• 8 ಸೆಪ್ಟೆಂಬರ್ 2024

ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ 10 ಸ್ಥಳಗಳ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ

 ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ 10 ಸ್ಥಳಗಳ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ

C6E6JC Rambouillet Forest

Digiqole Ad

ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ 10 ಸ್ಥಳಗಳಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

ರೆಸ್ಪೈರ್ ಲಿವಿಂಗ್ ಸೈನ್ಸಸ್ ಮತ್ತು ಕ್ಲೈಮೇಟ್ ಟ್ರೆಂಡ್ಸ್‌ನ ವರದಿಯ ಪ್ರಕಾರ, ಭಾರತದ ಅಗ್ರ 10 ಸ್ಥಳಗಳಲ್ಲಿ ಕರ್ನಾಟಕವು ಹೆಚ್ಚು ಸ್ಥಾನ ಪಡೆದುಕೊಂಡಿದೆ.

ಅತ್ಯಂತ ಶುದ್ಧ ಗಾಳಿ ಇರುವ ನಗರಗಳ ಪೈಕಿ ಮಿಜೋರಾಂನ ಐಜ್ವಾಲ್‌ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕದ ಚಿಕ್ಕಮಗಳೂರು ಮತ್ತು ಮೂರನೇ ಸ್ಥಾನದಲ್ಲಿ ಹರಿಯಾಣದ ಮಂಡಿಖೇರಾ )ನಗರವಿದೆ. ಉಳಿದಂತೆ 7 ಸ್ಥಾನಗಳಲ್ಲೂ ಕರ್ನಾಟಕವೇ ಇದೆ. ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ.

ದೇಶದಲ್ಲಿ ದೆಹಲಿಯಲ್ಲಿಯೇ ಅತ್ಯಂತ ವಾಯುಮಾಲಿನ್ಯ ವರದಿಯಾಗಿದೆ. 2022ರ ಅಕ್ಟೋಬರ್‌ನಿಂದ 2023ರ ಸೆಪ್ಟೆಂಬರ್‌ವರೆಗಿನ ದತ್ತಾಂಶವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಇನ್ನು ಎನ್‌ಸಿಆರ್‌ನ ಫ‌ರಿದಾಬಾದ್‌, ಘಾಜಿಯಾಬಾದ್‌, ನೋಯ್ಡಾ, ಮೀರತ್‌ ಕೂಡ ಮಾಲಿನ್ಯದಲ್ಲಿ ಅಗ್ರಸ್ಥಾನದಲ್ಲಿವೆ. ಬಿಹಾರದ ಪಾಟ್ನಾ ಹಾಗೂ ಮುಜಫ‌ರ್‌ಪುರ ಕೂಡ ಈ ಪಟ್ಟಿಗಳಲ್ಲಿದೆ.

ಅತ್ಯಂತ ಶುದ್ಧ ಗಾಳಿ ನಗರಗಳು 

ಮಿಜೋರಾಂನ ಐಜ್ವಾಲ್‌ (11 μg/m3) ಮೊದಲ ಸ್ಥಾನದಲ್ಲಿದೆ.

2 ನೇ ಸ್ಥಾನದಲ್ಲಿ ಕರ್ನಾಟಕದ ಚಿಕ್ಕಮಗಳೂರು (17.6 μg/m3 )

ಮೂರನೇ ಸ್ಥಾನದಲ್ಲಿ ಹರಿಯಾಣದ ಮಂಡಿಖೇರಾ (17.7 μg/m3) ನಗರವಿದೆ.

ಉಳಿದಂತೆ 7 ಸ್ಥಾನಗಳಲ್ಲೂ ಕರ್ನಾಟಕವೇ ಇದೆ. ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ