• 8 ಸೆಪ್ಟೆಂಬರ್ 2024

ನಾಳೆಯಿಂದ ಕುಮಾರ ಪರ್ವತ ಚಾರಣ ಸ್ಥಗಿತ

 ನಾಳೆಯಿಂದ ಕುಮಾರ ಪರ್ವತ ಚಾರಣ ಸ್ಥಗಿತ
Digiqole Ad

ನಾಳೆಯಿಂದ ಕುಮಾರ ಪರ್ವತ ಚಾರಣ ಸ್ಥಗಿತ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತಕ್ಕೆ ಚಾರಣ ಹೋಗಲು ನಾಳೆಯಿಂದ ನಿರ್ಬಂಧ ವಿಧಿಸಲಾಗಿದೆ.

ಹವಾಮಾನ ಇಲಾಖೆಯು ನಿರಂತರವಾಗಿ ಜಿಲ್ಲೆಯಲ್ಲಿ ಆರೆಂಜ್ ಆಲರ್ಟ್ ಘೋಷಿಸಿದ ಕಾರಣ ಮತ್ತು ಮಳೆಯ ಪ್ರಮಾಣ ಹೆಚ್ಚುತ್ತಿರುವ ಕಾರಣ ಚಾರಣಿಗರ ಹಿತದೃಷ್ಠಿಯಿಂದ ಅ.3ರಿಂದ ಮುಂದಿನ ಆದೇಶದ ತನಕ ಕುಮಾರಪರ್ವತ ಚಾರಣ ನಿಷೇಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೇ ತಿಂಗಳಿನಿಂದ ಸೆ.29ರ ತನಕ ಬಿರು ಬೇಸಗೆ ಮತ್ತು ಮಳೆಯ ಕಾರಣದಿಂದ ನಿರ್ಬಂಧ ವಿಧಿಸಲಾಗಿತ್ತು. ಆದರೇ ಶನಿವಾರದಿಂದ ನಿರ್ಬಂಧ ತೆರವುಗೊಳಿಸಿ ಚಾರಣಕ್ಕೆ ಜನರಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಭಾರೀ ಮಳೆಯಿಂದ ಕಡಿದಾದ ಬೆಟ್ಟವನ್ನು ಏರಲು ಚಾರಣಿಗರಿಗೆ ಅತಿಯಾದ ಸಂಕಷ್ಟ ಮತ್ತು ಕಷ್ಟವಾಗುವ ಕಾರಣ ನಿರ್ಬಂಧ ವಿಧಿಸಲಾಗಿದೆ. ಇಲಾಖೆಯ ಈ ಆದೇಶಕ್ಕೆ ಚಾರಣಿಗರು, ಪ್ರವಾಸಿಗರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಇಲಾಖೆ ವಿನಂತಿಸಿದೆ.

 

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ