• 8 ಸೆಪ್ಟೆಂಬರ್ 2024

ಗದಗ ಜಿಲ್ಲಾಸ್ಪತ್ರೆಯಲ್ಲಿ ರೀಲ್ಸ್ !; 38 ವಿದ್ಯಾರ್ಥಿಗಳ ಅಮಾನತು!

 ಗದಗ ಜಿಲ್ಲಾಸ್ಪತ್ರೆಯಲ್ಲಿ ರೀಲ್ಸ್ !; 38 ವಿದ್ಯಾರ್ಥಿಗಳ ಅಮಾನತು!
Digiqole Ad

ಗದಗ ಜಿಲ್ಲಾಸ್ಪತ್ರೆಯಲ್ಲಿ ರೀಲ್ಸ್ !; 38 ವಿದ್ಯಾರ್ಥಿಗಳ ಅಮಾನತು!

ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆಸ್ಪತ್ರೆ ಆವರಣದಲ್ಲಿ ರೀಲ್ಸ್‌ ಮಾಡಿದ ನಂತರ 38 ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಹಾಗೂ ಹಿಂದಿ ಹಾಡಿಗೆ ನೃತ್ಯ ಮಾಡುವುದುದು ಕಂಡುಬಂದಿದೆ. ಇದು ವೈರಲ್‌ ಆದ ಬೆನ್ನಲ್ಲೇ ಜಿಮ್ಸ್‌ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಸಸ್ಪೆಂಡ್‌ ಮಾಡಿದೆ.

“ಕೆಲಸದ ಸಂದರ್ಭಗಳಲ್ಲಿ ಎಂಥೆತಾ ದೊಡ್ಡ ಅಧಿಕಾರಿಗಳು ದೊಡ್ಡ ತಪ್ಪುಗಳನ್ನು ಮಾಡುತ್ತಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಿ. ಉದಾಹರಣಗೆ ಕೆಲಸಕ್ಕೆ ತಡವಾಗಿ ಬರುವುರು, ವೃತ್ತಿ ಧರ್ಮಕ್ಕೆ ದ್ರೋಹ ಬಗೆಯುತ್ತಿರುವವರನ್ನು ಅಮಾನತು ಮಾಡಿ. ಅದು ಬಿಟ್ಟು ಕೆಲಸದ ಒತ್ತಡವನ್ನು ನಿವಾರಿಸಿಕೊಳ್ಳಲು ರೀಲ್ಸ್‌ ಮಾಡುವ ವಿದ್ಯಾರ್ಥಿಗಳನ್ನು ಅಮಾನತು ಮಾಡುವುದು ಎಷ್ಟರ ಮಟ್ಟಿಗೆ ಸರಿ” ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಗದಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ರೀಲ್ಸ್ ವೈರಲ್ ಆಗುತ್ತಿದ್ದಂತೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಅವರು 38 ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತು ಮಾಡಿ ಆದೇಶಿಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳು ಪ್ರೇಮಲೋಕ ಚಿತ್ರದ ಹಲೋಮೈ ಲವಿಲೇಡಿ ಹೂ ಆರ್ ಯು ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಆಸ್ಪತ್ರೆಯ ತೀವ್ರ ನಿಗಾ ಘಟಕ, ಶಿಶು ಆರೈಕೆ ಕೇಂದ್ರ, ಚೀಟಿಬರೆಯುವ ಸ್ಥಳದಲ್ಲಿಯೂ ಹೆಜ್ಜೆ ಹಾಕಿದ್ದಾರೆ.

ವೈದ್ಯಕೀಯವಿದ್ಯಾರ್ಥಿಗಳಸಾಮಾಜಿಕಜಾಲತಾಣದಲ್ಲಿಸಾಕಷ್ಟು ವೈರಲ್ ಆಗಿದ್ದು, ನಿಮ್ಮ ಹುಚ್ಚಾಟಕ್ಕೆಬೇರೆ ಜಾಗ ಸಿಗಲಿಲ್ಲವೇ ಎನ್ನುವ ಆಕ್ರೋಶ ‌ ಭರಿತಪ್ರತಿಕ್ರಿಯೆಗಳು ಸಹ ವ್ಯಕ್ತವಾಗಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ