• 8 ಸೆಪ್ಟೆಂಬರ್ 2024

ಬಂಟ್ವಾಳ ರೈಲು ನಿಲ್ದಾಣದ ಅಭಿವೃದ್ದಿಗೆ ಆಧುನಿಕ ಸ್ಪರ್ಶ 

 ಬಂಟ್ವಾಳ ರೈಲು ನಿಲ್ದಾಣದ ಅಭಿವೃದ್ದಿಗೆ ಆಧುನಿಕ ಸ್ಪರ್ಶ 
Digiqole Ad

ಬಂಟ್ವಾಳ ರೈಲು ನಿಲ್ದಾಣದ ಅಭಿವೃದ್ದಿಗೆ ಆಧುನಿಕ ಸ್ಪರ್ಶ 

ಬಂಟ್ವಾಳ ರೈಲು ನಿಲ್ದಾಣದ ಕೆಲಸಗಳು ಎಲ್ಲವೂ ಅಂದುಕೊಂಡಂತೆ ನಡೆದರೆ, ಪ್ರಯಾಣಿಕರಿಗೆ ಈಗಿರುವ ಸೌಲಭ್ಯಗಳು ದುಪ್ಪಟ್ಟಾಗುತ್ತವೆ. ಮುಂಗಡ ಬುಕ್ಕಿಂಗ್‌ ಸಹಿತ ಟಿಕೆಟ್‌ ಕೌಂಟರ್‌ ಸಾಕಷ್ಟು ಜಾಗದೊಂದಿಗೆ ನಿರ್ಮಾಣವಾಗಲಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವೈಟಿಂಗ್‌ ರೂಮ್‌ ಇರಲಿದೆ. ಒಂದು ಕೆಫೆಟೀರಿಯಾ ಸುಸಜ್ಜಿತವಾಗಿ ಕಾರ್ಯಾಚರಿಸಲಿದೆ.

ಬಂಟ್ವಾಳ


ಅಮೃತ ಭಾರತ್‌ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲು ನಿಲ್ದಾಣಕ್ಕೆ ಅಭಿವೃದ್ಧಿಯ ಅವಕಾಶ ದೊರಕಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಸಾಮಾನ್ಯವಾಗಿ ರೈಲು ನಿಲ್ದಾಣಗಳು ಊರ ಹೊರಗಿರುತ್ತವೆ ಎಂಬ ಮಾತಿದೆ. ಆದರೆ ಬಂಟ್ವಾಳ ರೈಲು ನಿಲ್ದಾಣ ಬಿ.ಸಿ.ರೋಡ್‌ ಪೇಟೆಯಲ್ಲೇ ಇದೆ. ಮೂಡುಬಿದಿರೆ, ಬೆಳ್ತಂಗಡಿ, ಮುಡಿಪು, ವಿಟ್ಲಭಾಗದ ಜನರಿಗೆ ಬಂಟ್ವಾಳ ರೈಲು ನಿಲ್ದಾಣ ಹತ್ತಿರ. ಬಿ.ಸಿ.ರೋಡ್‌ನ ಕೈಕುಂಜೆಯಲ್ಲಿರುವ ಈ ರೈಲು ನಿಲ್ದಾಣ ಬಿ.ಸಿ.ರೋಡ್‌ ಪೇಟೆಯಿಂದ ಕೇವಲ 800 ಮೀಟರ್‌ ದೂರದಲ್ಲಿದೆ.

ಸೀಸನ್‌ನಲ್ಲಿ ದಿನಕ್ಕೆ 600 ರಷ್ಟು ಪ್ರಯಾಣಿಕರು ಇಲ್ಲಿಗೆ ಆಗಮಿಸಿದ್ದುಂಟು. ದಿನವೊಂದಕ್ಕೆ ಸರಾಸರಿ 60 ಸಾವಿರ ರೂ. ಆದಾಯ ನೀಡುವ ರೈಲು ನಿಲ್ದಾಣದಲ್ಲೀಗ ಎರಡು ಪ್ಲಾಟ್‌ ಫಾರ್ಮ್‌, ಶೆಲ್ಟರ್‌, ರಿಸರ್ವೇಶನ್‌ ಕೌಂಟರ್‌, ಟಾಯ್ಲೆಟ್‌, ಕ್ಯಾಂಟೀನ್‌ ಇದೆ. ಆದರೆ ಬೇಕಾದದ್ದು ಬಹಳಷ್ಟು. ಹೀಗಾಗಿಯೇ ಅಮೃತ್‌ ಭಾರತ ನಿಲ್ದಾಣ ಯೋಜನೆಯಡಿ 28.49 ಕೋಟಿ ರೂಪಾಯಿಯಲ್ಲಿಈ ನಿಲ್ದಾಣ ಸಂಪೂರ್ಣ ಬದಲಾಗಲಿದೆ.

ನಾಲ್ಕು ಕ್ಯಾಟರಿಂಗ್‌ ಸ್ಟಾಲ್‌ಗಳು ಇರಲಿದ್ದು, ಪ್ರತಿಯೊಂದು ಪ್ಲಾಟ್‌ಫಾರ್ಮ್‌ಗಳಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಸ್ಟೇಶನ್‌ ಕಟ್ಟಡಕ್ಕೆ ಗ್ರಾನೈಟ್‌ ನೆಲಹಾಸು. ಇತರ ಭಾಗಕ್ಕೆ ಕಾಂಕ್ರೀಟ್‌ ಮತ್ತು ಟೈಲ್ಸ್‌ ಅಳವಡಿಕೆ, ಪ್ಲಾಟ್‌ಫಾರ್ಮ್‌ ಉದ್ದಕ್ಕೂ ಶೆಲ್ಟರ್‌, ಮಳೆ, ಗಾಳಿಯಿಂದ ರಕ್ಷಣೆ ದೊರಕಲಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ಜಾಗ, ಆಟೋಗಳಿಗೆ ಪ್ರತ್ಯೇಕ ಜಾಗ ಮೀಸಲಿರಿಸಲಾಗುವುದು. ನಿಲ್ದಾಣದ ಸುತ್ತಮುತ್ತಲೂ ಇಂಟರ್‌ಲಾಕ್‌ ನೆಲಹಾಸು ಮೂಲಕ ಸೌಂದರ್ಯವೃದ್ಧಿ, ಮಳೆ ನೀರು ಸಂರಕ್ಷಣೆಗೆ ವ್ಯವಸ್ಥೆ, ಮಳೆಕೊಯ್ಲುವ್ಯವಸ್ಥೆ ಅಳವಡಿಕೆ, ರೈಲು ನಿಲ್ದಾಣ ಸಂಪರ್ಕ ರಸ್ತೆಯ ಅಭಿವೃದ್ಧಿ ಮಾಡಲಾಗುತ್ತದೆ. ಅಲ್ಲದೆ ಸುತ್ತಮುತ್ತಲಿನ ಜಾಗಗಳ ಅಭಿವೃದ್ಧಿ ಭಾಗ್ಯ ದೊರೆಯುತ್ತದೆ. ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ತೆರಳಲು ಒಂದು ಲಿಫ್ಟ್‌ ಜತೆ 12 ಮೀಟರ್‌ ಅಗಲದ ಫೂಟ್‌ ಓವರ್‌ ಸೇತುವೆ ನಿರ್ಮಾಣವಾಗಲಿದ್ದು, ವೃದ್ಧರು, ಅಶಕ್ತರಿಗೆ ಅನುಕೂಲವಾಗಲಿದೆ. ಎಸ್ಕೆಲೇಟರ್‌, ರಾರ‍ಯಂಪ್‌ ಜತೆಯೂ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಲು ವ್ಯವಸ್ಥೆ ಅಂಗವಿಕಲರಿಂದ ವೃದ್ಧರವರೆಗೆ ನೆರವಾಗಲಿದೆ.

ಇಡೀ ರೈಲು ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ, ರೈಲುಗಳ ಮಾಹಿತಿಗಾಗಿ ಎಲ್‌ಇಡಿ ಡಿಸ್‌ಪ್ಲೇ ಅಳವಡಿಕೆಯಾಗಲಿದೆ. ಸ್ಟೇಶನ್‌ನ ಮುಖದ್ವಾರವನ್ನು ಅಂದಗೊಳಿಸುವುದು ಈ ಅಭಿವೃದ್ಧಿಯ ಪಟ್ಟಿಯಲ್ಲಿವೆ. ಈಗಾಗಲೇ ರೈಲು ನಿಲ್ದಾಣದ ವಿದ್ಯುದೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ವಿದ್ಯುತ್‌ ರೈಲು ಓಡಾಟ ಆರಂಭಗೊಂಡರೆ ಪೂರಕವಾದ ವ್ಯವಸ್ಥೆಗಳು ದೊರಕುತ್ತವೆ. ನಿಲ್ದಾಣ ಪರಿಸರದಲ್ಲಿ ಭದ್ರತೆ ಅಗತ್ಯ

ಈಗಾಗಲೇ ರೈಲು ನಿಲ್ದಾಣದ ಅಭಿವೃದ್ಧಿ ಕಾರ‍್ಯ ಆರಂಭಗೊಂಡಿದ್ದು, ಸುತ್ತಮುತ್ತಲೂ ನೇತ್ರಾವತಿ ನದಿ ವರೆಗೆ ಅಕ್ರಮ ಚಟುವಟಿಕೆಗಳು ನಡೆಯದಂತೆ ಭದ್ರತೆ ಕಲ್ಪಿಸುವ ಅಗತ್ಯವಿದೆ. ದೂರುಗಳು ಬಂದರೆ ರೈಲು ನಿಲ್ದಾಣದ ಪ್ಲಾಟ್‌ಫಾಮ್‌ರ್‍ಗೆ ಗಸ್ತು ಹೊಡೆಯುವ ರೈಲ್ವೆ ಪೊಲೀಸರು, ರಾತ್ರಿ ವೇಳೆ ಠಳಾಯಿಸುವವರನ್ನು ವಿಚಾರಿಸುವ ಅಗತ್ಯವಿದೆ.

ಕೆಲದಿನಗಳ ಹಿಂದಷ್ಟೇ ರೈಲು ನಿಲ್ದಾಣದ ಬಳಿ ನಿಲ್ಲಿಸಿದ್ದ ಆಟೊ ರಿಕ್ಷಾವೊಂದನ್ನು ನಡುರಾತ್ರಿ ಮಹಿಳೆ ಮತ್ತು ಪುರುಷನೊಬ್ಬ ಕದ್ದುಕೊಂಡು ಹೋದದ್ದು ಇನ್ನೂ ಹಸಿರಾಗಿಯೇ ಇದೆ. ಹಾಡಹಗಲೇ ಜೋಡಿಗಳ ಸಂಚಾರ, ದ್ವಿಚಕ್ರ ವಾಹನಗಳಲ್ಲಿಅನುಮಾನಾಸ್ಪದ ಸಂಚಾರ ಮಾಡುವವರೂ ಇರುವ ಕುರಿತು ಸಾರ್ವಜನಿಕರು ಬಂಟ್ವಾಳ ನಗರ ಪೊಲೀಸರ ಗಮನಕ್ಕೂ ತಂದಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ