• 8 ಸೆಪ್ಟೆಂಬರ್ 2024

ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್‌

 ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್‌
Digiqole Ad

ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್‌

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಪಂಚ ಸದಸ್ಯ ಸಾಂವಿಧಾನಿಕ ಪೀಠ ಎತ್ತಿಹಿಡಿದಿದೆ. ಈ ಸಂಬಂಧ ಕೇಂದ್ರದ ನಿರ್ಧಾರದ ಪ್ರಶ್ನಿಸಿದ್ದ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು,ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ತೀರ್ಪು ಪ್ರಕಟಿಸಿದೆ.370ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿತ್ತು ಎಂದೂ ಮಹತ್ವದ ಅಭಿಪ್ರಾಯ ನೀಡಿದೆ. 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ಒಕ್ಕೂಟದೊಂದಿಗೆ ಸಾಂವಿಧಾನಿಕ ಏಕೀಕರಣಕ್ಕಾಗಿ ಉದ್ದೇಶಿಸಲಾಗಿತ್ತು ಮತ್ತು ಅದು ವಿಭಜನೆಗಾಗಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಮತ್ತು 370ನೇ ವಿಧಿ ಅಸ್ತಿತ್ವದಲ್ಲಿಲ್ಲ ಎಂದು ರಾಷ್ಟ್ರಪತಿ ಘೋಷಿಸಬಹುದು ಎಂದೂ ಹೇಳಿದ್ದಾರೆ.ವಿಶೇಷ ಸಂದರ್ಭಗಳಲ್ಲಿ ಆರ್ಟಿಕಲ್ 370 ಯನ್ನು ಜಾರಿಗೊಳಿಸುವ ಅಥವಾ ಹಿಂಪಡೆಯುವ ಹಕ್ಕನ್ನು ಕೇವಲ ಸಂಸತ್ತು ಮಾತ್ರ ಹೊಂದಿದೆ. ಯಾವುದೇ ರಾಜ್ಯದ ವಿಧಾನಸಭೆಗಳು ಈ ವಿಶೇಷ ಸ್ಥಾನಮಾನವನ್ನು ಜಾರಿ ಮಾಡಲು ಅಥವಾ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾನೂನಿನ ಜಾರಿಯ ವೇಳೆ ಕೇಂದ್ರ ಸರ್ಕಾರ ತನ್ನ ಏಕಸ್ವಾಮ್ಯ ನಿರ್ಧಾರ ಪ್ರಕಟಿಸಬಹುದಾಗಿದ್ದು ಅದಕ್ಕೆ ವಿಧಾನಸಭೆಗಳ ಅನುಮೋದನೆ ಅಗತ್ಯವಿಲ್ಲ ಎಂದಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿರುವುದನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್‌ನ ಪಂಚಪೀಠವು ಕೆಲವೊಂದು ಸೂಚನೆಗಳನ್ನು ಕೂಡ ಸರ್ಕಾರಕ್ಕೆ ನೀಡಿದೆ. ಅದರಂತೆ 2024ರ ಸೆಪ್ಟೆಂಬರ್ 30ರೊಳಗೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕು. ಅಲ್ಲದೆ, ಲಡಾಕ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿರುವ ಕೇಂದ್ರದ ನಿರ್ಧಾರ ಕೂಡ ಸರಿಯಿದೆ ಎಂದು CJI DYಚಂದ್ರಚೂಡ್ ಅವರನ್ನು ಒಳಗೊಂಡಿರುವ ಪೀಠ ಇದೀಗ ಐತಿಹಾಸಿಕ ತೀರ್ಪು ಪ್ರಕಟಿಸಿದೆ. 2019ರ ಆ.5ರಂದು ಮೋದಿ ಸರ್ಕಾರ 370ನೇ ವಿಧಿ ರದ್ದುಗೊಳಿಸಿತ್ತು

ಆರ್ಟಿಕಲ್ 370 ಸುಪ್ರೀಂಕೋರ್ಟ್ ಹೇಳಿದ್ದೇನು?

* ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ

* ಆರ್ಟಿಕಲ್ 370 ಕೇವಲ ತಾತ್ಕಾಲಿಕ ಸ್ಥಾನಮಾನ

* ಪ್ರತ್ಯೇಕ ಸಾರ್ವಭೌಮತ್ವ ಹೊಂದಲು ಸಾಧ್ಯವಿಲ್ಲ

* ಯುದ್ಧದ ಸಂದರ್ಭದಲ್ಲಿ ಆರ್ಟಿಕಲ್ 370 ತಾತ್ಕಾಲಿಕವಾಗಿ ಜಾರಿಯಾಗಿದೆ

* 370ನೇ ಕಲಂ ರದ್ದಿಗೆ ವಿಧಾನಸಭೆಯ ಅನುಮತಿ ಅಗತ್ಯವಿಲ್ಲ

* ಜಮ್ಮು ಕಾಶ್ಮೀರದ ಏಕೀಕರಣವನ್ನು 370ನೇ ಕಲಂ ತಡೆಹಿಡಿಯಲು ಸಾಧ್ಯವಿಲ್ಲ

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ