• 8 ಸೆಪ್ಟೆಂಬರ್ 2024

ಜನಪದ ಸಂಶೋಧಕ ಡಾ. ಸುಂದರ ಕೇನಾಜೆ ನಿರ್ದೇಶಿಸಿರುವ ‘ಪುರ್ಸ ಕಟ್ಟುನ’ ಸಾಕ್ಷ್ಯ ಚಿತ್ರ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆ

 ಜನಪದ ಸಂಶೋಧಕ ಡಾ. ಸುಂದರ ಕೇನಾಜೆ ನಿರ್ದೇಶಿಸಿರುವ ‘ಪುರ್ಸ ಕಟ್ಟುನ’ ಸಾಕ್ಷ್ಯ ಚಿತ್ರ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆ
Digiqole Ad

ಜನಪದ ಸಂಶೋಧಕ ಡಾ. ಸುಂದರ ಕೇನಾಜೆ ನಿರ್ದೇಶಿಸಿರುವ ‘ಪುರ್ಸ ಕಟ್ಟುನ’ ಸಾಕ್ಷ್ಯ ಚಿತ್ರ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆ

ಸುಳ್ಯ ಡಿ.7: ಕೇರಳದ ತ್ರಿಶೂರಿನಲ್ಲಿ 2024ರ ಜ.5ರಿಂದ ಜ. 9ರವರೆಗೆ ನಡೆಯಲಿರುವ 7ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಜನಪದ ಸಂಶೋಧಕ ಡಾ.ಸುಂದರ ಕೇನಾಜೆ ನಿರ್ದೇಶಿಸಿರುವ ತುಳು ಸಾಕ್ಷ್ಯಚಿತ್ರ ‘ಪುರ್ಸ ಕಟ್ಟುನ:ಇನಿ-ಕೋಡೆ-ಎಲ್ಲೆ’ ಆಯ್ಕೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯ ಚಿತ್ರ ಇದಾಗಿದ್ದು, ವಿಕಿಪೀಡಿಯ ಫೌಂಡೇಶನ್ ತಯಾರಿಸಿ, ಭರತೇಶ ಅಲಸಂಡೆ ಮಜಲು ಹಾಗೂ ಡಾ. ವಿಶ್ವನಾಥ ಬದಿಕಾನ ನಿರ್ಮಾಣ ಮಾಡಿದ್ದಾರೆ. ಡಾ. ಸುಂದರ ಕೇನಾಜೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ಭಾರತದ ಬೇರೆ ಬೇರೆ ಭಾಷೆಗಳಿಂದ ಆಯ್ಕೆಯಾದ ಒಟ್ಟು 70 ಸಾಕ್ಷ್ಯಚಿತ್ರಗಳು ಈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ತುಳು ಭಾಷೆಯ ಎಕೈಕ ಸಾಕ್ಷ್ಯಚಿತ್ರವಾಗಿ ‘ಪುರ್ಸ ಕಟ್ಟುನ’ ಆಯ್ಕೆಯಾಗಿದ್ದು ವಿಶೇಷವಾಗಿದೆ. ಚಲನಚಿತ್ರೋತ್ಸವದಲ್ಲಿ ಸಾಕ್ಷ್ಯಚಿತ್ರಗಳ ಜೊತೆಗೆ ಜಗತ್ತಿನ ಬೇರೆ ಬೇರೆ ದೇಶಗಳಿಂದ ಆಯ್ಕೆಯಾದ 310 ಚಲನ ಚಿತ್ರಗಳು ಕೂಡ ಪ್ರದರ್ಶನಗೊಳ್ಳಲಿವೆ.

ತುಳುನಾಡಿನಲ್ಲಿ ಕಂಡು ಬರುವಂತಹ ಜನಪದ ಕುಣಿತ ಮತ್ತು ತಾಂತ್ರಿಕ ಪಂಥದ ಕುರಿತು ಮುತುವರ್ಜಿ ವಹಸಿ ಸಂಶೋಧನೆ ಮಾಡಿ ನಿರ್ಮಿಸಲಾದ ಸಾಕ್ಷ್ಯಚಿತ್ರವೇ ‘ಪುರ್ಸ ಕಟ್ಟುನ’. ಮಧ್ಯಕಾಲೀನ ಕರ್ನಾಟಕದ ತಾಂತ್ರಿಕ ಪಂಥಗಳ ಪ್ರಭಾವದಿಂದ ದಕ್ಷಿಣ ಕನ್ನಡ ಜಿಲ್ಲೆಯ‌ ಕೆಲವೊಂದು ಭಾಗಗಳಲ್ಲಿ ಈಗಲೂ ಕಂಡಬರುವ ಕುಣಿತ ‘ಪುರ್ಸ ಕಟ್ಟುನ’. ಬೆಳ್ತಂಗಡಿ ತಾಲೂಕಿನ ಕುದುರೆಮುಖ ಘಟ್ಟದ ತಳಭಾಗದಲ್ಲಿ ಇಂದಿಗೂ ಪ್ರಚಲಿತದಲ್ಲಿರುವ ಈ ಕುಣಿತ ಸುಗ್ಗಿ ತಿಂಗಳಲ್ಲಿ ನಡೆಯುತ್ತದೆ. ತುಳು ಭಾಷೆ ಮಾತಾಡುವ ಹಲವು ಜನಾಂಗಗಳು ಒಟ್ಟು ಸೇರಿ ನಡೆಸುವ ಈ ಕುಣಿತ ಮೂಲತಃ ಗೌಡ ಜನಾಂಗ ನಡೆಸಿಕೊಂಡು ಬಂದದ್ದು ಎಂದು ಹೇಳಲಾಗಿದೆ. ಈ ಸಾಕ್ಷ್ಯ ಚಿತ್ರವು 40 ನಿಮಿಷದ್ದಾಗಿದ್ದು, ಯೂಟ್ಯೂಬ್, ವಿಕಿಪೀಡಿಯ ಕಾಮನ್ಸ್ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ