• 8 ಸೆಪ್ಟೆಂಬರ್ 2024

ಕಾಣಿಯೂರು ಜಾತ್ರೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ “ಪುದಾರ್ ದೀದಾಂಡ್”

 ಕಾಣಿಯೂರು ಜಾತ್ರೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ “ಪುದಾರ್ ದೀದಾಂಡ್”
Digiqole Ad

ಕಾಣಿಯೂರು ಜಾತ್ರೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ “ಪುದಾರ್ ದೀದಾಂಡ್”

ಕಾಣಿಯೂರು ಜಾತ್ರೆಯು ಫೆ.26 ರಿಂದ ಮಾ.01ರ ತನಕ ನಡೆಯಲಿದ್ದು ಜಾತ್ರೋತ್ಸವದ ಪ್ರಯುಕ್ತ ಫೆಬ್ರವರಿ 27ರ ಮಂಗಳವಾರದಂದು ರಾತ್ರಿ ಜಾತ್ರೋತ್ಸವ ಸೇವಾ ಸಮಿತಿ ಕಾಣಿಯೂರು ಇವರ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀನಿವಾಸ ಉಪಾಧ್ಯಾಯ ಕಲ್ಪಡ ದೀಪ ಬೆಳಗಿಸಿ ಉದ್ಘಾಟಿಸಿದರು.ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ದೈವಗಳ ಪರಿಚಾರಕರಾದ ರೋಹಿತ್ ಅನಿಲ, ಪದ್ಮಯ್ಯ ಗೌಡ ಅನಿಲ,ಮಾಧವ ಗೌಡ ಕಟ್ಟತ್ತಾರು,ಕೇಶವ ಕುದ್ಕುಳಿ, ಮೋನಪ್ಪ ಗೌಡ ಮಿತ್ತಮೂಲೆ, ಜಾತ್ರೋತ್ಸವ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ನಿರಂಜನ ಅಚಾರ್,ಅಧ್ಯಕ್ಷರಾದ ವಿಶ್ವನಾಥ ಒಡಬಾಯಿ, ಕಾರ್ಯದರ್ಶಿ ರವೀಂದ್ರ ಅನಿಲ, ಕೋಶಾಧಿಕಾರಿ ದಿವಾಕರ ಬೆದ್ರಾಜೆ,ಏಲಡ್ಕ ಶಿರಾಡಿ ರಾಜನ್ ದೇವಸ್ಥಾನದ ಸಮಿತಿಯ ಕಾರ್ಯದರ್ಶಿ ಪರಮೇಶ್ವರ ಗೌಡ ಎಂ.ಪಿ,ಅಬೀರ ಕೂಡುಕಟ್ಟಿನವರ ಪರವಾಗಿ ತಿಮ್ಮಪ್ಪ ಗೌಡ ಕಾಯೆರ್ತಡಿ,ಕಲ್ಪಡ ಕೂಡುಕಟ್ಟಿನವರ ಪರವಾಗಿ ಧರ್ಮಪಾಲ ಕಲ್ಪಡ,ಪಟ್ಟೆ ಕೂಡುಕಟ್ಟಿನ ಪರವಾಗಿ ವಿಶ್ವನಾಥ ಬೆಳಂದೂರು ಉಪಸ್ಥಿತರಿದ್ದರು.ಪರಮೇಶ್ವರ ಅನಿಲ ಕಾರ್ಯಕ್ರಮ ನಿರೂಪಿಸಿದರು.ಇದೆ ವೇಳೆ ನಾಟಕ ತಂಡದ ನಿರ್ದೇಶಕರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ನಂತರ ಕಾಪಿಕಾಡ್, ವಾಮಂಜೂರು, ಬೋಳಾರ್ ಅಭಿನಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ರಚಿಸಿ ನಟಿಸಿ ನಿರ್ದೇಶಿಸಿರುವ ವಿಭಿನ್ನ ಶೈಲಿಯ ತುಳು ಹಾಸ್ಯ ಮಯ “ಪುದಾರ್ ದೀದಾಂಡ್”ನಾಟಕ ನಡೆಯಿತು.

Digiqole Ad

ಈ ಸುದ್ದಿಗಳನ್ನೂ ಓದಿ