• 8 ಸೆಪ್ಟೆಂಬರ್ 2024

ರೆಪೋ ದರ ಯಥಾಸ್ಥಿತಿ: ಬ್ಯಾಂಕ್ ಸಾಲಗಾರರಿಗೆ ಅನುಕೂಲ

 ರೆಪೋ ದರ ಯಥಾಸ್ಥಿತಿ: ಬ್ಯಾಂಕ್ ಸಾಲಗಾರರಿಗೆ ಅನುಕೂಲ
Digiqole Ad

ರೆಪೋ ದರ ಯಥಾಸ್ಥಿತಿ: ಬ್ಯಾಂಕ್ ಸಾಲಗಾರರಿಗೆ ಅನುಕೂಲ

ಈ ಬಾರಿಯೂ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಥಾಸ್ಥಿತಿಯನ್ನು ಮುಂದುವರಿಸಿದ್ದು ಆ ಮೂಲಕ ಬ್ಯಾಂಕ್ ಸಾಲದ ಬಡ್ಡಿದರ ಏರಿಕೆ ಆತಂಕದಲ್ಲಿದ್ದ ಗ್ರಾಹಕರಿಗೆ ಗುಡ್‌ನ್ಯೂಸ್ ನೀಡಿದೆ. ವಿತ್ತೀಯ ನೀತಿ ಸಮಿತಿ ಸಭೆಯ ನಿರ್ಧಾರಗಳ ಕುರಿತು ಮಾಹಿತಿ ನೀಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೊ ದರವನ್ನು ಶೇ.6.5ರಲ್ಲೇ ಮುಂದುವರಿಸಲಾಗುತ್ತದೆ ಎಂದು ಘೋಷಿಸಿದ್ದಾರೆ. RBI ಸತತ 5ನೇ ಬಾರಿಗೆ ರೆಪೋ ದರದಲ್ಲಿ ಏರಿಕೆ ಮಾಡದೆ ಯಥಾಸ್ಥಿತಿಯನ್ನು ಕಾಪಾಡುತ್ತಿದೆ. ರೆಪೋ ದರ ಪರಿಷ್ಕರಣೆ ಆಧರಿಸಿ ಬ್ಯಾಂಕ್‌ಗಳು ಬಡ್ಡಿದರ ಏರಿಸುತ್ತವೆ. ರೆಪೊ ದರದ ಹೆಚ್ಚಳದೊಂದಿಗೆ, ಗ್ರಾಹಕರು ತೆಗೆದುಕೊಳ್ಳುವ ಸಾಲದ EMI ಹೆಚ್ಚಾಗುತ್ತದೆ, ಆದರೆ ಅದರ ಇಳಿಕೆಯು ಸಾಲದ EMI ಅನ್ನು ಕಡಿಮೆ ಮಾಡುತ್ತದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ