• 8 ಸೆಪ್ಟೆಂಬರ್ 2024

ಪುರಿ ಜಗನ್ನಾಥ ದೇವಾಲಯ ಹೊಸ ನಿಯಮ ಜಾರಿ

 ಪುರಿ ಜಗನ್ನಾಥ ದೇವಾಲಯ ಹೊಸ ನಿಯಮ ಜಾರಿ
Digiqole Ad

ಪುರಿ ಜಗನ್ನಾಥ ದೇವಾಲಯ ಹೊಸ ನಿಯಮ ಜಾರಿ

ಪುರಿ ಜಗನ್ನಾಥ ದೇವಾಲಯಕ್ಕೆ ಆಗಮಿಸುವ ಭಕ್ತರು ಇನ್ನು ಜೀನ್ಸ್, ಸ್ಕರ್ಟ್ ತೊಡುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಸೂಚಿನೆ ನೀಡಿದ್ದು.ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವುದು ಮುಖ್ಯ. ಕೆಲವರು ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡದೆ ದೇವಸ್ಥಾನದಲ್ಲಿ ಜೀನ್ಸ್ ಪ್ಯಾಂಟ್, ಸ್ಲೀವ್ ಲೆಸ್ ಡ್ರೆಸ್ , ಹಾಕಿಕೊಂಡು ಸಮುದ್ರ ತೀರದಲ್ಲಿ ಉದ್ಯಾನವನದಲ್ಲಿ ತಿರುಗಾಡುತ್ತಾರೆ. ದೇವಸ್ಥಾನ ದೇವರ ನೆಲೆಬೀಡು ಹೊರತು ಮನರಂಜನಾ ಸ್ಥಳವಲ್ಲವೆಂದು ಆಡಳಿತ ಮಂಡಳಿ ಹೇಳಿದ್ದು, ಯಾವ ರೀತಿಯ ಉಡುಪು ಧರಿಸಲು ಅನುಮತಿ ನೀಡಬೇಕು ಎಂಬುದನ್ನು ಶೀಘ್ರದಲ್ಲೇ ತೀರ್ಮಾನಿಸುವುದಾಗಿ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಜನವರಿ 1, 2024 ರಿಂದ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಡ್ರೆಸ್‌ ಕೋಡ್‌ ಅನ್ವಯವಾಗಲಿದೆ ಎಂದು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ರಂಜನ್ ಕುಮಾರ್ ದಾಸ್ ತಿಳಿಸಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ