• 8 ಸೆಪ್ಟೆಂಬರ್ 2024

ಬಸವಣ್ಣ ಕುರಿತು ಪ್ರಬಂಧ, ಕವನ ಸ್ಪರ್ಧೆ; ವಿಜೇತರಿಗೆ ಭರ್ಜರಿ ನಗದು ಬಹುಮಾನ!

 ಬಸವಣ್ಣ ಕುರಿತು ಪ್ರಬಂಧ, ಕವನ ಸ್ಪರ್ಧೆ; ವಿಜೇತರಿಗೆ ಭರ್ಜರಿ ನಗದು ಬಹುಮಾನ!
Digiqole Ad

ಬಸವಣ್ಣ ಕುರಿತು ಪ್ರಬಂಧ, ಕವನ ಸ್ಪರ್ಧೆ; ವಿಜೇತರಿಗೆ ಭರ್ಜರಿ ನಗದು ಬಹುಮಾನ!

ಬಸವ ಸಮಿತಿ ವತಿಯಿಂದ ಬಸವೇಶ್ವರ ಜಯಂತಿ ಪ್ರಯುಕ್ತ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ವಿವಿಧ ವಿಷಯಗಳ ಮೇಲೆ ಪ್ರಬಂಧ ಸ್ಪರ್ಧೆ ಹಾಗೂ ಕವನ ಸ್ಪರ್ಧೆಗಳು ನಡೆಯಲಿದೆ.

ವಿಷಯ?

ಅರಿವು–ಆಚಾರ–ಅನುಭಾವ, ಭಾರತೀಯ ದಾರ್ಶನಿಕ ಪರಂಪರೆ ಮತ್ತು ಬಸವ ದರ್ಶನ, ವಚನ ಚಳವಳಿ–ಸಾಂಸ್ಕೃತಿಕ ಮುಖಾಮುಖಿ, ರಾಜಪ್ರಭುತ್ವ, ಪ್ರಜಾಪ್ರಭುತ್ವ ಮತ್ತು ಶರಣರ ಪ್ರಜಾಪ್ರಭುತ್ವ ಹಾಗೂ ಭಾರತೀಯ ಭಕ್ತಿ ಪರಂಪರೆಯಲ್ಲಿ ಭಕ್ತಿಭಂಡಾರಿ ಬಸವಣ್ಣ ಎಂಬ ವಿಷಯಗಳ ಕುರಿತು ಪ್ರಬಂಧ ನಡೆಯಲಿದೆ. ಇನ್ನು ʼಬಸವಾದಿ ಶರಣರ ತತ್ವಗಳಿಗೆ ಸೀಮಿತವಾಗಿರತಕ್ಕದ್ದುʼ ಎಂಬ ವಿಷಯದ ಮೇಲೆ ಕವನಗಳನ್ನು ರಚಿಸುವ ಸ್ಪರ್ಧೆ ನಡೆಯಲಿದೆ.

ಹೇಗಿರಬೇಕು? ಕಳುಹಿಸುವುದು ಹೇಗೆ?

ಪ್ರಬಂಧವು 2 ಸಾವಿರ ಪದಗಳ ಮಿತಿಯಲ್ಲಿರಬೇಕು. ಕವನವು ಒಂದು ಪುಟ ಮೀರಬಾರದು. ಪ್ರಬಂಧ ಮತ್ತು ಕವನಗಳನ್ನು ಮಾರ್ಚ್‌ 31ರೊಳಗೆ competition@basavasamithi.org ಇ–ಮೇಲ್‌ಗೆ ಕಳಿಸಿಬೇಕು.

ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವವರಿಗೆ ₹25 ಸಾವಿರ, ಎರಡನೇ ಸ್ಥಾನ– ₹10 ಸಾವಿರ, ಮೂರನೇ ಸ್ಥಾನ ಪಡೆದವರಿಗೆ ₹5 ಸಾವಿರ ಹಾಗೂ ಕವನ ಸ್ಪರ್ಧೆಯಲ್ಲಿ ಅಗ್ರ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ₹10 ಸಾವಿರ, ₹5 ಸಾವಿರ ಹಾಗೂ ₹3 ಸಾವಿರ ನಗದು ಬಹುಮಾನ ನೀಡಲಾಗುವುದು.

[ಹೆಚ್ಚಿನ ಮಾಹಿತಿಗಾಗಿ

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತದೆ. ಮಾಹಿತಿಗೆ: 94489 20888, 94814 2273

Digiqole Ad

ಈ ಸುದ್ದಿಗಳನ್ನೂ ಓದಿ