• 8 ಸೆಪ್ಟೆಂಬರ್ 2024

ಮಂಗಳೂರು: ರೈಲ್ವೆ ನಿಲ್ದಾಣದ ಸೂಚನಾ ಫಲಕದಕಲ್ಲಿ ಕನ್ನಡ ಮಾಯ!

 ಮಂಗಳೂರು: ರೈಲ್ವೆ ನಿಲ್ದಾಣದ ಸೂಚನಾ ಫಲಕದಕಲ್ಲಿ ಕನ್ನಡ ಮಾಯ!
Digiqole Ad

ಮಂಗಳೂರು: ರೈಲ್ವೆ ನಿಲ್ದಾಣದ ಸೂಚನಾ ಫಲಕದಕಲ್ಲಿ ಕನ್ನಡ ಮಾಯ!

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಸೂಚನಾ ಫಲಕದಲ್ಲಿ ಕನ್ನಡ ಭಾಷೆಯೇ ಮಾಯವಾಗಿದ್ದು, ವಿವಾದಕ್ಕೆ ಕಾರಣವಾಗಿದೆ ಹಾಗೂ ಜಾಲತಾಣದಲ್ಲಿ ಬಹಳ ಆಕ್ರೋಶ ವ್ಯಕ್ತವಾಗುತ್ತಿದೆ. ಸಾರ್ವಜನಿಕರು ಮತ್ತು ರೈಲ್ವೆ ನೌಕರರ ಸಂಘದ ಒತ್ತಡಕ್ಕೆ ಮಣಿದ ಅಧಿಕಾರಿಗಳು ಶನಿವಾರ ಫಲಕವನ್ನು ತೆಗೆದಿದ್ದು, ರೈಲ್ವೆ ಪ್ರಯಾಣಿಕರು ಹೊಸ ಸೂಚನಾ ಫಲಕದಲ್ಲಿ ಮಲಯಾಳಂ ಬದಲಿಗೆ ಕನ್ನಡವನ್ನು ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ನಿಲ್ದಾಣದಲ್ಲಿ ಅವಡಿಸಿರುವ ಒಂದು ಫಲಕದಲ್ಲಿ ‘ಮಂಗಳೂರು ಜಂಕ್ಷನ್ ರನ್ನಿಂಗ್ ರೂಮ್’ ಎಂದು ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂನಲ್ಲಿ ಭಾಷೆಯಲ್ಲಿ ಮಾತ್ರ ಬರೆಯಲಾಗಿದೆ. ಇದನ್ನು ಗಮನಿಸಿದ ರೈಲ್ವೆ ಯೂನಿಯನ್ ಸದಸ್ಯರು ಪಾಲಕ್ಕಾಡ್ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ