• 8 ಸೆಪ್ಟೆಂಬರ್ 2024

ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿಯಲ್ಲಿ ಕಾಲಾವಧಿ ಜಾತ್ರೋತ್ಸವ ಹಾಗೂ ಶ್ರೀ ಗುಳಿಗ ದೈವಕ್ಕೆ ಕೋಲ ಸಮರ್ಪಣೆ ಮತ್ತು ಹನುಮ ನೇಮೋತ್ಸವ

 ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿಯಲ್ಲಿ ಕಾಲಾವಧಿ ಜಾತ್ರೋತ್ಸವ ಹಾಗೂ ಶ್ರೀ ಗುಳಿಗ ದೈವಕ್ಕೆ ಕೋಲ ಸಮರ್ಪಣೆ ಮತ್ತು ಹನುಮ ನೇಮೋತ್ಸವ
Digiqole Ad

ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿಯಲ್ಲಿ ಕಾಲಾವಧಿ ಜಾತ್ರೋತ್ಸವ ಹಾಗೂ ಶ್ರೀ ಗುಳಿಗ ದೈವಕ್ಕೆ ಕೋಲ ಸಮರ್ಪಣೆ ಮತ್ತು ಹನುಮ ನೇಮೋತ್ಸವ

ದಿನಾಂಕ 26-02-2024 ರಿಂದ 28-02-2024 ವರೆಗೆ ಆಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿಯಲ್ಲಿ ಕಾಲಾವಧಿ ಜಾತ್ರೋತ್ಸವ ಹಾಗೂ ಶ್ರೀ ಗುಳಿಗ ದೈವಕ್ಕೆ ಕೋಲ ಸಮರ್ಪಣೆ ಮತ್ತು ಹನುಮ ನೇಮೋತ್ಸವ ಕಾರ್ಯಕ್ರಮವು ವಿಜ್ರಂಬಣೆಯಿಂದ ಜರುಗಲಿದೆ.

ದಿನಾಂಕ26-02-2024 ರಂದು ಬೆಳಗ್ಗೆ ಗಂಟೆ 8 ಕ್ಕೆ ಸ್ಥಳ ಶುದ್ದಿ ಕರಣ ಗಣಪತಿ ಹವನ ಹಾಗೂ ಬೆಳಗ್ಗೆ 10 ಗಂಟೆಯಿಂದ ಶ್ರೀನಾಗ ಸನ್ನಿಧಿಯಲ್ಲಿ ನಾಗ ತಂಬಿಲ ಸೇವೆ ನಡೆಯಲಿದೆ ಪೂರ್ವಾಹ್ನ ಹನ್ನೊಂದು ಗಂಟೆಗೆ ಉಗ್ರಾಣ ಮಹೂರ್ತ ಹಸಿರುವಾಣಿ ಸಮರ್ಪಣೆ, ಮಧ್ಯಾಹ್ನ ಸರಿಯಾಗಿ 1 ಗಂಟೆಗೆ ಶ್ರೀ ದೇವರಿಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಚಂದ್ರಕಲಾ ಅಡ್ಕಾರು ಇವರ ಸಾರಥ್ಯದಲ್ಲಿ “ಕಲಾಕೇಸರಿ ನೃತ್ಯ” ತಂಡ ಇವರಿಂದ ನೃತ್ಯ ಸಂಭ್ರಮ ನಡೆಯಲಿದೆ. ರಾತ್ರಿಯ ಒಂಬತ್ತರಿಂದ ಶ್ರೀ ದೇವರಿಗೆ ರಂಗ ಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಮುಂದುವರೆಯುವುದು.

ದಿನಾಂಕ 27-02-2024ರಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ದೇವರಿಗೆ ಸಿಯಾಳ ಅಭಿಷೇಕ ಪಂಚಾಮೃತ ಅಭಿಷೇಕ ಪವಮಾನ ಅಭಿಷೇಕ ನಡೆಯುವುದು ನಂತರ ಬೆಳಿಗ್ಗೆ 6:49 ಸೂರ್ಯೋದಯಕ್ಕೆ ದೀಪ ಪ್ರತಿಷ್ಠೆ ಅಹ: ಪೂರ್ಣ ಭಜನಾ ಕಾರ್ಯಕ್ರಮ ಗಂಟೆ 11.00ಕ್ಕೆ ದೈವ ರಾಜ ಗುಳಿಗ ಸಾನಿಧ್ಯದಲ್ಲಿ ದೇವಕ್ರಿಯ ತಂಬಿಲ ಸೇವೆ ನಡೆಯುವುದು ಮಧ್ಯಾಹ್ನ ಗಂಟೆ ಒಂದು ಮೂವತ್ತಕ್ಕೆ ಶ್ರೀ ದೇವರಿಗೆ ಮಹಾಪೂಜೆ ಬ್ರಹ್ಮ ಸಂತರ್ಪಣೆ ಅನ್ನದಾನವು ನಡೆಯುವುದು ಹಾಗು ಸಂಜೆ ಮೂರಕ್ಕೆ ಇಳoತಾಜೆ ತರವಾಡಿನಲ್ಲಿ ವೀಳ್ಯ ನೀಡಿ ಹನುಮ ದೈವದ ಬಂಡಾರ ತರುವುದು. ಸಂಜೆ 6.37ಕ್ಕೆ ವಿವಿಧ ಸಂಘಗಳಿಂದ ಭಜನ ರಾತ್ರಿ ಗಂಟೆ ಏಳಕ್ಕೆ ಗುಳಿಗ ದೈವದ ಭಂಡಾರ ತೆಗೆಯುವುದು. ರಾತ್ರಿ ಗಂಟೆ 7:30 ರಿಂದ ಶ್ರೀ ಆಂಜನೇಯ ಸ್ವಾಮಿಯ ಅಂಕಣ ಪ್ರವೇಶ ಮತ್ತು ನೇಮೋತ್ಸವ ಪ್ರಸಾದ ವಿತರಣೆಯು ನಡೆಯುವುದು ರಾತ್ರಿ ಎಂಟು ಮೂವತ್ತರಿಂದ ಗುಳಿಗೆ ದೈವದ ನೇಮೋತ್ಸವ 9 ರಿಂದ ಅಲಂಕಾರ ಪೂಜೆ ಬಳಿಕ ಶ್ರೀದೇವರ ಬಲಿ ಉತ್ಸವ ಶ್ರೀ ಭೂತ ಬಲಿ ಕಟ್ಟೆ ಪೂಜೆ ಶ್ರೀ ದರ್ಶನ ಬಲಿ ದೈವದೇವರ ಭೇಟಿ ಬಟ್ಟಲು ಕಾಣಿಕೆ ಪೂಜೆಯ ನಂತರ ಶ್ರೀ ದೇವರ ಮುಡಿಗಂಧ ಪ್ರಸಾದ ವಿತರಿಸಲಾಗುವುದು.

ದಿನಾಂಕ 28.2.2022ನೇ ಬೆಳಿಗ್ಗೆ ಗಂಟೆ ಒಂಬತ್ತರಿಂದ ಶ್ರೀ ದೇವರಿಗೆ ನವಕ ಕಳಸಾಭಿಷೇಕ ಎಳನೀರು ಅಭಿಷೇಕ 11ರಿಂದ ಭಜನಾ ಕಾರ್ಯಕ್ರಮವು ನಡೆಯಲಿದೆ ಹಾಗೂ ಮಧ್ಯಾಹ್ನ ಒಂದರಿಂದ ಮಹಾಪೂಜೆ ಸಂಪ್ರೋಕ್ಷಣೆ ಮಂತ್ರಾಕ್ಷತೆ ಅನ್ನಸಂತರ್ಪಣೆ ನಡೆದು ಅಂಜನಾದ್ರಿ ಕ್ಷೇತ್ರದ ಕಾಲಾವಧಿ ಜಾತ್ರಾ ಮಹೋತ್ಸವ ಹಾಗೂ ಹನುಮ ನೇಮೋತ್ಸವ ಮುಕ್ತಾಯಗೊಳ್ಳುವುದು.

Digiqole Ad

ಈ ಸುದ್ದಿಗಳನ್ನೂ ಓದಿ