• 7 ಸೆಪ್ಟೆಂಬರ್ 2024

ದಕ್ಷಿಣ ಕನ್ನಡದಲ್ಲಿ 400 ವರ್ಷಗಳ ನಂತರ ಈ ದೈವಕ್ಕೆ ನೇಮೋತ್ಸವ

 ದಕ್ಷಿಣ ಕನ್ನಡದಲ್ಲಿ 400 ವರ್ಷಗಳ ನಂತರ ಈ ದೈವಕ್ಕೆ ನೇಮೋತ್ಸವ
Digiqole Ad

ದಕ್ಷಿಣ ಕನ್ನಡದಲ್ಲಿ 400 ವರ್ಷಗಳ ನಂತರ ಈ ದೈವಕ್ಕೆ ನೇಮೋತ್ಸವ

ಕಟೀಲು ಬಳಿ ಕೊಂಡೇಲ ಎಂಬ ಊರಿದೆ. ಈ ಊರಿಗೆ ಸಂಬಂಧಪಟ್ಟ ದೈವ ಕೊಂಡೇಲ್ತಾಯ. ಈ ದೈವಕ್ಕೆ ಇತ್ತೀಚೆಗೆ 400 ವರ್ಷಗಳ ಬಳಿಕ ನೇಮ ನಡೆಯಿತು.ಕರಾವಳಿ ಸೀಮೆ ದೇವರಷ್ಟೇ ದೈವವನ್ನು  ನಂಬುವವರು. ಇಲ್ಲಿ ಊರು ಊರು, ಕೇರಿ, ಬೀದಿ ಬೀದಿಗಳಲ್ಲೂ ದೇವಸ್ಥಾನಗಳನ್ನು ಕಾಣಬಹುದು. ಊರೊಂದರ ಹೆಸರಿನೊಂದಿಗೆ ಗುರುತಿಸಿಕೊಂಡಿರುವ ದೈವಗಳನ್ನು ನಾವು ಇಲ್ಲಿ ಕಾಣಬಹುದು. ಜಾರಂದಾಯ, ಬಂಗಾಡಿತ್ತಾಯ, ಕನಪಾಡಿತ್ತಾಯ, ಬನ್ನಡ್ಕತ್ತಾಯ, ಕಾಂತೇರಿ ಜುಮಾದಿ ಇದೆಲ್ಲವೂ ಸಣ್ಣ ಉದಾಹರಣೆಯಷ್ಟೇ. ಇದೇ ರೀತಿ ಕಟೀಲಿನಲ್ಲಿ ಕೊಂಡೇಲ ಎಂಬ ಊರಿದೆ. ಈ ಊರಿಗೆ ಸಂಬಂಧಪಟ್ಟ ದೈವ ಕೊಂಡೇಲ್ತಾಯ. ಈ ದೈವಕ್ಕೆ ಇತ್ತೀಚೆಗೆ 400 ವರ್ಷಗಳ  ಬಳಿಕ ನೇಮ ನಡೆಯಿತು. ದೈವಕ್ಕೆ ನೇಮೋತ್ಸವ

ಕಟೀಲು ಸಮೀಪದ ಅತ್ತೂರು-ಕೊಡೆತ್ತೂರು ಕುಂಜಿರಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮದ ವೇಳೆ ಈಗಲೂ ಸಾಂಕೇತಿಕವಾಗಿ ಕೊಂಡೇಲ್ತಾಯ ದೈವದ ನೇಮ ನಡೆಯುತ್ತದೆ. ಆದರೆ ಪೂರ್ಣಪ್ರಮಾಣದಲ್ಲಿ ಕೊಂಡೇಲ್ತಾಯ ದೈವದ ನೇಮ ಕಂಡವರು ಯಾರೂ ಇಲ್ಲ. ನೇಮ ನಡೆದಿದೆ ಎನ್ನುವುದಕ್ಕೂ ಯಾವುದೇ ಸಾಕ್ಷಿಗಳಾಗಲಿ, ಪುರಾವೆಗಳಾಗಲಿ ಇಲ್ಲ. ಆದರೆ ಇತ್ತೀಚೆಗೆ ಕೊಂಡೇಲ್ತಾಯ ದೈವದ ಇರುವಿಕೆಯ ಬಗ್ಗೆ ಮನುಷ್ಯರೂಪದ ಶಿಲಾ ಮೂರ್ತಿಯೊಂದು ದೈವಜ್ಞರಿಂದ ನಡೆದದ ಪ್ರಶ್ನಾಚಿಂತನೆ ಬಳಿಕ ಜೀರ್ಣೋದ್ದಾರದ ವೇಳೆ ಪತ್ತೆಯಾಗಿತ್ತು. ಆ ಬಳಿಕ ಕೊಂಡೇಲ್ತಾಯ ದೈವಸ್ಥಾನ ಸುಂದರವಾಗಿ ಜೀರ್ಣೋದ್ಧಾರಗೊಂಡು ಕೊಂಡೇಲ್ತಾಯ ದೈವಕ್ಕೆ ನಾಲ್ಕುನೂರು ವರ್ಷಗಳ ಬಳಿಕ ಅದ್ದೂರಿಯಾಗಿ ನೇಮ ನಡೆದಿದೆ.

Digiqole Ad

ಈ ಸುದ್ದಿಗಳನ್ನೂ ಓದಿ