• 8 ಸೆಪ್ಟೆಂಬರ್ 2024

ತಣ್ಣೀರುಬಾವಿ ಬೀಚ್‌ನಲ್ಲಿ ಅಪರೂಪದ ಆಮೆ ಮೊಟ್ಟೆ!

 ತಣ್ಣೀರುಬಾವಿ ಬೀಚ್‌ನಲ್ಲಿ ಅಪರೂಪದ ಆಮೆ ಮೊಟ್ಟೆ!
Digiqole Ad

ತಣ್ಣೀರುಬಾವಿ ಬೀಚ್‌ನಲ್ಲಿ ಅಪರೂಪದ ಆಮೆ ಮೊಟ್ಟೆ!

ಮಂಗಳೂರು: ತಣ್ಣೀರುಬಾವಿ ಬೀಚ್ ನಲ್ಲಿ ಅಪರೂಪದ ಆಲೀವ್ ರೆಡ್ ಲೇ ಆಮೆಯು 1985ರ ಬಳಿಕ ಇದೇ ಮೊದಲ ಬಾರಿಗೆ ಸಾವಿರಾರು ಮೊಟ್ಟೆ ಇಟ್ಟಿದ್ದು, ಇದನ್ನು ಅರಣ್ಯ ಇಲಾಖೆಯಿಂದ ಸಂರಕ್ಷಿಸಲಾಗಿದೆ. ಮೊಟ್ಟೆ ಮರಿಯಾದ ಬಳಿಕ ಅವುಗಳನ್ನು ಸುರಕ್ಷಿತವಾಗಿ ಕಡಲಿಗೆ ಬಿಡಲಾಗುತ್ತದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಣ್ಣೀರುಬಾವಿ ಕಡಲ ತೀರಕ್ಕೆ ಭೇಟಿ ನೀಡಿ ಸಂರಕ್ಷಣೆ ಮಾಡಿರುವ ಆಲೀವ್ ರೆಡ್ ಲೇ ಆಮೆ ಮೊಟ್ಟೆಗಳ ಸ್ಥಳದ ವೀಕ್ಷಣೆ ಮಾಡಿದ್ದಾರೆ. ಈ ಅಪರೂಪದ ಆಮೆ ಮೊಟ್ಟೆ ಸಂರಕ್ಷಣೆಗೆ ಅರಣ್ಯ ಸಿಬ್ಬಂದಿ ವಹಿಸಿರುವ ಕಾಳಜಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ