• 8 ಸೆಪ್ಟೆಂಬರ್ 2024

2 ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಉದ್ಯೋಗ ಇಲ್ಲ: ರಾಜಸ್ಥಾನ ಕಾನೂನಿಗೆ ಸುಪ್ರೀಂ ಅನುಮೋದನೆ

 2 ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಉದ್ಯೋಗ ಇಲ್ಲ: ರಾಜಸ್ಥಾನ ಕಾನೂನಿಗೆ ಸುಪ್ರೀಂ ಅನುಮೋದನೆ
Digiqole Ad

2 ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಉದ್ಯೋಗ ಇಲ್ಲ: ರಾಜಸ್ಥಾನ ಕಾನೂನಿಗೆ ಸುಪ್ರೀಂ ಅನುಮೋದನೆ

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ರಾಜಸ್ಥಾನದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುವುದಿಲ್ಲ ಎಂಬ ಕಾನೂನನ್ನು ಸುಪ್ರೀಂ ಕೋರ್ಟ್‌ ಅನುಮೋದಿಸಿದೆ.

ರಾಜ್ಯದ 1989 ರ ಕಾನೂನು ಇದಾಗಿದೆ. ಈ ಕಾನೂನಿಗೆ ಸುಪ್ರೀಂ ಕೋರ್ಟ್‌ನ ಅನುಮೋದನೆಯ ಮುದ್ರೆ ಸಿಕ್ಕಿದೆ. ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಈ ನಿಯಮವು ತಾರತಮ್ಯರಹಿತವಾಗಿದೆ ಎಂದು ತಿಳಿಸಿದೆ.

ಇದು ನೀತಿಯ ವ್ಯಾಪ್ತಿಗೆ ಬರುತ್ತದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು ಫೆಬ್ರವರಿ 20 ರಂದು ಆದೇಶದಲ್ಲಿ ತಿಳಿಸಿದೆ.

2022, ಅಕ್ಟೋಬರ್ 12ರ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ಪೀಠವು ಎತ್ತಿಹಿಡಿದಿದೆ. ಮಾಜಿ ಸೈನಿಕ ರಾಮಜಿ ಲಾಲ್ ಜಾಟ್ ಅವರ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

Digiqole Ad

ಈ ಸುದ್ದಿಗಳನ್ನೂ ಓದಿ