• 8 ಸೆಪ್ಟೆಂಬರ್ 2024

ರಾಮೇಶ್ವರಂ ಕೆಫೆ ಆರಂಭ: ಪ್ರವೇಶ ದ್ವಾರಕ್ಕೆ ಲೋಹ ಶೋಧಕ ಅಳವಡಿಕೆ

 ರಾಮೇಶ್ವರಂ ಕೆಫೆ ಆರಂಭ: ಪ್ರವೇಶ ದ್ವಾರಕ್ಕೆ ಲೋಹ ಶೋಧಕ ಅಳವಡಿಕೆ
Digiqole Ad

ರಾಮೇಶ್ವರಂ ಕೆಫೆ ಆರಂಭ: ಪ್ರವೇಶ ದ್ವಾರಕ್ಕೆ ಲೋಹ ಶೋಧಕ ಅಳವಡಿಕೆ

ಬಾಂಬ್ ಸ್ಫೋಟ ನಡೆದಿದ್ದ ರಾಮೇಶ್ವರಂ ಕೆಫೆ ಶುಕ್ರವಾರ ಪುನಃ ಆರಂಭವಾಗಿದ್ದು, ಕೆಫೆ ಪ್ರವೇಶಿಸುವ ಗ್ರಾಹಕರನ್ನು ತಪಾಸಣೆ ಮಾಡಲು ಎರಡು ಕಡೆಗಳಲ್ಲಿ ಪ್ರತ್ಯೇಕ ಲೋಹ ಶೋಧಕ ಯಂತ್ರ ಅಳವಡಿಸಲಾಗಿದೆ.

ಕೆಫೆಯ ಚಾವಣಿ ಹಾಗೂ ಇತರೆ ವಸ್ತುಗಳು ಜಖಂಗೊಂಡಿದ್ದವು. ಕೆಫೆಯನ್ನು ದುರಸ್ತಿ ಮಾಡಿ ಸರಿಪಡಿಸಿ ಆರಂಭ ಮಾಡಲಾಯಿತು.

ಶಿವರಾತ್ರಿ ದಿನದಂದು ಕೆಫೆ ಪುನಃ ಶುರು ಮಾಡಲಾಯಿತು ಎಂದು ಕೆಫೆ ಸಹ ಸಂಸ್ಥಾಪಕ ರಾಘವೇಂದ್ರರಾವ್ ಹೇಳಿದ್ದರು. ಅದರಂತೆ ವಿಶೇಷ ಪೂಜೆ ಹಾಗೂ ಹೋಮ ಮಾಡುವ ಮೂಲಕ ವ್ಯಾಪಾರ ಆರಂಭಿಸಲಾಗಿದೆ. ಗ್ರಾಹಕರು ಕೆಫೆಗೆ ಭೇಟಿ ನೀಡಿ, ಆಹಾರ ಸವಿದರು.

ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಎಲ್ಲ ಗ್ರಾಹಕರನ್ನು ತಪಾಸಣೆ ಮಾಡಿ ಒಳಗೆ ಕಳುಹಿಸಲಾಗುತ್ತಿದೆ. ಜೆ.ಪಿ. ನಗರ, ಇಂದಿರಾನಗರ ಹಾಗೂ ರಾಜಾಜಿನಗರದಲ್ಲಿರುವ ಕೆಫೆಯಲ್ಲೂ ಲೋಹ ಶೋಧಕ ಯಂತ್ರ ಅಳವಡಿಸುವುದಾಗಿ ರಾಘವೇಂದ್ರರಾವ್ ತಿಳಿಸಿದ್ದಾರೆ.

Digiqole Ad

ಪ್ರವೀಣ ಕಾಸರಗೋಡು

https://goldfactorynews.com

ಈ ಸುದ್ದಿಗಳನ್ನೂ ಓದಿ