• 8 ಸೆಪ್ಟೆಂಬರ್ 2024

ಬೆಂಗಳೂರು ಮನೆ ಕಟ್ಟದ ಸೈಟ್‌ಗಳಿಗೆ ದಂಡ 25%ಗೆ ಏರಿಕೆ?

 ಬೆಂಗಳೂರು ಮನೆ ಕಟ್ಟದ ಸೈಟ್‌ಗಳಿಗೆ ದಂಡ 25%ಗೆ ಏರಿಕೆ?
Digiqole Ad

ಬೆಂಗಳೂರು ಮನೆ ಕಟ್ಟದ ಸೈಟ್‌ಗಳಿಗೆ ದಂಡ 25%ಗೆ ಏರಿಕೆ?

ಆರ್ಥಿಕ ಸಂಪನ್ಮೂಲ ಕ್ರೋಡಿಕರಣಕ್ಕೆ ಮುಂದಾಗಿ ರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನ ಖರೀದಿಸಿ ಕಳೆದ ಬದಕ್ಕೂ ಅಧಿಕ ವರ್ಷಗಳಿಂದ ಮನೆ ಕಟ್ಟಿಕೊಳ್ಳದೆ ಖಾಲಿ ಬಿಟ್ಟಿರುವ ನಿವೇಶನಗಳ ಮೇಲೆ ತೇಕಡ 25ರಷ್ಟು ದಂಡ ವಿಧಿಸಲು ಚಿಂತನೆ ನಡೆಸಿದೆ.

ಈ ಸುದ್ದಿ ಓದಿದ್ದೀರಾ?:ಐವರ್ನಾಡು: ಸಂಜೀವಿನಿ ಮಹಿಳೆಯರಿಂದ ಕ್ಯಾಟರಿಂಗ್ ಉದ್ಯಮ

ಬಿಡಿಎ ಅಭಿವೃದ್ಧಿಪಡಿಸಿದ ಲೇಡಿಟ್‌ಗಳಲ್ಲಿ ನಿವೇ ಶನ ಖರೀದಿಸಿದ ಐದು ವರ್ಷಗಳಲ್ಲಿ ಮನೆ ನಿರ್ಮಿ ಸಬೇಕು. ಒಂದು ವೇಳೆ ಐದು ವರ್ಷ ಕಳೆದರೂ ಮನೆ ನಿರ್ಮಿಸದ ನಿವೇಶನಗಳ ಮಾಲೀಕರಿಂದ ಮಾರ್ಗಸೂಚಿ ದರದ ಮೇಲೆ ದಂಡ ವಸೂಲಿ ಮಾಡಲಾಗುತ್ತದೆ. 2020 ಆಕ್ಟೋಬರ್‌ನಲ್ಲಿ ಮಾರ್ಗಸೂಚಿ ದರದ ಮೇಲೆ ದಂಡ ವಸೂಲಿ ಮಾಡುವುದನ್ನು ಶೇ.10ರಷ್ಟು ಹೆಚ್ಚಿಗೆ ಮಾಡಲಾಗಿತ್ತು. ಅದರಂತೆ 20/30 ಸುತ್ತಳತೆಯ ನಿವೇಶನಕ್ಕೆ 75 ಸಾವಿರ, 20/30ರಿಂದ 30/40ರವರೆಗಿನ ಸುತ್ತಳತೆಯ ನಿವೇಶನಕ್ಕೆ ₹15 ಸಾವಿರ, 30/40 ರಿಂದ 40/60 ಸುತ್ತ ಳತೆಯ ನಿವೇಶನಕ್ಕೆ 1.20 ಲಕ್ಷ ಮತ್ತು 50/80 ಸುತ್ತಳತೆ ನಿವೇಶನಕ್ಕೆ 6 ಲಕ್ಷ ದಂಡ ನಿಗದಿ ಪಡಿಸಲಾಗಿತ್ತು.

ಬಿಡಿಎ ಅಭಿವೃದ್ಧಿಪಡಿಸಿದ ಲೇಡಿಟ್‌ಗಳಲ್ಲಿ ನಿವೇ ಶನ ಖರೀದಿಸಿದ ಐದು ವರ್ಷಗಳಲ್ಲಿ ಮನೆ ನಿರ್ಮಿ ಸಬೇಕು. ಒಂದು ವೇಳೆ ಐದು ವರ್ಷ ಕಳೆದರೂ ಮನೆ ನಿರ್ಮಿಸದ ನಿವೇಶನಗಳ ಮಾಲೀಕರಿಂದ ಮಾರ್ಗಸೂಚಿ ದರದ ಮೇಲೆ ದಂಡ ವಸೂಲಿ ಮಾಡಲಾಗುತ್ತದೆ. 2020 ಆಕ್ಟೋಬರ್‌ನಲ್ಲಿ ಮಾರ್ಗಸೂಚಿ ದರದ ಮೇಲೆ ದಂಡ ವಸೂಲಿ ಮಾಡುವುದನ್ನು ಶೇ.10ರಷ್ಟು ಹೆಚ್ಚಿಗೆ ಮಾಡಲಾಗಿತ್ತು. ಅದರಂತೆ 20/30 ಸುತ್ತಳತೆಯ ನಿವೇಶನಕ್ಕೆ 75 ಸಾವಿರ, 20/30ರಿಂದ 30/40ರವರೆಗಿನ ಸುತ್ತಳತೆಯ ನಿವೇಶನಕ್ಕೆ ₹15 ಸಾವಿರ, 30/40 ರಿಂದ 40/60 ಸುತ್ತ ಳತೆಯ ನಿವೇಶನಕ್ಕೆ 1.20 ಲಕ್ಷ ಮತ್ತು 50/80 ಸುತ್ತಳತೆ ನಿವೇಶನಕ್ಕೆ 6 ಲಕ್ಷ ದಂಡ ನಿಗದಿ ಪಡಿಸಲಾಗಿತ್ತು.

ಬಿಡಿಎ ಅಧ್ಯಕ್ಷರ ಕಚೇರಿ ಮುಂದೆ ರೈತ ಆತ್ಮಹತ್ಯೆಗೆ ಯತ್ನ; ಭೂಮಿ ಕೊಟ್ಟು 30 ವರ್ಷವಾದ್ರೂ ಪರಿಹಾರ ಸಿಕ್ಕಿಲ್ಲ!ಇದೀಗ ನಿವೇಶನಗಳ ಸುತ್ತಳತೆ ಆಧಾರದಲ್ಲಿ ಖಾಲಿ ನಿವೇಶನಗಳಿಗೆ ಪಾವತಿಸಲಾಗುತ್ತಿರುವ ದಂಡದ ಮೊತ್ತವನ್ನು ಶೇ.25ಕ್ಕೆ ಏರಿಸಲು ಚಿಂತನೆ ನಡೆಸಲಾಗಿದ್ದು, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಬಿಡಿಎ ಸಲ್ಲಿಸಿದೆ. ಆದರೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಶುಲ್ಕ ಮತ್ತು ದಂಡದ ಪಟ್ಟಿಯನ್ನು ಬಹಿರಂಗಪಡಿಸುತ್ತಿಲ್ಲ. ಶೀಘ್ರದಲ್ಲೇ ಖಾಲಿ ನಿವೇಶನಗಳ ದಂಡ ಹೆಚ್ಚಳವಾಗಲಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಸೂರು ಇಲ್ಲದವರಿಗೆ ಸೂರು ಒದಗಿಸುವ ಸದುದ್ದೇಶದಿಂದ ಬಿಡಿಎ ಕಡಿಮೆ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುತ್ತದೆ. ಆದರೆ, ಉಳ್ಳವರು. ಶ್ರೀಮಂತರು ಈ ನಿವೇಶನಗಳನ್ನು ಖರೀದಿಸಿ, ಮನೆ ಕಟ್ಟಿಕೊಳ್ಳದೇ ಹತ್ತಾರು ವರ್ಷಗಳನ್ನು ಖಾಲಿಯಾಗೇ ಬಟ್ಟಿರುತ್ತಾರೆ. ನಿವೇಶನಗಳಿಗೆ ಮಾರುಕಟ್ಟೆಯಲ್ಲಿ ಬೆಳೆ ಹೆಚ್ಚಾದ ನಂತರ ಮಾರಾಟ ಮಾಡಿ ಹಣಗಳಿಸುವ ದುರುದ್ದೇಶ ಅವರದ್ದು. ಇದರಿಂದ ಅರ್ಹ ಬಡವರಿಗೆ ನಿವೇಶನ ಸಿಗುತ್ತಿಲ್ಲ. ಅಲ್ಲದೇ ಖಾಲಿ ನಿವೇಶನಗಳಲ್ಲಿ ಗಿಡಗಂಟೆ ಬೆಳೆದು ಹೆಗ್ಗಣ, ಹಾವು, ಚೇಳು, ಸೊಳ್ಳೆ ಇತ್ಯಾದಿಗಳ ಆವಾಸ ತಾಣ ವಾಗುವ ಸಾಧ್ಯತೆ ಹೆಚ್ಚು. ಇದು ಅಕ್ಕಪಕ್ಕದ ಮನೆಗಳವರಿಗೂ ಸಮಸ್ಯೆ ತಂದೊಡ್ಡುತ್ತವೆ. ಹೀಗಾಗಿ, ಶೇ.10ರಷ್ಟು ದಂಡ ವಿಧಿಸಿದರೂ ಖಾಲಿ ನಿವೇಶನದಾರರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ದಂಡದ ಮೊತ್ತ ಹೆಚ್ಚಿಸುವುದು ಅನಿವಾರ್ಯ ಎಂಬ ನಿರ್ಧಾರಕ್ಕೆ ಬಿಡಿಎ ಬಂದಿದೆ ಎನ್ನಲಾಗಿದೆ.

ಬೆಂಗಳೂರಿನಾದ್ಯಂತ ಬಿಡಿಎ ನಿರ್ಮಿಸಿದ 64 ಲೇಔಟ್‌ಗಳಲ್ಲಿ ಸುಮಾರು 70 ಸಾವಿರ ನಿವೇಶನಗಳು ಖಾಲಿಯಿವೆ. ಈ ಪೈಕಿ ಸುಮಾರು 20 ಸಾವಿರ ನಿವೇಶನಗಳನ್ನು ಮಾಡುವಷ್ಟು ಜಾಗ ವ್ಯಾಜ್ಯದಿಂದ (ಲಿಟಿಗೇಷನ್‌) ಕೂಡಿದೆ. ಬಿಡಿಎ ನಿಯಮಾವಳಿಗಳ ಪ್ರಕಾರ ಈ ಹಿಂದೆ ‘ಲೀಸ್ ಕಂ ಸೇಲ್ ಡೀಡ್’ ಇತ್ತು. ನಿವೇಶನ ಹಂಚಿಕೆಯಾಗಿ ನೋಂದಣಿಯಾದ ಕೂಡಲೇ ಅದನ್ನು ಮಾರಾಟ ಮಾಡುವ ಹಕ್ಕು ಖರೀದಿದಾರರಿಗೆ ಇತ್ತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿಯಮ ರದ್ದು ಮಾಡಲಾಗಿದ್ದು, ನಿವೇಶನ ಖರೀದಿಯ ನಂತರ ಹತ್ತು ವರ್ಷಗಳವರೆಗೆ ನಿವೇಶನದ ಮಾರಾಟದ ಹಕ್ಕನ್ನು ಗ್ರಾಹಕರಿಗೆ ನೀಡದೆ ಬಿಡಿಎ ಬಳಿಯೇ ಇಟ್ಟುಕೊಳ್ಳಲು ನಿಯಮ ಜಾರಿಗೆ ತರಲಾಗಿದ್ದು, ಈಗಲು ಮುಂದುವರೆದಿದೆ.

ಈ ಸುದ್ದಿ ಓದಿದ್ದೀರಾ?:ಇನ್ನು ಮುಂದೆ ಗರ್ಭ ಗುಡಿಗೆ ಪ್ರವೇಶಿಸಿ ಹಾಸನಾಂಬೆಯ ದರ್ಶನ ಪಡೆಯುವಂತಿಲ್ಲ :

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ