• 7 ಸೆಪ್ಟೆಂಬರ್ 2024

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಸರಳ ಸಾಮೂಹಿಕ ವಿವಾಹಕ್ಕೆ ಏನೇನು ದಾಖಲೆಗಳು ಬೇಕು?

 ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ  ಸರಳ ಸಾಮೂಹಿಕ ವಿವಾಹಕ್ಕೆ ಏನೇನು ದಾಖಲೆಗಳು ಬೇಕು?
Digiqole Ad

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಸರಳ ಸಾಮೂಹಿಕ ವಿವಾಹಕ್ಕೆ ಏನೇನು ದಾಖಲೆಗಳು ಬೇಕು?

ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಕಾರದ ನಿರ್ದೇಶನದಂತೆ ಜ.31ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ.ಡಿ.31ರ ಒಳಗೆ ವಧು ವರರು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.ದೇವಾಲಯದಲ್ಲಿ ವಿವಾಹವಾಗುವವರು ಕೂಡಲೇ ದೇವಳದ ಕಚೇರಿಯಿಂದ ಅರ್ಜಿ ಪಡೆದು ತಮ್ಮ ಅರ್ಜಿಯನ್ನು ಸಲ್ಲಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.08257-281224,236200,281700,281423,281265 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ಕೊಳ್ಳಬಹುದು ಅಥವಾ ದೇವಳದ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು .ಜ.31ರಂದು ಬೆಳಿಗ್ಗೆ 11.20ರಿಂದ 12.20ರ ವರೆಗೆ ನಡೆಯುವ ಅಭಿಜಿನ್ ಲಗ್ನ ಸುಮೂರ್ಹುತದಲ್ಲಿ ವಿವಾಹ ನಡೆಯಲಿದೆ.ಜ.5ರಂದು ನೋಂದಾಯಿತ ವಧು ವರರ ವಿವರಗಳನ್ನು ದೇವಳದಲ್ಲಿ ಪ್ರಕಟಿಸಲಾಗುವುದು.ಜ.10 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ,ಜ.15 ವಧು ವರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.ವಧು ವರರು ತಮ್ಮ ಪೂರ್ಣ ವಿಳಾಸ ದೊಂದಿಗೆ ಜನನ ದಿನಾಂಕ ದೃಢೀಕರಿಸುವ ಶಾಲಾ ದೃಢ ಪತ್ರ ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೋ -2 ,ಆಧಾರ್ ಕಾರ್ಡ್,ಪಡಿತರ ಚೀಟಿ, ವಧು ವರರ ಬ್ಯಾಂಕ್ ಉಳಿತಾಯ ಖಾತೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್ ಅಥವಾ ಸಂಬಂಧಪಟ್ಟ ಸರಕಾರಿ ಇಲಾಖೆಯ ಅಧಿಕಾರಿಗಳಿಂದ ದೃಢ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.ಸರಳ ಸಾಮೂಹಿಕ ವಿವಾಹವಾಗುವ ವರನಿಗೆ ದೇವಾಲಯದಿಂದ ಹೂವಿನ ಹಾರ, ಪಂಚೆ,ಶಲ್ಯ, ಶರ್ಟ್,ಪೇಟ, ಬಾಸಿಂಗಕ್ಕಾಗಿ ಪ್ರೋತ್ಸಾಹ ಧನ 5 ಸಾವಿರ , ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರಗಳಿಗೆ ರೂ.10ಸಾವಿರ ನೀಡಲಾಗುವುದು.ಸುಮಾರು 40 ಸಾವಿರ ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ಒದಗಿಸಲಾಗುವುದು.ವಿವಾಹಕ್ಕೆ ಆಗಮಿಸುವ ವಧು ವರರು ಮತ್ತು ಅವರ ಸಂಬಂಧಿಕರಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಅವಶ್ಯಕವಾದ ವ್ಯವಸ್ಥೆಯನ್ನು ದೇವಾಲಯದಿಂದ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ