• 8 ಸೆಪ್ಟೆಂಬರ್ 2024

ಲಾಡ್ಲೆ ಮಶಾಕ್ ದರ್ಗಾದ ಒಳಗಡೆ ಶಿವಲಿಂಗ.! ಹಿಂದೂಗಳಿಂದ ಶಿವಲಿಂಗಕ್ಕೆ ಪೂಜೆ.

 ಲಾಡ್ಲೆ ಮಶಾಕ್ ದರ್ಗಾದ ಒಳಗಡೆ ಶಿವಲಿಂಗ.! ಹಿಂದೂಗಳಿಂದ ಶಿವಲಿಂಗಕ್ಕೆ ಪೂಜೆ.
Digiqole Ad

ಲಾಡ್ಲೆ ಮಶಾಕ್ ದರ್ಗಾದ ಒಳಗಡೆ ಶಿವಲಿಂಗ.! ಹಿಂದೂಗಳಿಂದ ಶಿವಲಿಂಗಕ್ಕೆ ಪೂಜೆ.

ಲಾಡ್ಲೆ ಮಶಾಕ್ ದರ್ಗಾದ ಒಳಗಡೆ ಇರುವ ರಾಘವ ಚೈತನ್ಯ ಶಿವಲಿಂಗಕ್ಕೆ ಹಿಂದೂಗಳು ಪೂಜೆ ಸಲ್ಲಿಸಿ ಹೊರಬಂದಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಹಿಂದೂ ಮುಖಂಡರು ಪೂಜೆ ಸಲ್ಲಿಸಿದ್ದಾರೆ. ಹೈಕೋರ್ಟ್ ಪೀಠದ ಆದೇಶದಂತೆ ಶ್ರೀ ಸಿದ್ದಲಿಂಗ ಸ್ವಾಮೀಜಿ , ಕಡಗಂಚಿ ಶಿವಯೋಗಿಗಳು , ಬಿಜೆಪಿ ಶಾಸಕ ಅವಿನಾಶ್ ಜಾಧವ್ ಸೇರಿದಂತೆ 15 ಜನ ಪೂಜೆಗೆ ತೆರಳಿದ್ದರು.

ಈ ಸುದ್ದಿಯನ್ನು ಓದಿದ್ದೀರಾ.? ಜಗತ್ತಿನ ಶ್ರೀಮಂತ ಭಿಕ್ಷುಕನ ಬಗ್ಗೆ ನೀವು ಕೇಳಿದ್ದೀರಾ?😯

ಇನ್ನು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಬಂದ ನಂತರ ಮಾತನಾಡಿದ ಆಂದೋಲಾ ಸಿದ್ದಲಿಂಗ ಸ್ವಾಮಿಜಿ, ‘ ನ್ಯಾಯಾಲಯದ ಅನುಮತಿ ಪಡೆದುಕೊಂಡು ಯಶಸ್ವಿಯಾಗಿ ಪೂಜೆ ಸಲ್ಲಿಸಿದ್ದೇವೆ‌. ಗಂಗಾಪೂಜೆ, ವಿಜ್ಞೇಶ್ವರ ಪೂಜೆ ಹಾಗೂ ರುದ್ರಪೂಜೆ ನೆರವೇರಿದ್ದೇವೆ. ಆದರೆ, ರಾಘವ ಚೈತನ್ಯ ಶಿವಲಿಂಗ ಆಕ್ರಮಣದ ಯತ್ನಗಳು ನಡೆಯುತ್ತಿವೆ. ಶಿವಲಿಂಗ ಇರುವ ಸ್ಥಳವನ್ನು ಗೋರಿಯಾಗಿ ಪರಿವರ್ತಿಸಲು ಚಾದರ್ ಹಾಕಿ ಆಕ್ರಮಣಕ್ಕೆ ಜಿಹಾದಿಗಳು ಯತ್ನಿಸುತ್ತಿದ್ದಾರೆ ಎಂದರು.

ಪೊಲೀಸರೂ ಸಹ ಲ್ಯಾಂಡ್ ಜಿಹಾದ್ಗೆ ಸಪೋರ್ಟ್ ಮಾಡುತ್ತಿರುವಂತೆ ಕಾಣುತ್ತಿದೆ‌. ರಾಘವ ಚೈತನ್ಯ ಶಿವಲಿಂಗ ಇರುವ ಸ್ಥಳದಲ್ಲಿ ಸಿಕ್ಕ ಸಿಕ್ಕಲ್ಲಿ ಬ್ಯಾರಿಕೇಡಗಳನ್ನು ಹಾಕಿ ಪೂಜೆಗೆ ಅಡ್ಡಿಪಡಿಸುವ ಯತ್ನ ಮಾಡಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.? ಖತರ್ನಾಕ್ ಕಾಟ್ ಕುಲೆ!😧

ನ್ಯಾಯಾಲಯವೇ ಅನುಮತಿ ನೀಡಿರುವ ಕಾರಣ ಶಾಂತಿಯುತವಾಗಿ ಪೂಜೆ ಸಲ್ಲಿಸಲು ಪೊಲೀಸರು ನಮಗೆ ಅನುಕೂಲ ಮಾಡಬೇಕಿತ್ತು. ಪೊಲೀಸರೂ ಸಹ ಮುಸ್ಲಿಂರ ತುಷ್ಠಿಕರಣಕ್ಕಾಗಿ ನಮಗೆ ಇಕ್ಕಟ್ಟು ಸೃಷ್ಟಿಸಿದ್ದಾರೆ. ಇದೆಲ್ಲವನ್ನೂ ನಾವು ನ್ಯಾಯಾಲಯದ ಗಮನಕ್ಕೆ ತರುತ್ತೇವೆ‌.

ನ್ಯಾಯಾಂಗ ಹೋರಾಟದ ಮೂಲಕ ಮಂದಿರ ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಕಿಡಿಕಾರಿದರು. ಒಟ್ಟಿನಲ್ಲಿ ಕಳೆದ ಬಾರಿ ಘರ್ಷಣೆ ನಡೆದಂತೆ ಈ ಬಾರಿ ಅಹಿತಕರ ಘಟನೆಗಳು ಜರುಗದಂತೆ ಕಲಬುರಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ.

Digiqole Ad

ಈ ಸುದ್ದಿಗಳನ್ನೂ ಓದಿ