• 7 ಸೆಪ್ಟೆಂಬರ್ 2024

ಏಕದಿನ ವಿಶ್ವಕಪ್: ವಿಶೇಷ ಡೂಡಲ್ ಮೂಲಕ ಶುಭ ಕೋರಿದ ಗೂಗಲ್

 ಏಕದಿನ ವಿಶ್ವಕಪ್: ವಿಶೇಷ ಡೂಡಲ್ ಮೂಲಕ ಶುಭ ಕೋರಿದ ಗೂಗಲ್
Digiqole Ad

ಏಕದಿನ ವಿಶ್ವಕಪ್: ವಿಶೇಷ ಡೂಡಲ್ ಮೂಲಕ ಶುಭ ಕೋರಿದ ಗೂಗಲ್

ವಿಶ್ವದಲ್ಲಿ ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ಏಕದಿನ ವಿಶ್ವಕಪ್ ಪಂದ್ಯ ಈ ಬಾರಿ ಭಾರತದ ಆತಿಥ್ಯದಲ್ಲಿ ನಡೆಯಲಿದ್ದು,ಗೂಗಲ್ ಕೂಡಾ ಅನಿಮೇಟೆಡ್ ಡೂಡಲ್‌ನೊಂದಿಗೆ ವಿಶ್ವಕಪ್ ಆರಂಭವನ್ನು ಸಂಭ್ರಮಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಹಬ್ಬಕ್ಕೆ ಶುಭ ಕೋರಲು ಗೂಗಲ್ ಎರಡು ಬಾತುಕೋಳಿಗಳು ವಿಕೆಟ್‌ಗಳ ನಡುವೆ ಓಡುತ್ತಿರುವ ಡೂಡಲ್ ರಚಿಸಿದೆ. ಒಮ್ಮೆ ಬಳಕೆದಾರರು ಗೂಗಲ್ ಮುಖಪುಟದಲ್ಲಿ ಡೂಡಲ್ ಅನ್ನು ಕ್ಲಿಕ್ ಮಾಡಿದರೆ, ಇಡೀ ಪಂದ್ಯಾವಳಿಯ ಪೂರ್ಣ ವೇಳಾಪಟ್ಟಿಯನ್ನು ತೋರಿಸುತ್ತದೆ.ಈ ಹಿನ್ನೆಲೆಯಲ್ಲಿ ಅನಿಮೇಟೆಡ್ ಡೂಡಲ್‌ನೊಂದಿಗೆ ವಿಶ್ವಕಪ್ ಆರಂಭವನ್ನು ಗೂಗಲ್ ಆಚರಿಸಿದೆ.

ಜಗತ್ತಿನ ಅತಿದೊಡ್ಡ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ನಡುವೆ ಮೊದಲ ಪಂದ್ಯ ನಡೆಯಲಿದೆ.

ಕ್ರಿಕೆಟ್‌ ವಿಶ್ವಕಪ್‌ ಹಿನ್ನೆಲೆಯಲ್ಲಿ ಅಹಮದಾಬಾದ್, ಮುಂಬೈ,ಲಕ್ನೋ, ದೆಹಲಿ,ಹೈದರಾಬಾದ್, ಚೆನ್ನೈ ಬೆಂಗಳೂರು, ಕೋಲ್ಕತ್ತಾ, , ಧರ್ಮಶಾಲಾ ಮತ್ತು ಪುಣೆ ಸೇರಿದಂತೆ ಪಂದ್ಯಗಳನ್ನು ಆಯೋಜಿಸುವ ವಿವಿಧ ನಗರಗಳಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಅಹಮದಾಬಾದ್‌ನ ಇತರ ಭಾಗಗಳಲ್ಲಿ ಸುಮಾರು 3,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

 

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ