• 8 ಸೆಪ್ಟೆಂಬರ್ 2024

ನಯನತಾರ ಡಿವೋರ್ಸ್ ವದಂತಿ, ಕೊನೆಗೂ ಮೌನ ಮುರಿದ ನಟಿ.

 ನಯನತಾರ ಡಿವೋರ್ಸ್ ವದಂತಿ, ಕೊನೆಗೂ ಮೌನ ಮುರಿದ ನಟಿ.
Digiqole Ad

ನಯನತಾರ ಡಿವೋರ್ಸ್ ವದಂತಿ, ಕೊನೆಗೂ ಮೌನ ಮುರಿದ ನಟಿ.

ಸಿನಿಮಾ ರಂಗದಲ್ಲಿ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಆಗಿರುವ ಚೆಲುವೆ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಡಿವೋರ್ಸ್ ವಿಚಾರ ಸೋಷಿಯಲ್ ಮೀಡಿಯಾದಲ್ಲಂತೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ತಮಿಳಿನ ಬೆಸ್ಟ್ ಕಪಲ್ ಆಗಿ ಹೈಲೈಟ್ ಆಗಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಳಲ್ಲಿ ಬಿರುಗಾಳಿ ಬೀಸಿದ್ಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿತ್ತು.

ಆದರೂ ಈ ಕುರಿತಂತೆ ಇಬ್ಬರಿಂದಲು ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಈ ಸುದ್ಧಿಯನ್ನು ಓದಿದ್ದಿರಾ.? ಎರಡು ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ- ನಾರ್ತ್ ಕೊರಿಯಾ

ಸತ್ಯ ಅಥವಾ ಸುಳ್ಳು ಅಂತಾನೂ ಸ್ಪಷ್ಟ ಪಡಿಸಲಿಲ್ಲ. ಆದರೆ, ಇದೀಗ ನಯನತಾರಾ ಈ ಕುರಿತಂತೆ ರಿಯ್ಯಾಕ್ಟ್ ಮಾಡಿದ್ದಾರೆ. ಹಾರ್ಟ್ ಸಿಂಬಲ್ ಹಾಕಿ, ಅಭಿಮಾನಿಗಳ ಹಾರ್ಟ್ ಬಿಟ್ ಹೆಚ್ಚಿಸಿದ್ದಾರೆ. ಕೊಳಲು ವಾದಕರೊಬ್ಬರು ಕೊಳಲು ನುಡಿಸುತ್ತಿರುವಾಗ ಅದನ್ನು ತನ್ಮತೆಯಿಂದ ನಯನತಾರಾ
ಮತ್ತು ವಿಶ್ಲೇಶ್ ಶಿವನ್ ಕೇಳುತ್ತಿರುವ ವಿಡಿಯೋವನ್ನು
ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ನಯನತಾರಾ
ಶೇರ್ ಮಾಡುವ ಮೂಲಕ ಹಾರ್ಟ್ ಸಿಂಬಲ್ ಹಾಕಿದ್ದಾರೆ. ಅಲ್ಲಿಗೆ ತಮ್ಮ ಜೀವನದಲ್ಲಿ ಯಾವುದೇ ಡಿವೋರ್ಸ್ ಬಿರುಗಾಳಿ ಎದ್ದಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

ಈ ಸುದ್ದಿಯನ್ನು  ಓದಿದ್ದಿರಾ.? ಹನುಮಾನ್ ಚಾಲಿಸಾದ ಹಿಂದಿದೆ ಅದ್ಭುತ ದಂತ ಕಥೆ!

ಹಲವು ವರ್ಷಗಳು ಪ್ರೀತಿಸಿ, ಕಳೆದ ವರ್ಷ ಜೂನ್‌ನಲ್ಲಿ ನಯನತಾರಾ- ವಿಷ್ಟೇಶ್ ಶಿವನ್ ಅದ್ಧೂರಿಯಾಗಿ ಮದುವೆಯಾದರು. ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಖುಷಿ ಖುಷಿಯಿಂದ ಬದುಕುತ್ತಿದ್ದ ಈ ಜೋಡಿ ಈಗ ಬೇರೇ ಆಗ್ತಾರೆ ಎಂದೆಲ್ಲಾ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗ್ತಿದ್ದಂತೆ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದರು. ಇದೀಗ ಎಲ್ಲವು ಸುಖಾಂತ್ಯವಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ