• 8 ಸೆಪ್ಟೆಂಬರ್ 2024

ಕತಾರ್‌ನಿಂದ ನಿವೃತ್ತ ಯೋಧರು ಸ್ವದೇಶಕ್ಕೆ ವಾಪಸ್

 ಕತಾರ್‌ನಿಂದ ನಿವೃತ್ತ ಯೋಧರು ಸ್ವದೇಶಕ್ಕೆ ವಾಪಸ್
Digiqole Ad

ಕತಾರ್‌ನಿಂದ ನಿವೃತ್ತ ಯೋಧರು ಸ್ವದೇಶಕ್ಕೆ ವಾಪಸ್!

ಬೇಹುಗಾರಿಕೆ ಆರೋಪದ ಮೇಲೆ ಕತಾರ್ ಜೈಲಿನಲ್ಲಿದ್ದ ೮ ಮಂದಿ ಮಾಜಿ ಯೋಧರು ಬಿಡುಗಡೆಯಾಗಿದ್ದು ತಡರಾತ್ರಿ ನವದೆಹಲಿಗೆ ಬಂದು ಇಳಿದಿದ್ದಾರೆ. ಇದರೊಂದಿಗೆ ಕಾನೂನು ಸಮರದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ವಿಜಯ ಪ್ರಾಪ್ತವಾಗಿದೆ.

೧೮ ತಿಂಗಳ ಜೈಲು ವಾಸದ ನಂತರ ಭಾರತಕ್ಕೆ ಮರಳಿದ್ದು ಕೇಂದ್ರ ಸರ್ಕಾರದ ಮಧ್ಯಪ್ರವೇಶ ಮಾಡಿದ ಬಳಿಕ ಮರಣದಂಡನೆಯನ್ನು ವಿಸ್ತೃತ ಜೈಲು ಶಿಕ್ಷೆಯಾಗಿ ಬದಲಿಸಲಾಗಿತ್ತು.ನೌಕಾಪಡೆಯ ನಿವೃತ್ತ ಅಧಿಕಾರಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಹೇಳಿಕೆ ಹೊರಬಿದ್ದಿದೆ.

ಕತಾರ್‌ನಲ್ಲಿ ಬಂಧನಕ್ಕೊಳಗಾಗಿದ್ದ ನಿವೃತ್ತ ಯೋಧರು ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ೮ ಮಂದಿ ಬಿಡುಗಡೆ ಮಾಡಿರುವುದನ್ನು ಕೇಂದ್ರ ಸರ್ಕಾರ ಸ್ವಾಗತಿಸುತ್ತದೆ. ೮ ಮಂದಿಯಲ್ಲಿ ೭ ಮಂದಿಯಲ್ಲಿ ಭಾರತಕ್ಕೆ ವಾಪಸ್ ಆಗಿದ್ದಾರೆ.ಭಾರತೀಯ ಪ್ರಜೆಗಳು ಪ್ರದೇಶಕ್ಕೆ ವಾಪಾಸ್ಸಾಗಲು ಅನುವು ಮಾಡಿಕೊಟ್ಟು ಕತಾರ್ ರಾಜ್ಯದ ಅಮಿರ್ ಅವರ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಪ್ರಂಶಸೆ ವ್ಯಕ್ತಪಡಿಸಿದೆ.

ಭಾರತೀಯ ಪ್ರಜೆಗಳು ಅ. ೨೨ ರಲ್ಲಿ ಜಲಾಂತರ್ಗಾಮಿ ಕಾರ್ಯಕ್ರಮದ ವೇಳೆ ಬೇಹುಗಾರಿಕೆ ನಡೆಸಿದ್ದ ಆರೋಪದ ಮೇಲೆ ೮ ಮಂದಿ ನಿವೃತ್ತಿ ಯೋಧರು ಕತಾರ್ ಜೈಲಿನಲ್ಲಿದ್ದರು. ಈ ಆರೋಪಕ್ಕಾಗಿ ನೌಕಾಪಡೆ ಸಿಬ್ಬಂದಿಗೆ ಕತಾರ್ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು.ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕಾನೂನು ಸಮರ ನಡೆಸಿ ನಿವೃತ್ತಿ ಯೋಧರ ನೆರವಿಗೆ ಧಾವಿಸಿತ್ತು.

ನೌಕಾಪಡೆ ಯೋಧರು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವಂತೆ ಯೋಧರ ಕುಟುಂಬ ಸದಸ್ಯರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಕೇಂದ್ರ ಸರ್ಕಾರ ಪ್ರಯತ್ನದಿಂದಾಗಿ ೭ ಮಂದಿ ಈಗಾಗಲೇ ಭಾರತಕ್ಕೆ ವಾಪಸ್ಸಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

Digiqole Ad

ಈ ಸುದ್ದಿಗಳನ್ನೂ ಓದಿ