• 8 ಸೆಪ್ಟೆಂಬರ್ 2024

ಫಾರಂ ಕೋಳಿ ತೂಕದಲ್ಲಿ‌ ಮೋಸ; ವಂಚಕರನ್ನು ಮರಕ್ಕೆ ಕಟ್ಟಿಹಾಕಿದ ರೈತ

 ಫಾರಂ ಕೋಳಿ ತೂಕದಲ್ಲಿ‌ ಮೋಸ; ವಂಚಕರನ್ನು ಮರಕ್ಕೆ ಕಟ್ಟಿಹಾಕಿದ ರೈತ
Digiqole Ad

ಫಾರಂ ಕೋಳಿ ತೂಕದಲ್ಲಿ‌ ಮೋಸ; ವಂಚಕರನ್ನು ಮರಕ್ಕೆ ಕಟ್ಟಿಹಾಕಿದ ರೈತ

ಮಂಡ್ಯ,ಜ.2: ಕೋಳಿ ಫಾರಂ ನಲ್ಲಿ ಮಾಂಸದ ಕೋಳಿಯ ತೂಕದಲ್ಲಿ ಮೋಸ ಮಾಡಲು ಯತ್ನಿಸಿದವರನ್ನು ಮರಕ್ಕೆ ಕಟ್ಟಿಹಾಕಿದ ಘಟನೆ ಪಾಂಡವಪುರ ತಾಲೂಕಿನ ಚಿಕ್ಕ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.ರೈತ ಹನುಮಂತೇಗೌಡ ಅವರಿಗೆ ಸೇರಿದ ಕೋಳಿಫಾರಂನಲ್ಲಿ ಈ ವಂಚನೆ ನಡೆದಿದೆ.

ಹನುಂತೇಗೌಡ ತಮ್ಮ ಕೋಳಿ ಫಾರಂನಲ್ಲಿ ಸಾಕು ಕೋಳಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದರು. ಮೈಸೂರು ಮೂಲದ ಎನ್.ಆರ್ ಚಿಕನ್ ಕಂಪನಿ ಕೋಳಿ ಖರೀದಿಸುತ್ತಿತ್ತು. ವಾಹನಕ್ಕೆ ಕೋಳಿ ತುಂಬುವ ವೇಳೆಯಲ್ಲಿ ತೂಕದಲ್ಲಿ ಮೋಸ ಮಾಡುತ್ತಿದ್ದರು. ಅನುಮಾನಗೊಂಡ ರೈತ ಬೇರೆ ತೂಕದ ಯಂತ್ರ ತರಿಸಿ ತೂಕ ಮಾಡಿದಾಗ ವಂಚನೆ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಒಮ್ಮೆ ತೂಗುವಾಗ ತೂಕದಲ್ಲಿ ರೈತನಿಗೆ ಸುಮಾರು 30 ಕೆಜಿ ವ್ಯತ್ಯಾಸ ಕಂಡು ಬಂದಿದೆ. ಇದರಿಂದ ಆಕ್ರೋಶ ಗೊಂಡ ರೈತ ಹನುಮಂತೇಗೌಡ ಕೋಳಿ ತುಂಬಲು ಬಂದಿದ್ದ ನಾಲ್ವರಲ್ಲಿ ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಿಹಾಕಿದ್ದಾರೆ‌.

ತೂಕದಲ್ಲಿ ಮೋಸ ಮಾಡಿ ಇದುವರೆಗೂ ವಂಚಿಸಿದವರ ವಿರುದ್ದ ಪೊಲೀಸರಿಗೆ ದೂರು ನೀಡಲಾಗಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ