲ್ಲಿನಲ್ಲಿ ದೇವಿ ಇದ್ದಾಳೆ. ಆ ಕಲ್ಲಿನ ಮೇಲೆ ಈತ ಆವಾಗಾವಾಗ ಕೂರತಿದ್ದ. ಈಗ ಆ ಕಲ್ಲನ್ನು ಗದ್ದೆಯ ಪಕ್ಕದಲ್ಲಿ ಎಸೆದಿದ್ದಾರೆ. ನನಗೆ ಸ್ಪಷ್ಟ ವಾಗಿ ಕಾಣುತ್ತಿದೆ ಆ ದೇವಿಯ ಕೈಯಲ್ಲಿ ಕತ್ತಿ ಇದೆ ಅವಳೆ ಅವನನ್ನು ಅಡಗಿಸಿ ಇಟ್ಟಿದ್ದಾಳೆ. ಈಗ ಮನೆಯವರು ಆ ಕಲ್ಲನ್ನು ಹುಡುಕ ಬೇಕು, ಸಂಜೆ ಆರು ಘಂಟೆಯ ನಂತರ ಕಲ್ಲಿಗೆ ಪೂಜೆ ಮಾಡಿ ಒಂದು ರೂಪಾಯಿ ನಾಣ್ಯವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಎಕ್ಕದ ಮರಕ್ಕೆ‌ ಕಟ್ಟಿ ಪ್ರಾರ್ಥಿಸಿ ಕೊಳ್ಳಬೇಕು ಹುಡುಗ ಮನೆಗೆ ಬರುತ್ತಾನೆ ” ಎಂದು ಹೇಳುತ್ತಿರುವ ಆಡಿಯೋ ಅದು.

ದಿನ ಬೆಳಗಾದರೆ ಇಂತಹ ಅದೆಷ್ಟೊ ಜ್ಯೋತಿಷಿಗಳು ಹೊಟ್ಟೆ ಪಾಡಿಗೆ ಏನೇನೊ ಹೇಳುತ್ತಿರುತ್ತಾರೆ. ಎಂಟು ದಿನ ಊಟ ವಿಲ್ಲದೆ ಸುರಿವ ಮಳೆಯಲ್ಲಿ ಕ್ರೂರ ಪ್ರಾಣಿಗಳಿರುವ ಕಾಡಿನಲ್ಲಿ ಆ ಯುವಕ ಬದುಕವ ಸಾದ್ಯತೆ ತೀರಾ ಕಡಿಮೆ‌ ಅನಿಸದಿರದು.

ಆದರೆ,ಮನೆಯವರು ಆ ಕಲ್ಲನ್ನು ಹುಡುಕಿದರು. ಆ ಕಲ್ಲಿಗೆ ಪೂಜೆ ಮಾಡಿ ದೀಪ ವಿಟ್ಟು ಬೇಡಿಕೊಂಡರು.

ಆ ರಾತ್ರಿ ಹಾಗೆ ಮುಗಿಯಿತು.

ಮರುದಿನ ಆ ಯುವಕ ತಾನಗೇನು ಆಗಿಲ್ಲ ಎಂಬಂತೆ ತನ್ನ ಇನ್ನೊಂದು ನಾಯಿ ಜೊತೆ ನಡೆದುಕೊಂಡು ಬರುತ್ತಿರುವುದನ್ನ‌ ಊರವರು ನೋಡಿ ಅವರ ಮನೆಯಲ್ಲಿರಿಸಿ ಊಟಕ್ಕೆ ಹಾಕಿ ಮನೆಯವರಿಗೆ ಸುದ್ದಿ ಮುಟ್ಟಿಸುತ್ತಾರೆ.ಈಗ ಸುತ್ತಮುತ್ತ ಎಲ್ಲ ಕಡೆ ಇದೆ ಸುದ್ದಿ. ಆ ಕಲ್ಲು, ಈ ಮಾಂತ್ರಿಕ ಮಹಿಳೆ, ಅವರು ಹೇಳಿದ ದೇವಿ. ಊಟವಿಲ್ಲದ ಎಂಟು ದಿನ ಬದುಕಿದ ಯುವಕ ಅವನನ್ನು ಬಿಟ್ಟು ಬಾರದ ನಾಯಿ. ಅದೇ ಕಾಂತಾರದ ಕಾಡು. ಅಲ್ಲಿ ಮಾಯವಾದವರು ಮತ್ತೆ ಬರಲಿಲ್ಲ. ಇಲ್ಲಿ ಈ ಯುವಕ ಬಂದಿದ್ದಾನೆ.

ಈ ವಿಜ್ಞಾನದ ಯುಗದಲ್ಲಿ ಹೀಗು ನಡೆಯುತ್ತದಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಹೌದು ಮತ್ತು ಇಲ್ಲ. ನಂಬಿದವರಿಗೆ ಹೌದು. ನಾನು ಇದೆ ಊರಿನಲ್ಲಿ ಹುಟ್ಟಿ ಬೆಳೆದಿರುವುದರಿಂದ ನಾನದನ್ನು ಬಲವಾಗಿ ನಂಬುತ್ತೇನೆ.

ನಂಬದವರಿಗೆ ಒಂದು ಅವಕಾಶವಿದೆ ಇದು ಕಥೆಯಲ್ಲ ನಿಜ ಘಟನೆ ಈಗಷ್ಟೆ ನಡೆದಿದೆ ನೀವು ಇದರ ಹಿಂದೆ‌ ಬೀಳಬಹುದು.

ರವೀಶ್

ಕಾಡಿನಲ್ಲಿ ಕಳೆದು ಹೋದ ಯುವಕನ ಹುಡುಕಿದ ನಾಯಿ! ಶ್ವಾನದ ಪತ್ತೆದಾರಿಕೆ ಹಿಂದಿದೆ ರೋಚಕ ಕಥೆ

ಸಾಕು ನಾಯಿಯ ಸಹಾಯದಿಂದ ಕಾಡಿನಲ್ಲಿ ಕಳೆದು ಹೋಗಿದ್ದ ಯುವಕ ಮನೆಗೆ ಮರಳಿದ ಘಟನೆ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಇರ್ಕಿಗದ್ದೆ‌ ನಿವಾಸಿ ವಿವೇಕಾನಂದ (28) ಎಂಬಾತ ಬರೋಬ್ಬರಿ ಒಂದು ವಾರದ ಬಳಿಕ ಮನೆಗೆ ಮರಳಿದ್ದಾನೆ. ವಿವೇಕಾನಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಸೆಪ್ಟೆಂಬರ್ 16 ರಂದು ಮನೆಯಿಂದಲೇ ನಾಪತ್ತೆಯಾಗಿದ್ದ. ಮನೆಯಿಂದ ಹೊರಡುವಾಗ ಮನೆಯ ನಾಯಿ ಕೂಡು ವಿವೇಕಾನಂದ ಅವರ ಜೊತೆ ತೆರಳಿತ್ತು ಎನ್ನಲಾಗಿದೆ.

ಈತನನ್ನು ಹುಡುಕುವ ಸಲುವಾಗಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಾಕಷ್ಟು ಶೋಧ ನಡೆಸಿದ್ದರು ಯುವಕನ ಪತ್ತೆಯಾಗಿರಲಿಲ್ಲ. ಚಿರತೆಗಳ ಕಾಟ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಚಿರತೆಗೆ ಆಹಾರವಾಗಿರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ 8 ದಿನಗಳ ಬಳಿಕ ಕಬ್ಬಿನಾಲೆಯ ಸಮೀಪದ ಮನೆ ಒಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ನಾಪತ್ತೆಯಾಗಿದ್ದ ನಾಯಿ ಮನೆಗೆ ವಾಪಸ್​ ಆಗಿ ಮನೆಯವರನ್ನು ಕಂಡ ಕೂಡಲೇ ಮರಳಿ ವಿವೇಕಾನಂದ ಬಳಿಗೆ ತೆರಳಿದಿದೆ. ಮನೆಯ ನಾಯಿ ಮರಳಿ ಮತ್ತೆ ತೆರಳುತ್ತಿದ್ದಾಗ, ಕುಟುಂಬಸ್ಥರು ನಾಯಿಯನ್ನು ಬಾಲಿಸಿದ್ದಾರೆ. ಈ ವೇಳೆ ಕುಟುಂಬಸ್ಥರಿಗೆ ವಿವೇಕಾನಂದ ಇರುವಿಕೆ ಪತ್ತೆಯಾಗಿದೆ.

ನಾಪತ್ತೆಯಾದ ಯುವಕನ ಪತ್ತೆ ಮಾಡಿದ ಸಾಕುನಾಯಿ- ಗ್ರಾಮಸ್ಥರಿಂದ ಮೆರವಣಿಗೆ

ಮನೆಯ ಸಾಕು ನಾಯಿ ಯುವಕನನ್ನ 7 ದಿನದ ಬಳಿಕ ಕರೆದುಕೊಂಡು ಬಂದಿದೆ. ಇದರಿಂದ ಇಡೀ ಗ್ರಾಮಕ್ಕೆ ಅಚ್ಚರಿ ಮತ್ತು ಸಂತಸವಾಗಿದ್ದು, 50ಕ್ಕಿಂತ ಹೆಚ್ಚು ಬೈಕ್ ಟೆಂಪೋ ಆಟೋರಿಕ್ಷಾಗಳಲ್ಲಿ ಅದ್ದೂರಿಯಾಗಿ ಇವತ್ತು ಮೆರವಣಿಗೆ ಮಾಡಿದರು .

ತೆರೆದ ವಾಹನದಲ್ಲಿ ಚಿಂಟು ಮತ್ತು ವಿವೇಕಾನಂದ ಕುಟುಂಬಸ್ಥರು ಆಪ್ತರನ್ನು ಗೆಳೆಯರ ಬಳಗ ಮೆರವಣಿಗೆ ಮಾಡಿದ್ದಾರೆ. ವಿವೇಕಾನಂದ ಮನೆಗೆ ಮರಳಿ ಬಂದ ಖುಷಿಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ರೀತಿಯಲ್ಲೇ ಆಚರಿಸಲಾಯ್ತು. ಸುತ್ತಮುತ್ತಲ ಮನೆಯವರಿಗೆ ಗೆಳೆಯರ ಬಳಗಕ್ಕೆ ಹುಡುಕಾಡಲು ಸಹಾಯ ಮಾಡಿದ ಎಲ್ಲರಿಗೆ ಶೀನಾ ನಾಯ್ಕ ಕುಟುಂಬ ಸಿಹಿಯೂಟ ನೀಡಿದರು.

ಯುವಕ ವಿವೇಕಾನಂದ ಕಣ್ಮರೆಯಾದ ನಂತರ ಜ್ಯೋತಿಷಿಗಳಲ್ಲಿ ಪ್ರಶ್ನಾ ಚಿಂತನೆ ಮಾಡಲಾಗಿತ್ತು. ದೇವಸ್ಥಾನ, ದೈವಸ್ಥಾನದ ಮೊರೆ ಹೋಗಲಾಗಿತ್ತು. ಕುಟುಂಬಸ್ಥರು ಹರಕೆಯನ್ನು ಹೊತ್ತಿದ್ದರು. ತಮ್ಮ ಜಮೀನಿನಲ್ಲಿದ್ದ ಒಂದು ವಿಶೇಷ ಕಲ್ಲಿಗೆ ಪೂಜೆ ಪುನಸ್ಕಾರವನ್ನು ಕೂಡ ಕುಟುಂಬಸ್ಥರು ನೆರವೇರಿಸಿದ್ದಾರೆ. ಕಣ್ಮರೆಯಾಗುವ ಮೊದಲು ಆ ಯುವಕ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದು, ಆ ಕಲ್ಲಿನಲ್ಲಿ ದೈವೀಶಕ್ತಿ ಇರಬಹುದು ಎಂದು ಪೋಷಕರು ನಂಬಿದ್ದಾರೆ. ಈ ಘಟನೆಯ ಸತ್ಯಾಸತ್ಯತೆ ಕುರಿತಂತೆ ಚರ್ಚೆಗಳು ನಡೆಯುತ್ತಿದೆ

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ