• 8 ಸೆಪ್ಟೆಂಬರ್ 2024

ಗೋವು

 ಗೋವು
Digiqole Ad

ಗೋವು

ಪುಣ್ಯಕೋಟಿ ಎಂಬ ಗೋವಿನ ಹಾಡನ್ನು ಕೇಳದವರು ಯಾರೂ ಇರಲ್ಲ. ನಾವೆಲ್ಲ ಚಿಕ್ಕವರಿದ್ದಾಗ ಆ ಹಾಡಿಗೆ ಹೆಜ್ಜೆ ಹಾಕಿದವರು.. ಗೋ ಮಾತೆಯ ಹಾಡನ್ನು ಕೇಳುವಾಗ ಕಣ್ತುಂಬ ನೀರು.. ಈ ಧರಣಿ ಮಂಡಲ ಮಧ್ಯದೊಳಗೆ ಹಾಡನ್ನು ಬರೆದ ಆ ಮಹಾ ಕವಿಗಳಿಗೆ ನಾವು ಎಷ್ಟು ಕೈ ಮುಗಿದರೂ ಕಡಿಮೆಯೆ..

ಇಂತಹ ಹಲವಾರು ಗೋವಿನ ಕತೆಗಳು. ನಮ್ಮ ಮನವನ್ನು ಕಲಕಿ ಬಿಡುತ್ತದೆ.. ಈಗ ಬರುವ ದೀಪಾವಳಿಯ ಹಬ್ಬಕ್ಕೆ. ನಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿರುವ. ಗೋ ಪೂಜೆಯೂ ಒಂದು . ಹಟ್ಟಿಯನ್ನು ಸಿಂಗರಿಸಿ. ರಾತ್ರಿ ದೀಪ ಬೆಳಗಿಸಿ ಹಸುಗಳಿಗೆ ಆರತಿ ಮಾಡಿ ಹೂವಿನ ಹಾರ ಹಾಕಿ. ತಿನಿಸನ್ನು ನೀಡುತ್ತೇವೆ.. ನಾವು ಇಷ್ಟೆಲ್ಲ ಮಾಡಿದರು.. ಗೋವಿನ ಕಣ್ಣೀರಿನ ಕತೆ ಇನ್ನೂ ನಿಂತಿಲ್ಲ .. ದಿನಾ ಪ್ರತೀ ಗೋ ಕಳ್ಳರಿಂದ ಕಸಾಯಿ ಖಾನೆ ಸೇರಿ ನರಕಯಾತನೆಯಿಂದ. ಕಣ್ಣೀರು ಸುರಿಸುತ್ತ ಪ್ರಾಣ ಬಿಡುತ್ತದೆ. ಪುಣ್ಯಕೋಟಿ ಹಾಗು ವ್ಯಾಘ್ರದ ಈಗಿನ ಕಾಲದ ಕತೆಯನ್ನು ನೋಡಿದರೆ .. ಸಾದುಜೀವಿ ಗೋವಿನ ಜೀವಕ್ಕೆ ಯಾವುದೇ ಬೆಲೆಯಿಲ್ಲ.. ಅದೇ ದುಷ್ಟ ಖೂಳ ವ್ಯಾಘ್ರ ಹುಲಿಯ ಜೀವಕ್ಕೆ ಅಂದೆತ ಭದ್ರತೆ..! ಹುಲಿ ಬೇಟೆಯಾಡಿದವರಿಗೆ ಕಾನೂನು ಕಾಯ್ದೆಗಳ ಮೂಲಕ ಹಲವು ರೀತಿಯ ಶಿಕ್ಷೆಗಳು ದಂಡಗಳು ಇವೆ. ಹೆಚ್ಚೇಕೆ ಈಗೀಗ ಹುಲಿ ಉಗುರಿನ ಚರಿತ್ರೆ ನಾವೇ ಕೇಳ್ತಿದ್ದೀವಿ ಅಲ್ವಾ.. ಹುಲಿಯ ಚರ್ಮ ಸಿಕ್ಕಿದರೂ.. ಬೇಟೆಗಾರನ ಚರ್ಮ ಸುಳಿದು ಬಿಡುತ್ತಾರೆ ಇಲಾಖೆಯವರು. ಆದರೆ ಮುಗ್ದ ಗೋವಿನ ಸಾಗಾಟ ಮಾತ್ರ ಇಲಾಖೆಯವರ ಕಣ್ಣಿಗೆ ಕಾಣೋದೆ ಇಲ್ಲ .. ಜೀವಂತ ಗೋವಿನ ಚರ್ಮ ಸುಲಿದರೂ. ಅದರ ಆಕ್ರಂದನ ಇಲಾಖೆಯವರ ಕಿವಿಗೂ ಬೀಳಲ್ಲ.. ಬಿದ್ದರೂ ಎದ್ದು ದೂರ ಹೋಗಿ ನಿಂತ್ತು ತಮಗೇನು ತಿಳಿಯಂದತ್ತೆ ಇದ್ದು ಬಿಡುತ್ತಾರೆ…

ಹಣ ಮುಖ್ಯವೋ.. ಅಥವ ಹಿಡಿಯಲು ಹೋದರೆ ಹೆಣವಾದಿತೊ ಎಂಬ. ಭಯ ಮತ್ತು ದುರಾಸೆಯಿಂದ. ಪ್ರತೀ ದಿನ ಗೋಮಾಂಸ ತಯಾರಾಗುತ್ತಲೇ ಇದೆ.. ಗೋರಕ್ಷಣೆ ಮಾಡುವವರ ಮೇಲೆ ಮಾತ್ರ ಇಲಾಖೆಯವರ ಕಣ್ಣು ಇದ್ದೇ ಇರುತ್ತದೆ.. ಇದು ವಿಪರ್ಯಾಸ.

ಹಿಂದೆ ಎಷ್ಟೇ ಬಡವನಾದರು ಮುರುಕಲು ಗುಡಿಸಲಿನೊಂದಿಗೆ ಒಂದು ದನದ ಹಟ್ಟಿ ಇರುತಿತ್ತು.. ಕಾಡು ಮೇಡುಗಳಲ್ಲಿ ಹಸು ಎಮ್ಮೆ ಕೋಣಗಳು ಮೇಯಲು ಹೋದರೆ ಹುಲಿ ಚಿರತೆಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದವು.. ಆದರೆ ಈಗ ನರವ್ಯಾಘ್ರರೇ ಗೋ ಭಕ್ಷಕರಾಗಿ ಈ ಸಾದು ಮೂಕಜೀವಿಗಳ ಪ್ರಾಣಕ್ಕೆ ಕುತ್ತು ಆಗಿರುವುದು ದುರಂತ.. ಪೂಜಿಸೊ ಕಾಮಧೇನು ಕಾಸುಮಾಡುವ ಒಂದು ವಸ್ತುವಿನಂತ್ತಾಗಿಗೆ … ಗೋವು ಮಾತ್ರವಲ್ಲ ಆಹಾರಕ್ಕಾಗಿ ಬಲಿಯಾಗುವ ಪ್ರತೀ ಜೀವಿಗಳ ಪ್ರಾಣಕ್ಕೆ ಬೆಲೆಯೇ ಇಲ್ಲ. ಈಗಿನ ಕಾಲದಲ್ಲಿ ಮಾನವನ ಬುದ್ಧಿ ಎಷ್ಟು ಕೆಟ್ಟಿದೆ ಎಂದರೆ. ಮಾನವೀಯತೆ ಇಲ್ಲದ ಮೃಗವಾಗಿ ಪರಿವರ್ತನೆಗೊಂಡಿದ್ದಾನೆ . ಕನಿಕರ ಕರುಣೆಯೆಂಬುದು ಇಲ್ಲದಂತಾಗಿದೆ. ಕ್ರೌರ್ಯ ದುಷ್ಕೃತ್ಯಕ್ಕೆ ತೊಡಗಿ ಸರ್ವನಾಶಕ್ಕೂ ತಯಾರಾಗಿದ್ದಾನೆ. ಕಾರಣ ತಪ್ಪು ಮಾಡಿದಾಗ ದಂಡಿಸುವ ಶಿಕ್ಷೆ ನೀಡುವಲ್ಲಿ ಸಡಿಲತೆ.. ಕಠಿಣ ಕ್ರಮಗಳ ಭಯವಿಲ್ಲ .. ಯಾವ ಅಪರಾಧ ಮಾಡಿದರೂ ಏನೂ ಆಗಲ್ಲ ಎಂಬ ಕಟ್ಟುಪಾಡು..

ಸೃಷ್ಟಿಯ ನಿಯಮದಲ್ಲಿ ನಾವೆಲ್ಲರೂ ಒಂದೇ.. ಸಕಲ ಜೀವಿಗಳಂತೆ ನಾವು ಜೀವಿಗಳು .. ಬುದ್ದಿ ಇದ್ದರೂ ಬುದ್ದಿ ಬರದ ಇರದ ಜೀವಿಗಳು.. ನಮ್ಮ ಸ್ವಾರ್ಥಕ್ಕಾಗಿ ಇತರ ಪ್ರಾಣಿಗಳ ವಧೆ ಮಾಡುತ್ತಾ. ಮುಂದೊಂದು ದಿನ ನರಮೇಧವನ್ನು ಮಾಡುತ್ತಾ. ಮಾನವ ಲೋಕದ ಅಂತ್ಯವನ್ನು. ಮಾನವನೇ ಮಾಡಿ ಮುಗಿಸುತ್ತಾನೆ..

ಆದಷ್ಟು ಪ್ರಾಣಿಗಳ ಮೇಲೆ ಕರುಣೆ ತೋರಿಸೋಣ.. ಅದಕ್ಕೂ ಜೀವಿಸುವ ಹಕ್ಕಿದೆ ಎಂಬುದನ್ನು ಅರಿತು ಬಾಳೋಣ.. ಗೋ ಪೂಜೆಯಂದೆ ಮಾತ್ರ ಗೋವಿನ ಸ್ಮರಣೆ ಮಾಡದೆ. ದಿನನಿತ್ಯ ಸ್ಮರಿಸಿ. ಗೋಮಾತೆಯನ್ನು ನಮ್ಮ ಮಾತೆಯಂತೆ ನೋಡಿಕೊಳ್ಳೋಣ.. ಗೋಮುಖ ವ್ಯಾಘ್ರರಾಗದೆ.. ಮಾನವತೆಯಿಂದ ಬದುಕಿ ಬಾಳೊಣ..

ಜಗತನ್ನು ಬೆಳಗಿಸೊ ಬೆಳಕು ನಮ್ಮ ಮನ ಮನೆಗಳ ಬೆಳಗಿಸಿ. ಕಾರುಣ್ಯ ವಿರದ ಕಠೋರ ಕತ್ತಲೆಯನ್ನು ಹೊಡೆದೋಡಿಸಿ. ಜ್ಞಾನವೆಂಬ ಬೆಳಕನ್ನು ತುಂಬಿ ಎಲ್ಲರೂ ಪ್ರೀತಿ ನೀತಿಯಿಂದ ಬದುಕುವಂತೆ ಬದಲಾವಣೆಯಾಗಲಿ .. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..

ಯಂ.ರಾಮ ಈಶ್ವರಮಂಗಲ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ