• 8 ಸೆಪ್ಟೆಂಬರ್ 2024

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ; ನೇಸರ ಯುವಕ ಮಂಡಲ ಹಾಗೂ ಮುಕ್ಕೂರು ಭಕ್ತವೃಂದದಿಂದ ಶ್ರಮದಾನ

 ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ; ನೇಸರ ಯುವಕ ಮಂಡಲ ಹಾಗೂ ಮುಕ್ಕೂರು ಭಕ್ತವೃಂದದಿಂದ ಶ್ರಮದಾನ
Digiqole Ad

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ; ನೇಸರ ಯುವಕ ಮಂಡಲ ಹಾಗೂ ಮುಕ್ಕೂರು ಭಕ್ತವೃಂದದಿಂದ ಶ್ರಮದಾನ

ಬೆಳ್ಳಾರೆ, ಜ.24: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವವು ವೈಭವದಿಂದ ನಡೆದಿದ್ದು, ಬಂಟಿಂಗ್ಸ್, ಕಂಬ ತೆರವು ಕಾರ್ಯ ‌ಜ.23 ರಂದು ಮುಕ್ಕೂರು ಭಕ್ತವೃಂದದಿಂದ ನಡೆಯಿತು.

ದೇವರ ಅವಭೃತ ನಡೆಯುವ ಜಳಕದ ಗುಂಡಿ ಬಳಿಯಿಂದ ಮಾಸ್ತಿಕಟ್ಟೆ ದೇವಾಲಯದ ಪ್ರವೇಶ ದ್ವಾರದ ತನಕದ ರಸ್ತೆ ಇಕ್ಕೆಲಗಳಲ್ಲಿ ಅಲಂಕಾರದ ಜವಾಬ್ದಾರಿಯನ್ನು ನೇಸರ ಯುವಕ ಮಂಡಲ, ಮುಕ್ಕೂರು ಭಕ್ತವೃಂದ ವಹಿಸಿಕೊಂಡಿತು. ಮುಕ್ಕೂರು ವಾರ್ಡ್ ಭಕ್ತವೃಂದ, ನೇಸರ ಯುವಕ ಮಂಡಲದ ಸದಸ್ಯರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸ್ವಯಂಸೇವಕ ಸೇವಕ ವಿಭಾಗದ ಉಸ್ತುವಾರಿ ಜಯಪ್ರಕಾಶ್ ರೈ ಪೆರುವಾಜೆ, ವ್ಯವಸ್ಥಾಪನ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ