• 8 ಸೆಪ್ಟೆಂಬರ್ 2024

ವಾಹನ ಮಾಲೀಕರೇ HSRP ನಂಬರ್ ಪ್ಲೇಟ್ ಇಲ್ಲದಿದ್ದರೆ ದಂಡ!

 ವಾಹನ ಮಾಲೀಕರೇ HSRP ನಂಬರ್ ಪ್ಲೇಟ್ ಇಲ್ಲದಿದ್ದರೆ ದಂಡ!
Digiqole Ad

ವಾಹನ ಮಾಲೀಕರೇ HSRP ನಂಬರ್‌ ಪ್ಲೇಟ್‌ ಇಲ್ಲದಿದ್ದರೆ ದಂಡ….!

ನಿಮ್ಮ ವಾಹನ 2019 ರ ಏಪ್ರಿಲ್1 ಮೊದಲು ನೋಂದಣಿಯಾಗಿದ್ದರೆ, ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ನಂಬರ್‌ ಪ್ಲೇಟ್‌ ಅಳವಡಿಸುವುದು ಕಡ್ಡಾಯವಾಗಿವೆ. ಹೀಗಾಗಿ ರಾಜ್ಯ ಸರ್ಕಾರ ಅನುಮತಿ ನೀಡಿರುವ ಅಧಿಕೃತ ಡೀಲರ್‌ಶಿಪ್‌ ಬಳಿ ಮಾತ್ರವೇ ನಂಬರ್‌ ಪ್ಲೇಟ್‌ ಹಾಕಿಸಬೇಕಾಗಿದೆ.

ಹಳೆಯ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ನಂಬರ್‌ ಪ್ಲೇಟ್‌ ಅಳವಡಿಸಲು ಸಾರಿಗೆ ಇಲಾಖೆ ನವೆಂಬರ್‌ 17, 2023 ರ ವರೆಗೂ ಕಾಲಾವಕಾಶ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ 4000ಕ್ಕೂ ಹೆಚ್ಚಿನ ಡೀಲರ್‌ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ.

ಏನಿದು HSRP ನಂಬರ್‌ ಪ್ಲೇಟ್‌ :
ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಇದು ಟ್ಯಾಂಪರ್-ಪ್ರೂಫ್ ವಾಹನ ನೋಂದಣಿ / ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಹೊಂದಿರುವ ಅಲ್ಯೂಮಿನಿಯಂ ನಿಂದ ಮಾಡಲ್ಪಟ್ಟ ನಂಬರ್ ಪ್ಲೇಟ್ ಆಗಿದೆ. ರೆಟ್ರೊ ರಿಫ್ಲೆಕ್ಟಿವ್ ಶೀಟ್‌ನೊಂದಿಗೆ ಹಾಟ್-ಸ್ಟ್ಯಾಂಪ್ಡ್ ಆಲ್ಫಾ ಸಂಖ್ಯಾವಾಚಕ ಹಾಗೂ ಲೇಸರ್ ಕೋಡ್ ಪಡೆದಿರುತ್ತದೆ.

HSRP ನಂಬರ್‌ ಪ್ಲೇಟ್‌ ಶುಲ್ಕ ಎಷ್ಟು?
ದ್ವಿಚಕ್ರ ವಾಹನಗಳಿಗೆ ಜೋಡಿ HSRP ನಂಬರ್‌ ಪ್ಲೇಟ್‌ ದರ 390ರೂ. ದಿಂದ 440ರೂ. ವರೆಗೆ ಆಗಿದೆ. ಅದೇ ರೀತಿ ನಾಲ್ಕು ಚಕ್ರದ ವಾಹನಗಳಿಗೆ ಜೋಡಿ HSRP ನಂಬರ್‌ ಪ್ಲೇಟ್‌ ಶುಲ್ಕವು 680 ರೂ. ದಿಂದ 690 ರೂ. ವರೆಗೂ ಆಗಿರುತ್ತದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ