• 8 ಸೆಪ್ಟೆಂಬರ್ 2024

ಭಾರತದ ಫಿಲ್ಟರ್‌ ಕಾಫಿಗೆ ವಿಶ್ವದ ಬೆಸ್ಟ್‌ ಕಾಫಿಗಳಲ್ಲಿ 2ನೇ ಸ್ಥಾನ.

 ಭಾರತದ ಫಿಲ್ಟರ್‌ ಕಾಫಿಗೆ ವಿಶ್ವದ ಬೆಸ್ಟ್‌ ಕಾಫಿಗಳಲ್ಲಿ 2ನೇ ಸ್ಥಾನ.
Digiqole Ad

ಭಾರತದ ಫಿಲ್ಟರ್‌ ಕಾಫಿಗೆ ವಿಶ್ವದ ಬೆಸ್ಟ್‌ ಕಾಫಿಗಳಲ್ಲಿ 2ನೇ ಸ್ಥಾನ.

ಕಾಫಿ ಭಾರತದಲ್ಲಿ ಅಧಿಕವಾಗಿ ಬೆಳೆದರೂ ಕೂಡ ಪ್ರಪಂಚದಾದ್ಯಂತ ಕಾಫಿ ಪ್ರಿಯರು ಹಲವರಿದ್ದಾರೆ
ಈ ಸುದ್ದಿಯನ್ನು ಕೇಳಿದ ಮೇಲೆ ಕಾಫಿ ಪ್ರಿಯರು ಇನ್ನೊಂದು ಕಪ್‌ ಕಾಫಿ ಎಕ್ಸ್ಟ್ರಾ ಕುಡಿಯೋದು ಪಕ್ಕಾ ಅನ್ಸುತ್ತೆ. ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿದಿಲ್ಲ ಅಂದ್ರೆ ಪ್ರಪಂಚವನ್ನೇ ಕಳೆದುಕೊಂಡಂತೆ ಅನಿಸುವುದು  ಸುಳ್ಳಲ್ಲ.

ಅದರಲ್ಲೂ ಫಿಲ್ಟರ್‌ ಕಾಫಿ ಕುಡಿತಾ ಇದ್ರೆ ಸ್ವರ್ಗ ಸುಖ ಎನ್ನಿಸುವುದು ಸುಳ್ಳಲ್ಲ. ಪ್ರಪಂಚದಾದ್ಯಂತ ಹಲವು ಜನರ ಮುಂಜಾನೆ ಆರಂಭವಾಗುವುದು ಸ್ವಾದಭರಿತ ಕಾಫಿಯಿಂದ.

ಈ ಸುದ್ದಿಯನ್ನು ಓದಿದ್ದೀರಾ.?ಕುಲೆ ಮದಿಮೆ: ಓಯ್ ಇದು ನಿಜ ಮಾತ್ರೆ!🤔

ಯಾಕೆಂದರೆ ಕೆಲವರಿಗೆ ಬೆಳಗೆದ್ದ ತಕ್ಷಣ ಕಾಫಿ ಕುಡಿದಿಲ್ಲ ಅಂದ್ರೆ ಪ್ರಪಂಚವನ್ನೇ ಕಳೆದುಕೊಂಡ ಅನುಭವ ಅನ್ನಿಸುವುದು. ಕಾಫಿ ಭಾರತದಲ್ಲಿ ಅಧಿಕವಾಗಿ ಬೆಳೆದರೂ ಕೂಡ ಪ್ರಪಂಚದಾದ್ಯಂತ ಕಾಫಿ ಪ್ರಿಯರು ಹಲವರಿದ್ದಾರೆ. ಸರಿ ಕಾಫಿ ಬಗ್ಗೆ ಇಷ್ಟೆಲ್ಲಾ ಮಾತು ಯಾಕೆ ಅಂತೀರಾ, ಖಂಡಿತ ವಿಷ್ಯಾ ಇದೆ.

ಭಾರತದ ಫಿಲ್ಟರ್ ಕಾಫಿ ಈಗ ವಿಶ್ವದ ಬೆಸ್ಟ್ ಕಾಫಿಗಳಲ್ಲಿ 2ನೇ ಸ್ಥಾನ ಪಡೆದಿದೆ. ಆಹಾರಗಳ ಗುಣಮಟ್ಟ ಹಾಗೂ ಜನಪ್ರಿಯತೆಯನ್ನು ಗುರುತಿಸಿ ಗೌರವಿಸುವ ಟೇಸ್ಟ್ ಅಟ್ಲಾಸ್ ಇದೀಗ ವಿಶ್ವದ 10 ಅತ್ಯುತ್ತಮ ಕಾಫಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆಫೆ ಕ್ಯೂಬಾನೊ ಅಗ್ರಸ್ಥಾನದಲ್ಲಿದ್ದರೆ, ಭಾರತದ ಫಿಲ್ಟರ್ ಕಾಫಿಗೆ ಎರಡನೇ ಸ್ಥಾನ ನೀಡಿದೆ. ಕಾಫಿಯು ವಿಶಿಷ್ಟ ಪರಿಮಳದ ಕಾಫಿ ಬೀಜಗಳಿಂದ ತಯಾರಾಗುತ್ತದೆ. ಇದನ್ನು ದಕ್ಷಿಣ ಭಾರತದ ಕಾಫಿತೋಟಗಳಲ್ಲಿ ಬೆಳೆಯುವ ಅರೇಬಿಕಾ ಹಾಗೂ ರೋಬಸ್ಟಾ ಎರಡನ್ನೂ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಇದನ್ನು ಹುರಿದು ಪುಡಿ ಮಾಡಿ ತಯಾರಿಸುವ ಫಿಲ್ಟರ್ ಕಾಫಿ ರುಚಿ ಭಿನ್ನವಾಗುತ್ತಿರುತ್ತದೆ’ ಎಂದು ಇಂಡಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಬಾಣಸಿಗರೊಬ್ಬರು ತಿಳಿಸಿದ್ದಾರೆ. ಬೇರೆ ಕಾಫಿಗಳಿಗೆ ಹೋಲಿಸಿದರೆ ಭಾರತದ ಫಿಲ್ಟರ್ ಕಾಫಿಯು ಹೆಚ್ಚು ಕೆಫಿನ್‌ ಅಂಶವನ್ನು ಹೊಂದಿರುತ್ತದೆ ಹಾಗೂ ಕೊಂಚ ಕಹಿರುಚಿ ಹೊಂದಿರುತ್ತದೆ. ಆದರೆ ಇದರ ಪರಿಮಳ, ಸ್ವಾದ ನಿಜಕ್ಕೂ ಅದ್ಭುತ. ಫಿಲ್ಟರ್ ಕಾಫಿ ತಯಾರಿಸಲು ಸಮಯವೂ ಕೊಂಚ ಹೆಚ್ಚು ಬೇಕು. ಇದು ಹಾಲು, ಸಕ್ಕರೆ, ಕಾಫಿಪುಡಿ ಮಿಶ್ರಣ ಮಾಡಿ ಕುದಿಸಿ ತಯಾರಿಸುವ ಫಿಲ್ಟರ್ ಕಾಫಿ ಕುಡಿದರೆ ನಿಜಕ್ಕೂ ವ್ಹಾವ್ ಅನ್ನೋದು ಸತ್ಯ. ಫಿಲ್ಟರ್ ಕಾಫಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ಹೃದ್ರೋಗದ ಅಪಾಯವನ್ನ ಕಡಿಮೆಗೊಳಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.
ಕಾಫಿ ಇತಿಹಾಸ

17ನೇ ಶತಮಾನದವರೆಗೆ ಕಾಫಿಯನ್ನು ಅರೇಬಿಯಾದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಅರೇಬಿಯನ್ ಕಾಪಿ ಏಕಸ್ವಾಮ್ಯವನ್ನು ರಕ್ಷಿಸಲು ಕಚ್ಚಾ ಕಾಫಿ ಬೀಜಗಳನ್ನು ಆ ದೇಶದಿಂದ ಹೊರ ತರುವುದಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಇತಿಹಾಸಗಳ ಪ್ರಕಾರ ಸೂಪಿ ಬಾಬಾ ಬುಡನ್‌ ಅವರು ಮೆಕ್ಕಾ ತೀರ್ಥಯಾತ್ರೆಗೆ ಹೋದಾಗ 7 ಕಾಫಿ ಬೀಜಗಳನ್ನು ರಹಸ್ಯವಾಗಿ ತಂದು ಚಿಕ್ಕಮಗಳೂರಿನ ಬೆಟ್ಟಗಳಲ್ಲಿ ನೆಟ್ಟರು. ಅಲ್ಲಿನ ವಾತಾವರಣಕ್ಕೆ ಕಾಫಿಗಿಡಗಳು ಚೆನ್ನಾಗಿ ಬೆಳೆಯಿತು. ಮುಂದೆ ಬಾಬಾ ಬುಡನ್ ಅವರಿಂದ ಪ್ರಪಂಚದಾದ್ಯಂತ ಕಾಫಿ ಬೆಳೆ ಬೆಳೆಯಲು ಸಾಧ್ಯವಾಯಿತು ಎಂಬ ಮಾತಿದೆ. ಹಿಂದೆಲ್ಲಾ ಕಾಫಿಗೆ ಬೆಲ್ಲ ಅಥವಾ ಜೇನುತುಪ್ಪ ಹಾಕಿ ತಯಾರಿಸುತ್ತಿದ್ದರು. 1900ರಿಂದ ಸಕ್ಕರೆ ಹಾಕಿ ಕಾಫಿ ಮಾಡುವ ಅಭ್ಯಾಸ ರೂಢಿಯಾಯಿತು.

ಈ ಸುದ್ದಿಯನ್ನು ಓದಿದ್ದೀರಾ.? ಇಲ್ಲಿ ತುಲಾಭಾರ ಸೇವೆ ನಡೆಯುವುದು ಮಂಚ್ ಚಾಕ್ಲೀಟ್ ನಿಂದ!🤓

Digiqole Ad

ಈ ಸುದ್ದಿಗಳನ್ನೂ ಓದಿ