• 8 ಸೆಪ್ಟೆಂಬರ್ 2024

ಕನ್ನಡ ಓದುಗರ ಮನೆ ಮಾತಾಗಿದ್ದ ಮಂಗಳ ವಾರ ಪತ್ರಿಕೆ ಪ್ರಕಟಣೆ ಸ್ಥಗಿತ

 ಕನ್ನಡ ಓದುಗರ ಮನೆ ಮಾತಾಗಿದ್ದ ಮಂಗಳ ವಾರ ಪತ್ರಿಕೆ ಪ್ರಕಟಣೆ ಸ್ಥಗಿತ
Digiqole Ad

ಕನ್ನಡ ಓದುಗರ ಮನೆ ಮಾತಾಗಿದ್ದ ಮಂಗಳ ವಾರ ಪತ್ರಿಕೆ ಪ್ರಕಟಣೆ ಸ್ಥಗಿತ

ಕನ್ನಡ ಓದುಗರ ಮನೆಮಾತಾಗಿದ್ದ ಮಂಗಳ ವಾರ ಪತ್ರಿಕೆ ಸುಮಾರು 40 ವರ್ಷಗಳಿಂದ ಕನ್ನಡ ಪತ್ರಿಕಾರಂಗದಲ್ಲಿ ವರ್ಷಗಳಿಂದ ಗುರುತಿಸಿಕೊಂಡಿದ್ದ ಮಂಗಳ ವಾರಪತ್ರಿಕೆ ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ.

ಈ ಕುರಿತು ಮಂಗಳ ವಾರ ಪತ್ರಿಕೆ ಸಂಪಾದಕರು ಅಧಿಕೃತ ಪ್ರಕಟನೆಯನ್ನು ಹೊರಡಿಸಿದ್ದು. ಈ ವಾರ ಕೊನೆಯ ಸಂಚಿಕೆ ಮುದ್ರಣಗೊಂಡಿದೆ ಎಂದು ತಿಳಿಸಿದ್ದಾರೆ. 40 ವರ್ಷಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ಪತ್ರಿಕೆ ತನ್ನ ಮುದ್ರಣ ನಿಲ್ಲಿಸಿರುವುದರಿಂದಾಗಿ ಅನೇಕ ಓದುಗರ ನಿರಾಸೆಗೊಂಡಿದ್ದಾರೆ.ಆರು ವೈವಿಧ್ಯಮಯ ಕಾದಂಬರಿಗಳು ಓದುಗರ ಮನಸೂರೆಗೊಂಡು ಪ್ರಕಟಣೆಯ ಅಲ್ಪಾವಧಿಯಲ್ಲಿಯೇ ಓದುಗರ ಮನ ಗೆದ್ದದ್ದು ಇತಿಹಾಸ ಎಂದು ಹೇಳಬಹುದು.ಬದಲಾಗುತ್ತಿರುವ ಬದುಕಿನ ಶೈಲಿ, ಹೊಸ ಯುವ ಮನಸ್ಸುಗಳ ಅಭಿರುಚಿಗಳಿಗೆ 40 ವರ್ಷಗಳಿಂದ ಓದುಗರ ಒಡನಾಡಿಯಾದ ಪತ್ರಿಕೆ ಪ್ರಕಟಣೆ ನಿಲ್ಲಿಸುತ್ತಿರುವುದು ಬೇಸರದ ಸಂಗತಿ ಆಗಿದೆ.

ಕೊರೋನಾ ನಂತರ ಪತ್ರಿಕೋದ್ಯಮಕ್ಕೆ ಸಾಕಷ್ಟು ಸಂಕಟವಾಗಿತ್ತು. ಡಿಜಿಟಲ್ ಮಾಧ್ಯಮಗಳು ವೇಗವಾಗಿ ಅಭಿವೃದ್ಧಿಗೊಂಡವು . ಕಳೆದ ಮೂರು ವರ್ಷಗಳ ಕಾಲ ಮಂಗಳವನ್ನು ಮುನ್ನಡೆಸಿದರು.ಇದೀಗ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ಪತ್ರಿಕೆ ಮುದ್ರಣ ಸ್ಥಗಿತಗೊಂಡಿದೆ. ಇದರಿಂದ ಅನೇಕ ಓದುಗರಿಗೆ ನಿರಾಸೆಯುಂಟಾಗಿದೆ.

ಕಳೆದ ಸುಮಾರು 40 ವರ್ಷಗಳಿಂದ ಕನ್ನಡಿಗರ ಪಾಲಿಗೆ ಮನೆ ಮಗಳಂತಿದ್ದ ‘ಮಂಗಳ’ ವಾರ ಪತ್ರಿಕೆ ತನ್ನ ಪ್ರಕಟಣೆಯನ್ನು ಶಾಶ್ವತವಾಗಿ ನಿಲ್ಲಿಸಿದೆ. ಇದು ನಿಜಕ್ಕೂ ಕನ್ನಡ ಸಾರಸ್ವತ ಲೋಕಕ್ಕೆ ನೋವು ತರುವ ವಿಚಾರವಾಗಿದೆ. ಏಕೆಂದರೆ, ಗ್ರಾಮೀಣ ಭಾಗದಿಂದ ನಗರದವರೆಗೆ, ಸಾಹಿತಿಗಳಿಂದ ಪಾಮರರವರೆಗೆ, ಕಿರಿಯರಿಂದ ವಯೋವೃದ್ಧರವರೆಗೆ, ಗಂಡು- ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಮಂಗಳಾ ವಾರಪತ್ರಿಕೆಯ ಕೊನೆಯ ಸಂಚಿಕೆ ಈಗ ಮಾರುಕಟ್ಟೆಗೆ ಬಂದಿದೆ. ಇನ್ನೆಂದೂ ಮಂಗಳ ವಾರಪತ್ರಿಕೆ ಪ್ರಕಟವಾಗುವುದಿಲ್ಲ ಎಂದು ಸಂಪಾದಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ