• 8 ಸೆಪ್ಟೆಂಬರ್ 2024

ರಾಜ್ಯದಲ್ಲಿ ರೂಪಾಂತರಿ ವೈರಸ್ ಹೆಚ್ಚಳ: ಜನವರಿ 2ರಿಂದ ಮತ್ತೆ ವ್ಯಾಕ್ಸಿನ್ ಆರಂಭ

 ರಾಜ್ಯದಲ್ಲಿ ರೂಪಾಂತರಿ ವೈರಸ್ ಹೆಚ್ಚಳ: ಜನವರಿ 2ರಿಂದ ಮತ್ತೆ ವ್ಯಾಕ್ಸಿನ್ ಆರಂಭ
Digiqole Ad

ರಾಜ್ಯದಲ್ಲಿ ರೂಪಾಂತರಿ ವೈರಸ್ ಹೆಚ್ಚಳ: ಜನವರಿ 2ರಿಂದ ಮತ್ತೆ ವ್ಯಾಕ್ಸಿನ್ ಆರಂಭ

ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ರೂಪಾಂತರ ವೈರಸ್ JN.1 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನವರಿಯಲ್ಲಿ ಇನ್ನಷ್ಟು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಕ್ಸಿನ್ ಆರಂಭಿಸಲು ಮುಂದಾಗಿದೆ . ರಾಜ್ಯದಲ್ಲಿ ಶೇ 50% ಕ್ಕೂ ಹೆಚ್ಚು ಒಮಿಕ್ರಾನ್ ರೂಪಾಂತರಿ JN.1 ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಜನವರಿ 2ರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ವ್ಯಾಕ್ಸಿನ್ ಅಭಿಯಾನ ಶುರು ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯಾದ್ಯಂತ ಉಚಿತ ಕೋರ್ಬಿವ್ಯಾಕ್ಸ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಕೊರೊನಾ JN.1 ರೂಪಾಂತರಿ ಹಾವಳಿ ಹಿನ್ನಲೆ ಆರೋಗ್ಯ ಇಲಾಖೆ ವ್ಯಾಕ್ಸಿನ್ ಮೊರೆ ಹೋಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮತ್ತೆ ವ್ಯಾಕ್ಸಿನ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಾಥಮಿಕ ಹಂತದಲ್ಲಿ 30 ಸಾವಿರ ಕೋರ್ಬಿವ್ಯಾಕ್ಸಿನ್ ಲಸಿಕೆ ಖರೀದಿಗೆ ಸರ್ಕಾರ ಮುಂದಾಗಿದೆ. ಇದೀಗ 15,800 ಲಸಿಕೆಯನ್ನು ಖರೀದಿ ಮಾಡಲಾಗಿದ್ದು, ಇಂದಿನಿಂದಲೇ ಲಸಿಕೆಗಳನ್ನ ರಾಜ್ಯದಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಿಗೆ ವ್ಯಾಕ್ಸಿನ್ ನೀಡಲು ಪ್ಲಾನ್ ಮಾಡಿದೆ. ಹೀಗಾಗಿ ಈಗ ಮತ್ತೆ ಯಾರು ಲಸಿಕೆ ಪಡೆದಿಲ್ಲ ಅವರೆಲ್ಲ ಮುನ್ನೆಚ್ಚರಿಕಾ ದೃಷ್ಠಿಯಿಂದ ವ್ಯಾಕ್ಸಿನ್ ಪಡೆಯುವಂತೆ ಸೂಚಿಸಿದೆ. ಕೋಮಾರ್ಬಿಟಿಸ್ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮೂರನೇ ಡೋಸ್ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ