• 8 ಸೆಪ್ಟೆಂಬರ್ 2024

ಬೆಳ್ತಂಗಡಿಯ ನಿವಾಸಿಗೆ ಕನಸಿನಲ್ಲಿ ನಾನಿದ್ದೇನೆ ಎಂದು ಇರುವ ಸ್ಥಳ ತೋರಿಸಿದ ಗೋಪಾಲಕೃಷ್ಣ ದೇವರು ! ಅಗೆದು ನೋಡಿದಾಗ ಕಾಣಿಸಿಕೊಂಡ ದೇವರು ಗೋಪಾಲ ಕೃಷ್ಣ!

 ಬೆಳ್ತಂಗಡಿಯ ನಿವಾಸಿಗೆ ಕನಸಿನಲ್ಲಿ ನಾನಿದ್ದೇನೆ ಎಂದು ಇರುವ ಸ್ಥಳ ತೋರಿಸಿದ ಗೋಪಾಲಕೃಷ್ಣ ದೇವರು ! ಅಗೆದು ನೋಡಿದಾಗ ಕಾಣಿಸಿಕೊಂಡ ದೇವರು ಗೋಪಾಲ ಕೃಷ್ಣ!
Digiqole Ad

ಬೆಳ್ತಂಗಡಿಯ ನಿವಾಸಿಗೆ ಕನಸಿನಲ್ಲಿ ನಾನಿದ್ದೇನೆ ಎಂದು ಇರುವ ಸ್ಥಳ ತೋರಿಸಿದ ಗೋಪಾಲಕೃಷ್ಣ ದೇವರು ! ಅಗೆದು ನೋಡಿದಾಗ ಕಾಣಿಸಿಕೊಂಡ ದೇವರು ಗೋಪಾಲ ಕೃಷ್ಣ!

ಭಾರತದ ಮೂಲೆ ಮೂಲೆಗಳಲ್ಲಿ ಘಟಿಸುತ್ತಿರುವ ಇಂತಹ ವಿಶಿಷ್ಟ ವಿದ್ಯಮಾನಗಳನ್ನು ಈ ದಕ್ಷಿಣ ಕನ್ನಡ ದ ಪುಣ್ಯನಾಡಲ್ಲಿ ಘಟಿಸುತ್ತಲೇ ಇದೆ

ದೇವರು ಕನಸಿನಲ್ಲಿ ಬರುವ- ಕಾಣಿಸಿಕೊಳ್ಳುವ ಹತ್ತಾರು ಕಥೆಗಳನ್ನು ನೀವೆಲ್ಲ ಕೇಳಿರಬಹುದು. ಆದರೆ ಇದು ಕಥೆಯಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ನಿಜ ಘಟನೆ. ಸ್ವತಃ ಆ ದೇವರು ಕನಸಿನಲ್ಲಿ ಬಂದು ತಾನಿರುವ ಸ್ಥಳದ ಬಗ್ಗೆ ಸೂಚನೆ ನೀಡಿ. ಅದೇ ಸ್ಥಳದಲ್ಲಿ ಅಗೆದಾಗ ದೇವರ ಮೂರ್ತಿ ದೊರೆತ ಕೌತುಕದ ಬಗ್ಗೆ ಇಲ್ಲಿದೆ ನೀವು ತಪ್ಪದೆ ಓದಬೇಕಾದ ವಿಶೇಷ ಕಥನ ಇಲ್ಲಿದೆ.

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲು ಎಂಬಲ್ಲಿ 700 ವರ್ಷಗಳ ಹಿಂದೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇರುವ ಬಗ್ಗೆ ಸ್ಥಳೀಯರು ಅಡಿಕೊಳ್ಳುತ್ತಿದ್ದರು. ಆದರೆ ಈ ಬಗ್ಗೆ ಯಾರೂ ಮುಂದುವರೆದು ಉತ್ಖನನ ಮಾಡಿರಲಿಲ್ಲ.

ಕನಸಿನಲ್ಲಿ ಕಾಣಿಸಿಕೊಂಡ ಗೋಪಾಲಕೃಷ್ಣ! ಆದರೆ ಇದೇ ಗ್ರಾಮದ ಲಕ್ಷ್ಮಣ್ ಎಂಬುವವರಿಗೆ ಅದೊಂದು ರಾತ್ರಿ ಕನಸೊಂದು ಬಿದ್ದಿತ್ತು. ತಮ್ಮ ಪಕ್ಕದ ಜಮೀನಿನಲ್ಲಿ ಗೋಪಾಲಕೃಷ್ಣನ ವಿಗ್ರಹ ಇದೇ ಭಾಗದ, ಇದೇ ದಿಕ್ಕಿನಲ್ಲಿ ಇರುವ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಕನಸು ಬಿದ್ದಿತ್ತು. ಈ ಬಗ್ಗೆ ಲಕ್ಷ್ಮಣ್ ಊರವರಲ್ಲಿ ವಿಚಾರಿಸಿದ್ದರು. ದೈವ ಪ್ರಶ್ನೆಯಲ್ಲೂ ಸಿಕ್ಕಿತ್ತು ಅದೇ ಉತ್ತರ!

ಹಿಂದೆ ಆ ಜಮೀನಿನಲ್ಲಿ ಗೋಪಾಲಕೃಷ್ಣ ದೇಗುಲ ,ಇರುವ ಬಗ್ಗೆ ಮಾತುಗಳು ಕೇಳಿಬಂದರೂ ಸಹ ಯಾರಲ್ಲೂ ಅಷ್ಟು ಸ್ಪಷ್ಟತೆ ಇರಲಿಲ್ಲ. ಕೆಲವು ವರ್ಷಗಳ ಹಿಂದೆ ದೈವದ ಬಳಿ ಪ್ರಶ್ನೆ ಇಟ್ಟಾಗಲೂ ಇದೇ ಜಮೀನನಲ್ಲಿ ದೇಗುಲ ಇರುವ ಬಗ್ಗೆ ತಿಳಿದುಬಂದಿತ್ತು.

ಆದರೆ ಆ ದೇವಸ್ಥಾನದ ಜಾಗವನ್ನು ಇತ್ತೀಚೆಗೆ ಸ್ಥಳೀಯ ಅನ್ಯಧರ್ಮೀಯ ನಿವಾಸಿಯೋರ್ವರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಭಾಗದ ಜನ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಲ್ಲಿ ಈ ವಿಚಾರವನ್ನು ತಿಳಿಸಿದ್ದು, ವಿವಾದಿತ ಜಾಗದ ದಾಖಲೆ ಪರಿಶೀಲಿಸುವ ಸಂದರ್ಭದಲ್ಲಿ ಆ ಜಾಗ ಸರಕಾರಿ ಭೂಮಿ ಎಂದು ತಿಳಿದುಬಂದಿತ್ತು.

ದೇವಸ್ಥಾನದ ಪಳಿಯುಳಿಕೆಗಳ ಬಗ್ಗೆ ಶೋಧನೆ ಈ‌ ಕಾರಣಕ್ಕಾಗಿ ಸುಮಾರು 25 ಸೆಂಟ್ಸ್ ಜಾಗವನ್ನು ಧಾರ್ಮಿಕ ದತ್ತಿ ಇಲಾಖೆಗೆ ದಾಖಲೆ ಮಾಡಲಾಗಿತ್ತು. ಈ ಜಾಗದಲ್ಲಿದ್ದ ದೇವಸ್ಥಾನದ ವಿಗ್ರಹ ಸೇರಿದಂತೆ ಇತರ ವಸ್ತುಗಳನ್ನು ಭೂಮಿ ವಶಪಡಿಸಿಕೊಂಡ ವ್ಯಕ್ತಿ ಪಾಳು ಬಾವಿಯೊಂದಕ್ಕೆ ಎಸೆದಿದ್ದರು. ವಿವಾದಿತ ಭೂಮಿ ಧಾರ್ಮಿಕ ದತ್ತಿ ಇಲಾಖೆ ಹೆಸರಿನಲ್ಲಿ ದಾಖಲೆಯಾಗುತ್ತಿದ್ದಂತೆ ಸ್ಥಳೀಯರು ಈ ಭೂಮಿಯಲ್ಲಿ ದೇವಸ್ಥಾನದ ಪಳಿಯುಳಿಕೆಗಳ ಬಗ್ಗೆ ಶೋಧನೆ ನಡೆಸಿದ್ದರು.

*ಕೊನೆಗೂ ಸಿಕ್ಕಿದ ಗೋಪಾಲಕೃಷ್ಣನ ಮೂರ್ತಿ ಕನ್ನಡ* ನಂತರ ನವೆಂಬರ್ 2023ರಲ್ಲಿ ವಿಗ್ರಹಗಳನ್ನು ಬಾವಿಗೆ ಹಾಕಲಾಗಿತ್ತು ಎನ್ನುವ ಬಾವಿಯನ್ನು ಅಗೆಯುವ ಸಂದರ್ಭದಲ್ಲಿ ಬಾವಿಯಲ್ಲಿ ಸುಮಾರು 12 ನೇ ಶತಮಾನಕ್ಕೆ ಸೇರಿದೆ ಎನ್ನಲಾದ ಗೋಪಾಲಕೃಷ್ಣ ಸ್ವಾಮಿಯ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಬಾವಿಯಿಂದ ದೇವರ ಮೂರ್ತಿಯನ್ನು ಹೊರತೆಗೆಯುತ್ತಿದ್ದಂತೆ ಸ್ಥಳದಲ್ಲಿ ಸೇರಿದ ಸ್ಥಳೀಯರು ಜಯಘೋಷಗಳನ್ನು ಹಾಕುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ತಲೆ ಎತ್ತಲಿದೆ ಹೊಸ ದೇಗುಲ ದೇವಸ್ಥಾನವಿದ್ದ 25 ಸೆಂಟ್ಸ್ ಭೂಮಿಯ ಜೊತೆಗೆ ಮತ್ತೆ 70 ಸೆಂಟ್ಸ್ ಭೂಮಿಯನ್ನು ಖರೀದಿಸಲಾಗಿದೆ. ಸ್ಥಳದಲ್ಲಿ ಶೀಘ್ರವೇ ಗೋಪಾಲಕೃಷ್ಣ ದೇವಸ್ಥಾನ ಶೀಘ್ರವೇ ನಿರ್ಮಾಣವಾಗಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ