• 8 ಸೆಪ್ಟೆಂಬರ್ 2024

ಕರಾವಳಿ ಚಿತ್ರದ ಮುಹೂರ್ತಕ್ಕೆ ಬಂತು ಗಜಗಾತ್ರದ ಕೋಣ !

 ಕರಾವಳಿ ಚಿತ್ರದ ಮುಹೂರ್ತಕ್ಕೆ ಬಂತು ಗಜಗಾತ್ರದ ಕೋಣ !
Digiqole Ad

ಕರಾವಳಿ ಚಿತ್ರದ ಮುಹೂರ್ತಕ್ಕೆ ಬಂತು ಗಜಗಾತ್ರದ ಕೋಣ !

ಕರಾವಳಿ ಚಿತ್ರದ ಫಸ್ಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕೋಣ ಪತ್ರಿಕಾಗೋಷ್ಠಿಗೂ ಹಾಜರಾಗಿದ್ದು ವಿಶೇಷವಾಗಿತ್ತು. ಗಜಗಾತ್ರದ ಕೋಣವನ್ನ ನೋಡಿದವರೆಲ್ಲಾ ಆಶ್ಚರ್ಯ ಪಟ್ಟಿದ್ದೆ ಹೆಚ್ಚು. ಇನ್ನು ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾ ತಂಡ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿತು. ನಿರ್ದೇಶಕ ಮತ್ತು ನಿರ್ಮಾಪಕ ಗುರುದತ್ ಗಾಣಿಗ ಮಾತನಾಡಿ, ‘ಇದು ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ. ಇದು ಹಳ್ಳಿಯ ಕಥೆ. ಕಂಬಳ ಪ್ರಪಂಚದಲ್ಲಿ ನಡಿಯುತ್ತಿರುವ ಕಥೆ. ಕಂಬಳದ ಬಗ್ಗೆ ಇರಲಿದೆ. ಪ್ರಾಣಿಗಳ ಜೊತೆ ಕೆಲಸ ಮಾಡುವುದು ಎಷ್ಟು ಕಷ್ಟ, ಹೇಗೆ ಕೆಲಸ ಮಾಡಬೇಕು, ಚಿತ್ರೀಕರಣಕ್ಕೆ ಏನೆಲ್ಲಾ ತಯಾರಿ ಮಾಡಿಕೊಂಡಿದ್ದೇವೆ” ಎನ್ನುವುದನ್ನು ಸಹ ತಿಳಿಸಿದರು.

ಇನ್ನು,ಮಗನ ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ಡೈನಾಮಿಕ್ ಸ್ಟಾರ್ ದೇವರಾಜ್ ಮಾತನಾಡಿ, ಇಡೀ ತಂಡಕ್ಕೆ ಶುಭ ಹಾರೈಸುವ ಜೊತೆಗೆ ‘ಕರಾವಳಿ ನನ್ನ ಮಗನ ಕರಿಯರ್‌ನಲ್ಲೇ ಬೆಸ್ಟ್ ಸಿನಿಮಾ ಆಗಲಿದೆ. ಎಲ್ಲೇ ಹೋದರು ಕರಾವಳಿ ಚಿತ್ರದ ಬಗ್ಗೆ ಕೇಳುತ್ತಾರೆ’ ಎಂದರು. ಇನ್ನು ಕರಾವಳಿ ಸಿನಿಮಾಗೆ ನಾಯಕಿಯಾಗಿ ಸಂಪದಾ ಆಯ್ಕೆ ಆಗಿದ್ದಾರೆ. ಈಗಾಗಲೇ ಬೆಂಕಿ ಹಾಗೂ ರೈಡರ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಸಂಪದಾ, ಇದೀಗ ಕರಾವಳಿ ಸಿನಿಮಾದಲ್ಲಿ ಮಿಂಚಲಿದ್ದಾರೆ. ಚಿತ್ರದ ಬಗ್ಗೆ ಸಖತ ಎಕ್ಸೈಟ್‌ ಆಗಿರುವ ಸಂಪದಾ ಪಶುವೈದ್ಯೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಾಗೆಯೆ ,ಕರಾವಳಿ ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾರೆಮಾ ವರ್ಕ್ ಇದೆ, ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ವಿಶೇಷ ಎಂದರೆ ನಟ ಮಿತ್ರ ಕರಾವಳಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಟಿವಿ ಶ್ರೀಧರ್, ಜಿ ಜಿ, ನಿರಂಜನ್ ಇನ್ನು ಹಲವು ಪ್ರಖ್ಯಾತ ಕಲಾವಿದರು ಕರಾವಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ತಿಂಗಳು 23ರಿಂದ ಕರಾವಳಿ ಭಾಗದಲ್ಲಿ ಈ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ