• 8 ಸೆಪ್ಟೆಂಬರ್ 2024

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾಣಿಯೂರು ಚುನಾವಣೆ. ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ.

 ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾಣಿಯೂರು ಚುನಾವಣೆ. ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ.
Digiqole Ad

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾಣಿಯೂರು ಚುನಾವಣೆ. ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ.

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾಣಿಯೂರು ಇದರ ನಿರ್ದೇಶಕರ ಸ್ಥಾನಗಳಿಗೆ 17-12-2023ರಂದು ಚುನಾವಣೆ ನಡೆಯಲಿದೆ.ಈ ಚುನಾವಣೆಗೆ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಾಗಿ ಸಾಮಾನ್ಯ ಸ್ಥಾನಕ್ಕೆ ಗಣೇಶ್ ಉದನಡ್ಕ, ಬಾಲಕೃಷ್ಣ ಇಡ್ಯಡ್ಕ, ಅನಂತ್ ಕುಮಾರ್ ಬೈಲಂಗಡಿ, ಸುಂದರ ದೇವಸ್ಯ, ಪರಮೇಶ್ವರ ಅನಿಲ, ಹಿಂದುಳಿದ ವರ್ಗ.ಎ ಸ್ಥಾನಕ್ಕೆ ವಿಶ್ವನಾಥ್ ಕೂಡಿಗೆ, ಮಹಿಳಾ ಸ್ಥಾನಕ್ಕೆ ವೀಣಾ ಹರೀಶ್ ಅಂಬುಲ, ಶೀಲಾವತಿ ಪುಟ್ಟಣ್ಣ ಮುಗರಂಜ,, ಹಿಂದುಳಿದ ವರ್ಗ ಬಿ.ಸ್ಥಾನಕ್ಕೆ ಲೋಕೇಶ್ ಆತಾಜೆ, ಎಸ್. ಟಿ ಮೀಸಲು ಸ್ಥಾನಕ್ಕೆ ರಮೇಶ್ ಉಪ್ಪಡ್ಕ,, ಎಸ್ ಸಿ ಮೀಸಲು ಸ್ಥಾನಕ್ಕೆ ರತ್ನ ಮುದ್ವ, ಸಾಲಗಾರರಲ್ಲದ ಕ್ಷೇತ್ರ ದಿಂದ ದಿವಾಕರ ಮರಕ್ಕಡರವರು ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಸುಳ್ಯತಾಲೂಕು ಅಕ್ರಮ ಸಕ್ರಮ ಸಮಿತಿಯ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಏಲಡ್ಕ ಶ್ರೀ ಶೀರಾಡಿ ರಾಜನ್ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕ ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡ ಕರಂದ್ಲಾಜೆ,ಚಾರ್ವಾಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ,ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು,ನಿರ್ದೇಶಕರಾದ ಪುಟ್ಟಣ್ಣ ಗೌಡ ಮುಗರಂಜ,ಹರೀಶ್ ಅಂಬುಲ,ಪೂರ್ಣಿಮಾ ಬೆದ್ರಾಜೆ,ಮಾಜಿ ಅಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು,ಚಾರ್ವಾಕ ಹಾಲು ಉ.ಸ.ಸಂಘದ ಅಧ್ಯಕ್ಷ ಧನಂಜಯ ಕೇನಾಜೆ,ದೋಳ್ಪಾಡಿ ಹಾ.ಉ.ಸ.ಸಂಘದ ಅಧ್ಯಕ್ಷ ಆನಂದ ಬನೇರಿ, ರೈತ ಮೋರ್ಚಾದ ಪ್ರದೀಪ್ ಬೊಬ್ಬೆಕೇರಿ, ಕಾಣಿಯೂರು ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಗೌಡ ಖಂಡಿಗ,ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜತ್ತಪ್ಪ ಗೌಡ ಉದಲಡ್ಡ,ಕಾಣಿಯೂರು ಗ್ರಾ.ಪಂ.ಮಾಜಿ ಸದಸ್ಯರಾದ ಬೆಳಿಯಪ್ಪ ಗೌಡ ದೇವರತ್ತಿಮಾರು, ವೆಂಕಪ್ಪ ಗೌಡ ಬೀರೋಳಿಗೆ,ಹರಿಶ್ಚಂದ್ರ ನೀಟಡ್ಕ,ಸುರೇಶ್ ಓಡಬಾಯಿ, ವೀರಪ್ಪ ಗೌಡ ಉದಲಡ್ಡ,ಪದ್ಮನಾಭ ಅಂಬುಲ,ರುಕ್ಮಿಣಿ ನಾಗಲೋಕ,

ಸಹಕಾರ ಭಾರತಿಯ ಶಿವರಾಮ ರೈ ಪಿಜಕ್ಕಳ,ಕಾಣಿಯೂರು ಗ್ರಾ.ಪಂ ಸದಸ್ಯರು,ಚಾರ್ವಾಕ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕರು, ಹಾಲು ಉತ್ಪಾದಕರ ಸಂಘ ಕಾಣಿಯೂರು ಮತ್ತು ಚಾರ್ವಾಕ ಇದರ ನಿರ್ದೇಶಕರು,ಸಹಕಾರ ಭಾರತಿಯ ಪ್ರಮುಖರು ಹಾಗೂ ನೂರಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ