• 8 ಸೆಪ್ಟೆಂಬರ್ 2024

ಸಂಶೋಧಕ, ಸಾಹಿತಿ ಕೆ ಟಿ ಗಟ್ಟಿ ಯವರಿಗೆ ಸಂತಾಪ

 ಸಂಶೋಧಕ, ಸಾಹಿತಿ ಕೆ ಟಿ ಗಟ್ಟಿ ಯವರಿಗೆ ಸಂತಾಪ
Digiqole Ad

ಸಂಶೋಧಕ, ಸಾಹಿತಿ ಕೆ ಟಿ ಗಟ್ಟಿ ಯವರಿಗೆ ಸಂತಾಪ

ಹಿರಿಯ ಸಾಹಿತಿಗಳು, ಕಾದಂಬರಿಕಾರರು, ಭಾಷಾ ತಜ್ಞರು, ನಿವೃತ್ತ ಪ್ರಾಧ್ಯಾಪಕರು ಆದ ಕೆ ಸಿ ಗಟ್ಟಿ ಕೂಡ್ಲು ತಿಮ್ಮಪ್ಪಗಟ್ಟಿ ಇವರು ಸಾಹಿತ್ಯ ಪ್ರಪಂಚವನ್ನು ಬಿಟ್ಟು ನಿಧನರಾಗಿರುತ್ತಾರೆ. ಇವರ ಅಗಲಿಕೆ ಸಾಹಿತ್ಯ ಲೋಕಕ್ಕೆ ಸಂಶೋಧನಾ ಲೋಕಕ್ಕೆ ತುಂಬಲಾರದಂತಹ ನಷ್ಟವಾಗಿದೆ.

1957ರಿಂದ ಸಾಹಿತ್ಯದ ಕೃಷಿ ಆರಂಭಿಸಿ, ಒಟ್ಟು 14 ಕಾದಂಬರಿಗಳು ಹಾಗೂ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದು ಇವರ ಸಾಧನೆಯನ್ನು ಎತ್ತಿ ಹಿಡಿಯುವಂತಾಗಿದೆ. ಇವರ ಅಗಲಿಕೆಗೆ ಕಾಸರಗೋಡು ಕನ್ನಡ ಭವನವು ಸಂತಾಪ ಸೂಚಿಸಿರುತ್ತದೆ. ಇವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸನ್ಮಾನಗಳನ್ನು ಮೂಡಿಗೆರಿಸಿಕೊಂಡ ಅಂತಹ ಅದ್ಭುತ ಸಾಹಿತ್ಯ ಕಾರರು ಕಾದಂಬರಿ ಕಾರರು .

ಕೆ ಸಿ ಗಟ್ಟಿ ಅವರ ಕುಟುಂಬಕ್ಕೂ ಸಾಹಿತ್ಯ ಅಭಿಮಾನಿಗಳಿಗೂ ಸಹಿಸಲಾರದಂತಹ ದುಃಖ ವಾಗಿದೆ ಈ ದುಃಖವನ್ನು ಸಹಿಸುವಂತಹ ಶಕ್ತಿ ಆ ದೇವರು ಎಲ್ಲಾ ಸಾಹಿತ್ಯ ಅಭಿಮಾನಿಗಳಿಗೂ ಕರುಣಿಸಲಿ. ಕನ್ನಡ ಭವನ ಕಾಸರಗೋಡಿನ ಸರ್ವ ಪದಾಧಿಕಾರಿಗಳು ಹಾಗೂ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್, ಅಧ್ಯಕ್ಷರು ಕನ್ನಡ ಭವನ ಮತ್ತು ಗ್ರಂಥಾಲಯ ರಿ. ಕಾಸರಗೋಡು ಇವರು ಸಂತಾಪವನ್ನು ಸೂಚಿಸಿರುತ್ತಾರೆ.

Digiqole Ad

ಈ ಸುದ್ದಿಗಳನ್ನೂ ಓದಿ